No menu items!
11.1 C
Munich
Wednesday, April 29, 2026

ಉಸೈನ್ ಬೋಲ್ಟ್ ಆರ್ ಸಿಬಿ ಫ್ಯಾನ್ !

Must read

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಎಲ್ಲ ತಂಡಗಳು ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ತನ್ನ ಜೆರ್ಸಿಯನ್ನು ಬದಲಾಯಿಸಿದ್ದು ಹೊಸ ಜರ್ಸಿ ಬಿಡುಗಡೆ ಮಾಡಿದೆ.

 

 

ಆರ್ ಸಿಬಿ ತಂಡದ ಹೊಸ ಜೆರ್ಸಿಯನ್ನು ತಂಡದ ಆಟಗಾರರು ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕೇವಲ ಆರ್ ಸಿಬಿ ತಂಡದ ಆಟಗಾರರು ಮಾತ್ರವಲ್ಲದೆ ವಿಶ್ವವಿಖ್ಯಾತಿಯನ್ನು ಪಡೆದಿರುವ ರನ್ನರ್ ಉಸೇನ್ ಬೋಲ್ಟ್ ಅವರು ಸಹ ಆರ್ ಸಿಬಿಯ ಹೊಸ ಜರ್ಸಿಯನ್ನು ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಉಸೇನ್ ಬೋಲ್ಟ್ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಉಸೇನ್ ಬೋಲ್ಟ್ ಕೂಡ ಆರ್ ಸಿಬಿ ತಂಡದ ಫ್ಯಾನ್ ಎಂದು ಚರ್ಚೆಗಳಾಗುತ್ತಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article