No menu items!
12.1 C
Munich
Wednesday, May 20, 2026

ಸಿನಿಪ್ರೇಕ್ಷಕರಿಗೆ ಇದು ಗುಡ್ ನ್ಯೂಸ್!

Must read

ಕೊರೊನಾ ವೈರಸ್ ಹಾವಳಿಯಿಂದಾಗಿ ಚಿತ್ರಮಂದಿರಗಳು ಮತ್ತೆ ತೆರೆದರು ಸಹ ಸಂಪೂರ್ಣ ಭರ್ತಿ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿರಲಿಲ್ಲ. ಇತ್ತೀಚಿಗೆ ಮಾಸ್ಟರ್, ಕ್ರ್ಯಾಕ್ ನಂತಹ ದೊಡ್ಡ ಪರಭಾಷಾ ಸಿನಿಮಾಗಳು ಬಿಡುಗಡೆಯಾದವು. ಚಿತ್ರಮಂದಿರದಲ್ಲಿ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ ಇತ್ತು. ತಮಿಳು ನಟ ವಿಜಯ್ ಸಂಪೂರ್ಣ ಚಿತ್ರಮಂದಿರ ತೆರೆಯಲು ಅವಕಾಶ ಕೊಡಿ ಅರ್ಜಿಯನ್ನು ಹಾಕಿದರು ಸಹ ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ..

 

 

ಇನ್ನು ಇದೀಗ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಂಡಿದ್ದು ಹೊಸದೊಂದು ನಿರ್ಧಾರವನ್ನ ಹೊರಡಿಸಿದೆ. ಹೌದು ಫೆಬ್ರವರಿ ತಿಂಗಳಿನಿಂದ ಭಾರತದಲ್ಲಿರುವ ಎಲ್ಲಾ ಚಿತ್ರಮಂದಿರಗಳಲ್ಲೂ ಸಹ ಸಂಪೂರ್ಣ ಭರ್ತಿಗೆ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಕನ್ನಡದ ನಟ ಅನಿಶ್ ಅಭಿನಯದ ರಾಮಾರ್ಜುನ ಚಿತ್ರ ಈ ಅವಕಾಶವನ್ನು ಬಳಸಿಕೊಳ್ಳಲಿರುವ ಮೊದಲ ಸಿನಿಮಾವಾಗಲಿದೆ.

 

 

ಇನ್ನು ಮುಂದೆ ಬಿಡುಗಡೆಯಾಗಲಿರುವ ಎಲ್ಲಾ ಚಿತ್ರಗಳಿಗೂ ಸಹ ತುಂಬಿದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶಿಸುವ ಅವಕಾಶ ಲಭಿಸಿದೆ. ಇನ್ನು ಕನ್ನಡದಲ್ಲಿ ಸಾಲುಸಾಲು ಕನ್ನಡ ಸಿನಿಮಾಗಳು ಬಿಡುಗಡೆಗೆ ಕಾಯುತ್ತಿದ್ದವು. ಇದೀಗ ಆ ಚಿತ್ರಗಳಿಗೆ ಸುವರ್ಣಾವಕಾಶ ಒದಗಿ ಬಂದಿದೆ. ಈಗಾಗಲೇ ಬಿಡುಗಡೆಯ ದಿನಾಂಕಗಳನ್ನು ಘೋಷಣೆ ಮಾಡಿರುವ ಕನ್ನಡ ಸಿನಿಮಾಗಳೆಲ್ಲ ತುಂಬಿದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article