ಕನ್ನಡಿಗ ಜಿಆರ್ ಗೋಪಿನಾಥ್ ಅವರ ಕಥೆಯನ್ನು ತಮಿಳಿನಲ್ಲಿ ಸೂರರೈ ಪೋಟ್ರು ಎಂದು ಸಿನಿಮಾ ಮಾಡಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಜಿಆರ್ ಗೋಪಿನಾಥ್ ಅವರ ಪಾತ್ರವನ್ನು ತಮಿಳು ನಟ ಸೂರ್ಯ ಅವರು ನಿರ್ವಹಿಸಿದ್ದರು. ಕನ್ನಡಿಗನ ಹೋರಾಟದ ಕಥೆಗೆ ಇಡೀ ಭಾರತವೇ ಫಿದಾ ಆಗಿದ್ದು ಸುಳ್ಳಲ್ಲ.
ಕನ್ನಡಿಗನೊಬ್ಬ ಕಡಿಮೆ ಖರ್ಚಿನಲ್ಲಿ ವಿಮಾನಯಾನವನ್ನು ಆರಂಭಿಸಿ ಬಡವರು ಸಹ ವಿಮಾನದಲ್ಲಿಯೇ ಹಾರಾಡುವ ಹಾಗೆ ಆಗಬೇಕು ಎಂಬ ಕನಸನ್ನು ಕಂಡಿದ್ದ. ಈಕನಸು ಹೇಗೆ ನನಸಾಯಿತು ಎಂಬುವುದೇ ಸೂರರೈ ಪೋಟ್ರು ಕಥೆ. ಸಿನಿಮಾ ಮೂಲಕ ಮನಗೆದ್ದಿದ್ದ ಸೂರರೈ ಪೋಟ್ರು ಇದೀಗ ಆಸ್ಕರ್ ಅವಾರ್ಡ್ ಗೆ ತನ್ನ ಹೆಜ್ಜೆಯನ್ನು ಇಟ್ಟಿದೆ.
ಹೌದು ವಿವಿಧ ಕ್ಯಾಟಗರಿ ಅಡಿಯಲ್ಲಿ ಸೂರರೈ ಪೋಟ್ರು ಆಸ್ಕರ್-ಗೆ ನಾಮಿನೇಷನ್ ಅನ್ನು ಪಡೆದುಕೊಂಡಿದೆ. ಉತ್ತಮ ನಾಯಕ, ಉತ್ತಮ ನಾಯಕಿ, ಉತ್ತಮ ನಿರ್ದೇಶಕ ಮತ್ತು ಉತ್ತಮ ಹಿನ್ನೆಲೆ ಸಂಗೀತ ನಿರ್ದೇಶಕ ಇಷ್ಟು ಕೆಟಗರಿ ಗಳಲ್ಲಿ ಸೂರರೈ ಪೋಟ್ರು ನಾಮನಿರ್ದೇಶನಗೊಂಡಿದೆ. ಆಸ್ಕರ್ ರೇಸ್ ನಲ್ಲಿ ಇರುವ ಸೂರರೈ ಪೋಟ್ರು ಆಸ್ಕರ್ ವಿಜಯಸಾಧಿಸಿ ಬರಲಿದೆಯೇ ಕಾದು ನೋಡಬೇಕು.
ಒಟ್ಟಿನಲ್ಲಿ ಕನ್ನಡಿಗನೊಬ್ಬನ ಕಥೆ ಆಸ್ಕರ್ ಹಂತದವರೆಗೂ ಹೋಗಿರಬಹುದು ಕೃಷಿಯ ಮತ್ತು ಹೆಮ್ಮೆಯ ಸಂಗತಿಯೇ ಹೌದು..