ಇಲ್ಲಿಯವರೆಗೂ ಪುನೀತ್ ಸಮಾಧಿ ವೀಕ್ಷಣೆಗೆ ಬಂದವರೆಷ್ಟು ಗೊತ್ತಾ?

0
192

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ, 13 ದಿನ. ಆದ್ರೆ ಇನ್ನು ಆ ಸತ್ಯವನ್ನ ಒಪ್ಪೋದಕ್ಕೆ, ಅರಗಿಸಿಕೊಳ್ಳೋದಕ್ಕೆ ಯಾರಿಂದಲೂ ಸಾಧ್ಯವಾಗ್ತಾ ಇಲ್ಲ.

ಆ ನೋವಲ್ಲಿ ಅಪ್ಪು ಸಮಾಧಿ ದರ್ಶನ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಅಪ್ಪು ಅಂತಿಮ ದರ್ಶನ ಪಡೆಯಲು ಆಗದಿದ್ದವರು ಅಪ್ಪು ಸಮಾಧಿ ನೋಡಲು ಬರುತ್ತಿದ್ದಾರೆ. ಹಿರಿಯರು, ಕಿರಿಯರು, ವಿಶೆಷ ಚೇತನರು ಸೇರಿದಂತೆ ಹಲವರು ಅಪ್ಪು ಸಮಾಧಿ ನೋಡಲು ಬರ್ತಿದ್ದಾರೆ.

ಬರೀ ರಾಜ್ಯಗಳಿಂದಷ್ಟೇ ಅಲ್ಲ ಅಂತರಾಜ್ಯಗಳಿಂದಲೂ ಜನಸಾಗರವೇ ಹರಿದು ಬರುತ್ತಿದೆ. ಕಳೆದ 13 ದಿನದಲ್ಲಿ 2 ಲಕ್ಷದ 26 ಸಾವಿರ ಜನ ಅಪ್ಪು ಸಮಾಧಿ ವೀಕ್ಷಣೆಗೆ ಬಂದಿದ್ದಾರೆ. ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ. ಅಪ್ಪು ಸಮಾಧಿಗೆ ಹಾರ ಹಾಕಿ ನಮನ ಸಲ್ಲಿಸಿದ್ದಾರೆ.