ಕಮ್ಯುನಿಕೇಷನ್ ಸ್ಕಿಲ್ ಡೆವಲಪ್ ಮಾಡಿಕೊಳ್ಳೋದು ಹೇಗೆ?

0
126

ಕಮ್ಯುನಿಕೇಶನ್ ಸ್ಕಿಲ್ ತುಂಬಾ ಮುಖ್ಯ.‌ ಈ ಕಾಂಪಿಟೇಟಿವ್ ವರ್ಲ್ಡ್ ನಲ್ಲಿ ಎಷ್ಟೇ ಬುದ್ಧಿವಂತರಾಗಿದ್ರೂ ಕಮ್ಯುನಿಕೇಷನ್ ಸ್ಕಿಲ್ ಇಲ್ದೆ ಇದ್ರೆ ನೋ ಯೂಸ್.

ಕಮ್ಯುನಿಕೇಶನ್ ಸ್ಕಿಲ್ ಹೆಚ್ಬೇಕು ಅಂದ್ರೆ ಈ ಕೆಳಗಿನ ಸೂತ್ರಗಳನ್ನು ಫಾಲೋ‌ ಮಾಡಿ

* ನಿಮ್ಮದೇ ಅಭಿಪ್ರಾಯ ಹೊಂದಿರೋ ಜೊತೆ ಬೆರೀರಿ. ಇಬ್ರು ಒಬ್ಬರೊಬ್ಬರಿಗಕ್ಲೋಸ್‌ ಆದಾಗ ಉತ್ತಮ ಕೌಶಲ್ಯ ಬೆಳೆಸಿಕೊಳ್ಬಹುದು.‌

* ಸುಮ್ನೆ ಬಾಯಿಗೆ ಬಂದಹಾಗೆ ಮಾತಾಡೋಕೆ ಹೋಗ್ಬೇಡಿ. ಯಾವ್ದೇ ವಿಚಾರದ ಬಗ್ಗೆ ಮಾತಾಡುವಾಗ ಆ ವಿಷ್ಯದ ಬಗ್ಗೆ ತಿಳಿಸಿಕೊಂಡು ಮಾತಾಡಿ. ಆಗ ಕಮ್ಯುನಿಕೇಷನ್ ಸ್ಕಿಲ್ ಡೆವಲಪ್ ಆಗುತ್ತೆ.

 

* ಕೇಳಿಸಿಕೊಳ್ಳೋದನ್ನು ಕಲೀರಿ : ನೀವು ಉತ್ತಮ‌ ವಾಗ್ಮಿ, ಸಂವಹನಕಾರ ಆಗ್ಬೇಕು ಅಂತಾದ್ರೆ ಮೊದಲು ಉತ್ತಮ ಕೇಳುಗ ಆಗ್ಬೇಕು.

* ಅವಲಂಭಿ ಆಗ್ಬೇಡಿ : ಗೊತ್ತಿಲ್ದೆ ಇರೋದನ್ನು ಬೇರೆ ಅವರತ್ರ ಕೇಳೋದು ತಪ್ಪಲ್ಲ. ಹಾಗಂತ ಬೇರೆಯವರನ್ನೇ ಅವಕಂಭಿಸಿದ್ರೆ ನೀವು ಕಲಿಯಲ್ಲ. ಹಾಗಾಗಿ ನೀವೇ ಕಲಿಯೋದನ್ನು , ಸ್ವಯಂ ಕಲಿಕೆಯನ್ನು ಅಭ್ಯಾಸ ಮಾಡ್ಕೊಳ್ಳಿ. ಆಗ ವಿಷ್ಯ ತಲೇಲಿ ಇರುತ್ತೆ. ಆಗ ನೀವು ಆರಾಮಾಗಿ ಮಾತಾಡ್ಬಹುದು.

 

 

 

* ಹಾಗೆಯೇ ಮಾತಾಡುವಾಹ ಅಕಸ್ಮಾತ್ ತಪ್ಪಾದ್ರು , ತಪ್ಪಾಗಲಿ, ಕೂಡಲೇ ಸರಿಪಡಿಸಿಕೊಳ್ಳಿ.

ಹೀಗೆ ಮಾಡಿದ್ರೆ ನೀವು ಒಳ್ಳೆಯ ರೀತೀಲಿ, ಎಲ್ಲರಿಗೂ ಇಷ್ಟವಾಗೋ ರೀತಿಲಿ, ಅರ್ಥವಾಗೋ ರೀತಿಲಿ ಸಂವಹನ ಮಾಡ್ಬಹುದು.

ಲವ್ ಬ್ರೇಕಪ್ ಆದ್ಮೇಲೆ ಈ ತಪ್ಪುಗಳು ಬೇಡ..!

ಬ್ರೇಕಪ್ಗಳು ನೋಯಿಸುತ್ತವೆ ಮತ್ತು ಸಾಯಿಸುತ್ತವೆ. ಬ್ರೇಕಪ್ ಆದಾಗಲೇ ಪ್ರೀತಿಯ ನೋವು ಏನು ಅಂತ ಅರ್ಥ ಆಗುವುದು. ಆದರೆ ಇದೊಂದು ತುಂಬಾ ಸಂಕಷ್ಟಕರ ಪರಿಸ್ಥಿತಿ. ಯಾರು ಯಾರಿಗೆ ನೋವು ಮಾಡಿ ಹೋಗಿರುತ್ತಾರೋ ಗೊತ್ತಿಲ್ಲ. ತೊರೆದು ಹೋದವರ ಸ್ಥಿತಿಗಿಂತ ಮೋಸ ಅನುಭವಿಸುವವರ ಸಂಕಟ ದೊಡ್ಡದು.

ಒಂದು ಕಡೆ ಕೋಪ, ಮತ್ತೊಂದೆಡೆ ಬೇಸರ, ಎಲ್ಲದರಲ್ಲೂ ನಿರುತ್ಸಾಹ, ಜೀವನವೇ ಬೇಡ ಅನ್ನಿಸುವ ನಿರಾಶೆ ಎಲ್ಲವೂ ಕಾಡುತ್ತಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಇಂಥಾ ಸಂಕಟದಲ್ಲಿ ಮುಳುಗಿರುವವರು ಕೆಲವು ತಪ್ಪುಗಳನ್ನು ಮಾಡುವುದಿದೆ. ಇಡೀ ಜಗತ್ತು ಸೋಷಲ್ ಮೀಡಿಯಾದಲ್ಲಿ ಮುಳುಗಿರುವಾಗ ಇವೆಲ್ಲಾ ಸಹಜ. ಗೊತ್ತಿದ್ದೋ ಗೊತ್ತಿಲ್ಲದೆಯೋ ಬ್ರೇಕಪ್ ಆದವರು ಮಾಡುವ ತಪ್ಪುಗಳ ಪಟ್ಟಿಇಲ್ಲಿದೆ. ಈ ತಪ್ಪುಗಳು ಆಗದೇ ಇದ್ದರೆ ಜೀವನ ಸ್ವಲ್ಪ ಚೆನ್ನಾಗಿರುತ್ತದೆ.
ಬ್ರೇಕಪ್ ಆಯಿತು ಅಂದ ತಕ್ಷಣ ಆ ಸಂಗತಿ ಇಡೀ ಜಗತ್ತಿಗೆ ಗೊತ್ತಾಗಬೇಕಿಲ್ಲ. ನಿಮ್ಮ ಕುಟುಂಬಕ್ಕೆ, ಫ್ರೆಂಡ್ಸ್ಗೆ ಆಗಲೇ ಗೊತ್ತಾಗಿರುತ್ತದೆ. ಇನ್ನು ಬೇರೆಯವರಿಗೆ ಗೊತ್ತಾಗಿ ಏನಾಗಬೇಕು. ನಿಮ್ಮ ಕಷ್ಟಕ್ಕೆ ಒತ್ತಾಸೆ ಯಾರೂ ಆಗುವುದಿಲ್ಲ. ನಿಮ್ಮ ಸ್ಟೇಟಸ್ ಬದಲಾದ ತಕ್ಷಣ ನಿಮ್ಮ ಬಗ್ಗೆ ಗಾಸಿಪ್ಗಳು ಶುರುವಾಗುತ್ತದೆ. ಹಾಗಾಗಿ ಸ್ಟೇಟಸ್ ಹಾಗೆಯೇ ಇರಲಿ. ಎಲ್ಲವೂ ಸರಿಹೋದ ಮೇಲೆ ಸ್ಟೇಟಸ್ ತನ್ನಿಂತಾನೇ ಬದಲಾಗುತ್ತದೆ.
ಬ್ರೇಕಪ್ ಆಯಿತು ಅಂದಾಗ ಯಾರಾದರೂ ಬಂದು ಇನ್ನೊಬ್ಬರನ್ನು ಹುಡುಕು ಅನ್ನೋ ಸಲಹೆ ಕೊಟ್ಟೇ ಕೊಡುತ್ತಾರೆ. ಅದರಲ್ಲೂ ಆನ್ಲೈನ್ ಡೇಟಿಂಗ್ ಮಾಡು ಅನ್ನೋ ಸಲಹೆ ಬೇಜಾನ್ ಸಿಗುತ್ತದೆ. ಅದಕ್ಕೆ ಎರಡು ಕಾರಣ ಒಂದು ಹಳೆಯ ಸಂಬಂಧದ ನೆನಪುಗಳಿಂದ ಆಚೆ ಬರಬೇಕು ಅನ್ನುವುದು.

ಇನ್ನೊಂದು ತೊರೆದು ಹೋದವರಿಗೆ ಅಸೂಯೆಯಾಗಲಿ ಎಂಬ ಉದ್ದೇಶಕ್ಕೆ. ಆದರೆ ಆನ್ಲೈನ್ ಡೇಟಿಂಗ್, ಚಾಟಿಂಗ್ನಿಂದ ಅವೆರಡೂ ನೆರವೇರುವುದಿಲ್ಲ.
ಬ್ರೇಕಪ್ ಆದ ನಂತರ ಒಂದು ಅಭ್ಯಾಸ ತನ್ನಿಂತಾನೇ ರೂಢಿಯಾಗಿರುತ್ತದೆ. ಅದೇನೆಂದರೆ ತೊರೆದು ಹೋದವರ ಸೋಷಲ್ ಮೀಡಿಯಾ ಅಕೌಂಟ್ಗಳನ್ನು ನೋಡೋದು. ಅವರೇನು ಮಾಡುತ್ತಿದ್ದಾರೆ, ಅವರ ಹೊಸ ಸಂಗಾತಿ ಹೇಗಿದ್ದಾರೆ ಎಂಬುದನ್ನೆಲ್ಲಾ ನೋಡುವುದು ಒಂದು ಚಟವಾಗುತ್ತದೆ.
ಅದನ್ನು ನೋಡುತ್ತಾ ನೋಡುತ್ತಾ ನಮಗೆ ನಾವೇ ಹರ್ಟ್ ಮಾಡಿಕೊಳ್ಳುತ್ತಿರುತ್ತೇವೆ ಅನ್ನುವುದು ನಮಗೆ ಗೊತ್ತೇ ಆಗುವುದಿಲ್ಲ. ಆ ಸಂಬಂಧದಿಂದ ಹೊರಗೆ ಬರಬೇಕಾದರೆ ನಮ್ಮ ಜೀವನದಿಂದ ಪೂರ್ತಿ ಅವರನ್ನು ಆಚೆಗಿಡಬೇಕು. ಅವರು ಏನು ಮಾಡಿದರೂ ಅದು ನಿಮಗೆ ಸಂಬಂಧ ಪಟ್ಟಿದ್ದಲ್ಲ ಅನ್ನುವುದು ಅರ್ಥ ಮಾಡಿಕೊಳ್ಳಬೇಕು.
ತಕ್ಷಣ ಹೊಸ ಸಂಗಾತಿ ಜೊತೆ ನಿಂತು ಪೋಟೋ ತೆಗೆದು ಪೋಸ್ಟ್ ಮಾಡುವ ಕೆಲಸವನ್ನಂತೂ ಮಾಡಲೇಬಾರದು. ಹಳೆಯ ಸಂಬಂಧವನ್ನು, ಸಂಗಾತಿಯನ್ನು ಗೌರವಿಸುವುದು ಕೂಡ ಜೀವನದ ಒಂದು ಭಾಗ. ಹಾಗೆ ಮಾಡಿದ ತಕ್ಷಣ ಹಳೆಯ ಸಂಗಾತಿಗೆ ನೋವಾಗುತ್ತದೆ. ಒಮ್ಮೆ ನಿಮ್ಮ ಸಂಗಾತಿ ನಿಮಗೆ ಹಾಗೆ ಮಾಡಿದರೆ ನಿಮಗೆ ಏನನ್ನಿಸಬಹುದು ಅಂತ ಯೋಚಿಸಿ ನೋಡಿ. ಫೋಟೋ ಅಪ್ಲೋಡ್ ಮಾಡುವಾಗ ದ್ವೇಷ ತೀರಿಸಿಕೊಂಡ ಸಮಾಧಾನ ಸಿಗಬಹುದು. ಆದರೆ ಆಮೇಲಾಮೇಲೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಸ್ವಲ್ಪ ದಿನ ಮೌನ ಎಲ್ಲಕ್ಕೂ ಒಳ್ಳೆಯದು.


ಬ್ರೇಕಪ್ ಆಗಿದೆ. ಆಗಿ ಹೋಯಿತು ಅಷ್ಟೇ. ನೋವಾಗತ್ತೆ, ನೋವು ಅನುಭವಿಸಬೇಕು. ಹಾಗಂತ ಎಲ್ಲವೂ ಸರಿ ಇದೆ ಅಂತ ಸೋಷಲ್ ಮೀಡಿಯಾದಲ್ಲಿ ಪೋಸ್ ಕೊಡಬೇಕಿಲ್ಲ. ಬೇಸರವಾಗಿದ್ದರೂ ಅದನ್ನು ಸೋಷಲ್ ಮೀಡಿಯಾದಲ್ಲಿ ತೋರಿಸಿಕೊಳ್ಳಬೇಕಿಲ್ಲ.

LEAVE A REPLY

Please enter your comment!
Please enter your name here