No menu items!
13.9 C
Munich
Wednesday, April 29, 2026

ಕನ್ನಡದ ಸ್ಟಾರ್ ನಟನ ಸಿನಿಮಾಗೆ ಮಂಗ್ಲಿ ಆಯ್ಕೆ

Must read

ರಾಬರ್ಟ್ ಚಿತ್ರದ ಕಣ್ಣೆ ಅದಿರಿಂದಿ ತೆಲುಗು ಹಾಡು ಯಾರೂ ಊಹಿಸದಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಗಿತ್ತು. ಈ ಹಾಡಿಗೆ ದನಿ ನೀಡಿದ್ದು ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ. ರಾಬರ್ಟ್ ತೆಲುಗು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಂಗ್ಲಿ ಕಣ್ಣೆ ಅದಿರಿಂದಿ ಹಾಡನ್ನು ವೇದಿಕೆಯ ಮೇಲೆ ಹಾಡುವುದರ ಮೂಲಕ ಟ್ರೆಂಡ್ ಹುಟ್ಟು ಹಾಕಿದ್ದರು.

 

ತದನಂತರ ಕರ್ನಾಟಕದಲ್ಲಿಯೂ ಈ ಹಾಡು ದೊಡ್ಡ ಮಟ್ಟದಲ್ಲಿ ಫೇಮಸ್ ಆಯಿತು. ಕನ್ನಡದ ಕಣ್ಣು ಹೊಡಿಯಾಕ ಹಾಡಿಗಿಂತಲೂ ತೆಲುಗಿನ ಕಣ್ಣೇ ಅದಿರಿಂದಿ ಹಾಡು ಕರ್ನಾಟಕದಲ್ಲಿ ಫೇಮಸ್ ಆಯಿತು. ಕರ್ನಾಟಕದಲ್ಲಿ ಇತ್ತೀಚೆಗಷ್ಟೆ ಚುನಾವಣಾ ಪ್ರಚಾರಕ್ಕೂ ಮಂಗ್ಲಿ ಅವರನ್ನು ಕರೆಸುವ ಮಟ್ಟಿಗೆ ಅವರು ಕರ್ನಾಟಕದಲ್ಲಿ ಫೇಮಸ್ ಆಗಿಬಿಟ್ಟಿದ್ದಾರೆ.

 

 

ಇದೀಗ ಮಂಗ್ಲಿ ಜನಪ್ರಿಯತೆ ಕರ್ನಾಟಕದಲ್ಲಿ ಮತ್ತೊಂದು ಹಂತಕ್ಕೆ ಹೋಗಿದ್ದು ಶಿವರಾಜ್ ಕುಮಾರ್ ಅಭಿನಯದ ಚಿತ್ರವೊಂದರಲ್ಲಿ ಮಂಗ್ಲಿ ಅಭಿನಯಿಸಲಿದ್ದಾರೆ. ಹೌದು ತೆಲುಗಿನ ನಿರ್ದೇಶಕ ರಾಮ್ ಧುಲಿಪುಡಿ ಶಿವಣ್ಣನಿಗೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಂಗ್ಲಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಶಿವಣ್ಣನ ಜೊತೆ ಮಂಗ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಅಂದಹಾಗೆ ಮಂಗ್ಲಿಗೆ ಅಭಿನಯ ಹೊಸದೇನಲ್ಲ ಈಗಾಗಲೇ ಲಂಬಾಣಿ ಸಿನಿಮಾವೊಂದರಲ್ಲಿ ನಾಯಕಿಯಾಗಿ ಅಭಿನಯಿಸಿರುವ ಅನುಭವವಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article