No menu items!
16.4 C
Munich
Tuesday, May 5, 2026

ಇಂದಿನಿಂದ ಚಳಿಗಾಲದ ಅಧಿವೇಶನ !

Must read

ಇಂದಿನಿಂದ ಹತ್ತು ದಿನಗಳ ಕಾಲ ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಇನ್ನೂ ಈ ಅಧಿವೇಶನಕ್ಕೆ ಸುವರ್ಣ ಸೌಧ ಸಕಲ ರೀತಿಯಲ್ಲಿ ಸಜ್ಜಾಗಿದೆ. ಇಂದಿನಿಂದ ಡಿಸೆಂಬರ್ 15 ರ ವರೆಗೆ ಅಧಿವೇಶನ ನಡೆಯಲಿದೆ.

ಇನ್ನೂ ಆಡಳಿತಾರೂಢ ಪಕ್ಷವನ್ನ ಕಟ್ಟಿ ಹಾಕಲ ಬಿಜೆಪಿ ಸಕಲ ರೀತಿಯಲ್ಲಿ ಸಜ್ಜಾಗಿದೆ.ಬರಗಾಲ, ವರ್ಗಾವಣೆ ದಂಧೆ, ಗ್ಯಾರಂಟಿ ಹುಳುಕು, ವಿದ್ಯುತ್ ಬವಣೆ, ಪರೀಕ್ಷಾ ಅಕ್ರಮ, ಕಮಿಷನ್ ಕಿರುಕುಳ, ಡಿಸಿಎಂ ವಿರುದ್ಧ ಸಿಬಿಐ ತನಿಖೆ ವಾಪಸ್ ಪಡೆದ ನಿರ್ಣಯ. ಹೀಗೆ ಹತ್ತು ಹಲವು ವಿಷಯಗಳನ್ನು ಶಾಸನ ಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಕಿವಿಹಿಂಡಲು ಪ್ರತಿಪಕ್ಷ ಬಿಜೆಪಿ ತಯಾರಾಗಿದೆ. ಮೈತ್ರಿ ಪಕ್ಷ ಜೆಡಿಎಸ್ ಜತೆಗೂಡಿಯೇ ಸರ್ಕಾರದ ವಿರುದ್ಧ ತೊಡೆತಟ್ಟಲಿದೆ.

ಇದೇ ವೇಳೆ ಪ್ರತಿಪಕ್ಷಗಳ ಆರೋಪಗಳಿಗೆ ಕಾಂಗ್ರೆಸ್ ಕೂಡಾ ಸಜ್ಜಾಗಿದ್ದು,ಆಗಿಂದಾಗಲೇ ಸ್ಪಷ್ಟನೆ ನೀಡುವ ಮೂಲಕ ವಿಷಯ ವಿಸ್ತಾರ ತಡೆಯುವ ತಂತ್ರಗಾರಿಕೆ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಸಿದ್ದರಾಮಯ್ಯ, ಅಧಿವೇಶನದಲ್ಲೂ ಎದುರಾಗಲಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ತಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳಿದ್ದಾವೆ. ಉದಾಹರಣೆಗೆ, ವರ್ಗಾವಣೆ ದಂಧೆಯನ್ನು ಪ್ರತಿಪಕ್ಷ ಪ್ರಸ್ತಾಪಿಸುವುದು ನಿಚ್ಚಳ ಆಗುತ್ತಿದ್ದಂತೆ, ಬಿಜೆಪಿ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ವರ್ಗಾವಣೆಯ ಅಂಕಿಅಂಶ, ದಾಖಲೆಗಳನ್ನು ಸಂಗ್ರಹಿಸಿದ್ದು, ಪ್ರತ್ಯಸ್ತ್ರದೊಂದಿಗೆ ಸಜ್ಜುಗೊಂಡಿದ್ದಾರೆ. ಒಟ್ಟಾರೆ 10 ದಿನಗಳ ಕಾಲ ನೆಡೆಯುವ ಈ ಅಧಿವೇಶನ ಯಾವ‌ ಸ್ವರೂಪ ಪಡೆದುಕೊಳ್ಳುತ್ತೆ ಕಾದು ನೋಡಬೇಕು.

- Advertisement -spot_img

More articles

- Advertisement -spot_img

Latest article