ಅವತ್ತು ಇವರೆಲ್ಲಾ ಅದೆಂಥಾ ಅವಮಾನಗಳನ್ನು ಎದುರಿಸಿದ್ರು..!?

0
100

ಅವತ್ತು ಇವರೆಲ್ಲಾ ಅದೆಂಥಾ ಅವಮಾನಗಳನ್ನು ಎದುರಿಸಿದ್ರು..!?

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಯಾವತ್ತಿಗೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ..! “ಜನ ತುಂಬಾನೇ ನಮ್ಮನ್ನ ಜಡ್ಜ್ ಮಾಡ್ತಾ ಇರ್ತಾರೆ..! ಹಿಡಿದು ಮುಟ್ಟಿದ್ದಕ್ಕೂ ಕಾಮೆಂಟ್ ಕೊಡ್ತಾ ಇರ್ತಾರೆ..! ಆ ಟೈಮ್ನಲ್ಲಿ ನಾವು ತುಂಬಾ ಬೇಜಾರಾಗ್ತೀವಿ..! ಅವರ ಮಾತಿನಿಂದ ನಮ್ಮ ಆತ್ಮವಿಶ್ವಾಸ, ಛಲವನ್ನೂ ಕಳೆದುಕೊಳ್ಳುವ ಅಪಾಯವೂ ಇರುತ್ತೆ..! ಆದ್ರೆ ಸಾರ್, ಯಾವತ್ತೂ, ಎಂಥಹಾ ಟೈಮ್ನಲ್ಲೂ ಎದೆಗುಂದ ಬಾರ್ದು, ಅವರ ಮಾತಿಗೆ ಮರು ಮಾತನ್ನೂ ಸಹ ಆಡೋಕೆ ಹೋಗ್ಬಾರ್ದು..! ಅವರು ನಮ್ಮ ವಾದಕ್ಕೆ, ನಮ್ಮ ಜೊತೆ ಮಾತನಾಡಲಿಕ್ಕೆ ಯೋಗ್ಯರಲ್ಲ ಅಂತ ನಾವೇ ಸುಮ್ಮನೇ ಆಗ್ಬೇಕು..! ಆದ್ರೆ ಅವರ ವಿರುದ್ಧ ಸೇಡನ್ನೂ ತೀರಿಸಿಕೊಳ್ಳೋದನ್ನ ಮರೆಯಲೇ ಬಾರ್ದು..! ನಮ್ಮನ್ನು ಅವಮಾನಿಸಿದವರ ಮೇಲೆ ಸೇಡು ತೀರಿಸಿಕೊಳ್ಳಬೇಕು ಅಂದ್ರೆ ನಾವು ಗೆಲ್ಲಬೇಕು..! ಗೆದ್ದು ಅವರಿಗೆ ನಾವೇನು ಅನ್ನೋದನ್ನ ತೋರಿಸ್ಬೇಕು..! ಜನ ನಾವು ಬಿದ್ದಾಗ, ಸೋತಾಗ ನೋಡಿ ನಗ್ತಾರೆ..! ಅದೇ ನಾವು ಗೆದ್ದಾಗ ಚಪ್ಪಾಳೆ ಹೊಡೀತಾ ನಮ್ಮ ಹಿಂದೆ ಹಿಂದೆ ಬರ್ತಾರೆ..!
ಹೀಗೆ ತಮಗಾದ ಅವಮಾನವನ್ನ ಸವಾಲಾಗಿ ಸ್ವೀಕರಿಸಿ ಗೆದ್ದ ಸಾಧಕರನ್ನು ಪರಿಚಯಿಸ್ತಾ ಇದ್ದೇವೆ..! ಸವಾಲು, ಅವಮಾನಗಳನ್ನು ಮೆಟ್ಟಿನಿಂತ ಇವರ ಲೈಫ್ ನಮಗೆಲ್ಲಾ ಖಂಡಿತಾ ಮಾದರಿಯಾಗಬಲ್ಲದು..”!

1. ವಾಲ್ಟ್ ಡಿಸ್ನಿ :

N-14ಬಾಲ್ಯದಿಂದಲೂ ವಾಲ್ಟ್ ಡಿಸ್ನಿಗೆ ಕಲೆ, ಚಿತ್ರಕಲೆಯಲ್ಲಿ ಆಸಕ್ತಿ..! ಏಳನೇ ವಯಸ್ಸಲ್ಲಿರುವಾಗಲೇ ತಾವು ಬಿಡಿಸಿದ ಕೆಲವೊಂದು ರೇಖಾಚಿತ್ರಗಳನ್ನು ನೆರೆಹೊರೆಯವರಿಗೆ ಮಾರಟ ಮಾಡಿದ್ದರು..! ಚಿಕಾಗೋದ ಮಿಕ್ಕಿನ್ಲೆ ಹೈಸ್ಕೂಲ್ ನಲ್ಲಿ ಫೋಟೋಗ್ರಫಿ ಮತ್ತು ಕಲೆಯನ್ನು ಬಹಳಾ ಆಸಕ್ತಿ ಯಿಂದ ಕಲಿತರು..! ನಂತರ ಕಾನ್ಸಾಸ್ ಸಿಟಿ ಸ್ಟಾರ್ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು..! ಆದ್ರೆ ಕ್ರಿಯೇಟೀವ್ ಅಲ್ಲ, ಅವರಲ್ಲಿ ಕ್ರಿಯೇಟಿವಿಟಿ ಕೊರೆತೆ ಇದೆ ಎಂಬ ನೆಪವೊಡ್ಡಿ ಪತ್ರಿಕೆ ಅವರನ್ನು ಕೆಲಸದಿಂದ ತೆಗೆದು ಹಾಕುತ್ತದೆ..! ಹೀಗೆ ಪತ್ರಿಕೆಯಿಂದ ಕಡೆಗಾಣಿಸಲ್ಪಟ್ಟ ಡಿಸ್ನಿ ನಾನಾ ಬ್ಯುಸ್ ನೆಸ್ ಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಳ್ತಾರೆ..! ಗ್ರಹಚಾರ ಅಂದ್ರೆ, ಅಲ್ಲಿಯೂ ಅವರು ವೈಫಲ್ಯ, ನಷ್ಟವನ್ನು ಅನುಭವಿಸ ಬೇಕಾಗಿ ಬರುತ್ತೆ..! ನಂತರ ಅನಿಮೇಶನ್ ಕ್ಷೇತ್ರದಲ್ಲಿ ತನ್ನ ಸಾಮಥ್ರ್ಯವನ್ನು ಪರೀಕ್ಷೆಗೆ ಒಡ್ಡುತ್ತಾರೆ..! ಹಂತ ಹಂತವಾಗಿ ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಸಾಗ್ತಾರೆ..! ನಾನಾ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬರಲಾರಂಭಿಸುತ್ತವೆ..! 1928ರ ಹೊತ್ತಿಗೆ ಪರಿಚಯವಾಗಿದ್ದೇ ಎಲ್ಲರ ನೆಚ್ಚಿನ ಅನಿಮೇಶನ್ ಆಗಿರುವ “ಮಿಕ್ಕಿ ಮೌಸ್”..! ಈ ಮಿಕ್ಕಿ ಮೌಸ್ ಯಾರಿಗೆ ತಾನೆ ಗೊತ್ತಿಲ್ಲ..? ಈ ಜನಪ್ರೀಯವಾದ ಅನಿಮೇಶನ್ ಪರಿಚಯಿಸಿದ್ದು ಅಂದು ಪತ್ರಿಕೆಯೊಂದರಿಂದ ನಿರ್ಲಕ್ಷಕ್ಕೆ ಒಳಗಾಗಿದ್ದ ವಾಲ್ಟ್ ಡಿಸ್ನಿ ಎಂಬುದು ನಿಮಗೆ ನೆನಪಿರಲಿ..! ಅಷ್ಟೇ ಅಲ್ಲ ತನ್ನನ್ನು ಹೊರದಬ್ಬಿದ್ದ ಕಂಪನಿಯನ್ನು ಕೊಂಡು ಕೊಳ್ತಾರೆ..! ಇದು ಕಣ್ರೀ ಸೆಟೆದೆದ್ದು ನಿಲ್ಲೋದು ಅಂದ್ರೆ..!
2. ಮೈಕಲ್ ಜೋರ್ಡಾನ್ :

N-24

ಎಂಜೆ ಎಂದೇ ಕರೆಯಲ್ಪಡುವ ಮೈಕಲ್ ಜೋರ್ಡಾನ್… ಎಲ್ಲರಿಗೂ ಚಿರಪರಿಚಿತ..! ಗೊತ್ತೇ ಇದೆ, ಈತ ಅಮೇರಿಕಾದ ವೃತ್ತಿಪರ ಬ್ಯಾಸ್ಕೇಟ್ ಬಾಲ್ ಪ್ಲೇಯರ್..! ಈತನ ಆಟಕ್ಕೆ ಇಡೀ ವಿಶ್ವವೇ ಫಿದಾ ಆಗಿದೆ…! ಎಲ್ಲರಿಂದಲೂ ಮೆಚ್ಚುಗೆ ಪಡೆಯುತ್ತಿರುವ ಈ ಆಟಗಾರ 5 ಬಾರಿ ಬೆಲೆ ಬಾಳುವ ಆಟಗಾರನಾಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ..! ಆದ್ರೆ ಇವರು ಅದೆಂಥಾ ಅವಮಾನವನ್ನು ಎದುರಿಸಿದ್ರು ಗೊತ್ತಾ..? ಟ್ಯಾಲೆಂಟ್ ಇದ್ರು, ಆಡಬಲ್ಲ ಸಾಮಾಥ್ರ್ಯ ಇವರಿಗಿದ್ದರೂ ಹೈಸ್ಕೂಲ್ನಲ್ಲಿ ಬ್ಯಾಸ್ಕೇಟ್ ಬಾಲ್ ಟೀಂನಿಂದ ಇವರನ್ನು ಹೊರ ದಬ್ಬಿದ್ದರು..! ಇವತ್ತು ಈ ಬಗ್ಗೆ ಇವರನ್ನ ಕೇಳಿದ್ರೆ ಅದು ಪುರಾಣ, ಅದರ ಬಗ್ಗೆ ಯೋಚಿಸಲ್ಲ, ವೈಪಲ್ಯವನ್ನು ಮೆಟ್ಟಿನಿಂತಿರುವೆನೆಂಬ ಹೆಮ್ಮೆ ಇದೆ ಅಂತಾರೆ..! ಇವರ ಮಾತು ಪ್ರತಿಯೊಬ್ಬರಿಗೂ ಸ್ಪೂರ್ತಿಯುತ ಉಪದೇಶ..!

3. ಅರುಣಾಭ್ ಕುಮಾರ್ :N-35

Qtiyapa Guy  ಎಂದೇ ಪ್ರಸಿದ್ದರಾಗಿರುವ ಇವರನ್ನು ತಿಳಿಯದೇ ಇರುವವರಿಲ್ಲ..! ಯ್ಯೂಟ್ಯೂಬ್ ಚಾನಲ್ ಮೂಲಕ ಯಶಸ್ವಿಯಾದ ಯುವಕ ಇವರು..! 1,096,581 ಜನ ಇವರ ಚಾನೆಲ್ ಗೆ ಸಬ್ಸ್ ಕ್ರೈಬ್ ಆಗಿದ್ದಾರೆ..! ಇವರು ಹೀಗೆ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಯಶಸ್ವಿ ಆಗೋ ಮೊದಲು ಎಂಟಿವಿ ಇಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು..! ಅಲ್ಲಿ ಅವರ ಐಡಿಯಾಗಳಿಗೆ ಬೆಲೆ ಸಿಗದ ಕಾರಣ ಅದನ್ನು ಬಿಟ್ಟು, ತನ್ನ ಐಡಿಯಾವನ್ನು ಯ್ಯೂಟ್ಯೂಬ್ ಚಾನೆಲ್ನಲ್ಲಿ ಪ್ರಾಯೋಗಿಸಿ ಯಶಸ್ವಿಯಾದರು..!

4. ಸ್ಟೀವ್ ಜಾಬ್ಸ್ :

N-45

ಇವರು ಚಿಕ್ಕವಯಸ್ಸಲ್ಲೇ ಅಂದುಕೊಂಡಿದ್ದನ್ನು ಸಾಧಿಸಿದವರು..! ತನ್ನ 20ನೇ ವಯಸ್ಸಲ್ಲಿ ಆಪಲ್ ಕಂಪ್ಯೂಟರ್ ಕಂಪನಿಯನ್ನು ಹುಟ್ಟು ಹಾಕಿದರು..! ಇವತ್ತು ಈ ಕಂಪನಿ ಯಾವಮಟ್ಟಕ್ಕೆ ಬೆಳೆದಿದೆ ಅನ್ನೋದು ನಿಮಗೇ ಗೊತ್ತು..! ಆದ್ರೆ ಅವರೇ ಸ್ಥಾಪಿಸಿದ ಕಂಪನಿಯಿಂದ ಅವರನ್ನೇ ತೆಗೆದು ಹಾಕಿದರೆ..? ಅದರಂಥಹ ಅವಮಾನ ಮತ್ತೊಂದು ಇದೆಯೇ..? ಅಂಥಹ ಅವಮಾನ ಇವರಿಗೆ ಆಗಿತ್ತು.. ಆಪಲ್ ಕಂಪನಿ ಯಾವುದೋ ಆತಂರಿಕ ಗೊಂದಲದಿಂದ ನಷ್ಟಕ್ಕೆ ಸಿಲುಕಿದಾಗ ಅದರ ಗ್ರೂಪ್ ಇವರನ್ನೇ ಹೊಣೆಯಾಗಿಸಿ ಕಂಪನಿಯಿಂದ ಹೊರ ನೆಡೆಯುವಂತೆ ಆದೇಶಿಸಿತು..! ಹೀಗೇ ಸಾರ್ವಜನಿಕವಾಗಿ ತಾನೇ ಸ್ಥಾಪಿಸಿದ ಕಂಪನಿಯಿಂದ ಹೊರನೆಡೆದಾಗ ಸ್ಟೀವ್ ಗೆ 30 ವರ್ಷ…! ನಂತರ ನೆಕ್ಸ್ಟ್ ಎಂಬ ಕಂಪನಿಯನ್ನು ಹುಟ್ಟು ಹಾಕಿದರು..! ನೆಕ್ಸ್ಟ್ ಎಂಬುದು ತಂತ್ರಾಂಶ ಸಂಬಂಧಿತ ಕಂಪನಿ..! ಅಷ್ಟೇ ಅಲ್ಲಾ ಅನಿಮೇಶನ್ ಸಿನಿಮಾಗಳನ್ನೂ ಮಾಡಲು ಶುರುಮಾಡಿದ್ರು..! ಅದಕ್ಕಾಗಿಯೇ ಫಿಕ್ಸಾರ್ ಎಂಬ ಅನಿಮೇಶನ್ ಕಂಪನಿಯನ್ನೂ ಆರಂಭಿಸಿದ್ದರು..! ಹೀಗೆ ತಾನೇ ಹುಟ್ಟು ಹಾಕಿದ ಒಂದು ಕಂಪನಿ ತನ್ನನ್ನು ಹೊರ ದಬ್ಬಿದರರೇನಂತೇ.. ನನ್ನಲ್ಲಿ ಸಾಮಾಥ್ರ್ಯವಿದೆ ಎಂಬುದನ್ನು ಮತ್ತೆರಡು ಕಂಪನಿಗಳನ್ನು ಹುಟ್ಟು ಹಾಕುವ ಮೂಲಕ ಸಾಭೀತು ಪಡಿದರು..!

5. ಸಾನಿಯಾ ಮಿರ್ಜಾ :

N-53

ಮೂಗೂತಿ ಸುಂದರಿ ಸಾನಿಯಾ ಮಿರ್ಜಾ ಯಾರಿಗೆ ತಾನೆ ಗೊತ್ತಿಲ್ಲ..? ವಿಶ್ವ ಶ್ರೇಷ್ಠ ಆಟಗಾರ್ತಿ..! ಇವರೂ ಕೂಡ ಅವಮಾನಿತರಾದವರೇ..! ಅದರ ಬಗ್ಗೆ ಇಲ್ಲಿದೆ ಮಾಹಿತಿ..
2005ರಲ್ಲಿ ಇವರು ಟೆನಿಸ್ ಆಡುವಾಗ ಹಾಕುವ ಬಟ್ಟೆ ಇಸ್ಲಾಮಿಕ್ ವಿರೋಧಿ, ಕಳಂಕ ಅಂತೆಲ್ಲಾ ಟೀಕೆಗಳನ್ನು ಎದುರಿಸ ಬೇಕಾಗಿ ಬಂತು..! ಅವರು “ಸೇಫ್ ಸೆಕ್ಸ್” ಬಗ್ಗೆ ಮಾತನಾಡಿದಾಗ ಯುವಕರ ಮನಸ್ಸು ಹಾಳು ಮಾಡ್ತಾ ಇದ್ದಾರೆ..ಎಂದೂ ಜನ ಟೀಕಿಸಿದ್ರು..!
2010ರಲ್ಲಿ ಪಾಕಿಸ್ತಾನದ ಕ್ರಿಕೇಟ್ ಆಟಗಾರ ಶೋಯಭ್ ಮಲ್ಲಿಕರನ್ನು ಇವರು ಮದುವೆ ಆಗ್ತಾರೆ. ಆಗ ಜನ ಅವರ ಬಗ್ಗೆ ಕೆಟ್ಟಾದಾಗಿ ಮಾತಾಡ್ತಾರೆ.. ಪಾಕ್ ಸೊಸೆ ಎಂದು ಟೀಕೆ ಮಾಡ್ತಾರೆ.. ಹೀಗಳೆಯುತ್ತಾರೆ..!
ಆದರೇ ಇದೇ ವರ್ಷ ಅಂದ್ರೆ 2015ರಲ್ಲಿ ಮಹಿಳೆಯರ ಡಬಲ್ಸ್ನಲ್ಲಿ ವಿಂಬಲ್ಡನ್ ಗ್ರಾಂಡ್ ಸ್ಲಮ್ ಗೆದ್ದಿದ್ದಾರೆ” ಗ್ರಾಂಡ್ ಸ್ಲಂ ಗೆದ್ದ ಭಾರತದ ಮೊದಲ ಟೆನಿಸ್ ಪ್ಲೇಯರಾಗಿ ಇವರು ಹೊರ ಹೊಮ್ಮಿದ್ದಾರೆ..! ಆಗಸ್ಟ್ 29 2015ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ..! ಟೀಕೆಗಳನ್ನು ಮೆಟ್ಟಿನಿಂತು ಗೆದ್ದು ತೋರಿಸಿದ್ದಾರೆ..!

6. ಸ್ಟೀವನ್ ಸ್ಟೀಲ್ಬರ್ಗ್ :

N-63

ಇವರು ಅಮೇರಿಕಾದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಜುರಾಸಿಕ್ ಪಾರ್ಕ್, ಇಂಡಿಯಾನಾ ಜೋನ್ಸ್ ಎಂಬ ಅದ್ಬುತ ಸಿನಿಮಾಗಳೂ ಇವರದ್ದೇ..! ಆದರೆ ಹಿಂದೆ ದಕ್ಷಿಣಾ ಕ್ಯಾಲಿಫೋರ್ನಿಯಾದ ಸ್ಕೂಲ್ ಆಪ್ ಸಿನಿಮ್ಯಾಟಿಕ್ ಆರ್ಟ್ಸ್ ಇವರಿಗೆ ತರಗತಿಗೆ ಪ್ರವೇಶ ನೀಡಲು ನಿರಾಕರಸಿತ್ತು..!

7. ಜೆ. ಕೆ ರೌಲಿಂಗ್ :

N-74

ಹ್ಯಾರಿ ಪೋರ್ಟರ್ ಎಂಬ ಕಾದಂಬರಿ ಗೊತ್ತೇ ಇದೆ ಅಲ್ವಾ..? ಏಳು ಪುಸ್ತಕಗಳ ಸರಣಿಯ ಈ ಕಾದಂಬರಿಯ ಲೇಖಕಿಯೇ ಜೆ. ಕೆ ರೌಲಿಂಗ್..! ಇವರು ಅಮ್ನೆಸ್ಟಿ ಇಂಟರ್ನ್ಯಾಷನಲ್ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು, ಅಲ್ಲಿಂದ ಅವರನ್ನು ಹೊರದಬ್ಬುತ್ತಾರೆ..! ಅಷ್ಟೇ ಅಲ್ಲದೆ ಇವರ ಮದುವೆಯೂ ಮುರಿದು ಬೀಳುತ್ತದೆ..! ನಂತರವೇ.. ಈ ಕಾಲ್ಪನಿಕ ಕಾದಂಬರಿಯನ್ನು ಬರೆಯುತ್ತಾರೆ..! ಈ ಮೂಲಕ ವಿಶ್ವ ಪ್ರಸಿದ್ಧರಾಗ್ತಾರೆ..!

8. ರತನ್ ಟಾಟಾ :

N-81

 

ಟಾಟಾ ಸಮೂಹವು 1999ರಲ್ಲಿತನ್ನ ಕಾರು ತಯಾರಿಕಾ ಘಟಕವನ್ನು ಅಮೇರಿಕಾದ ಫೋರ್ಡ್ ಕಂಪನಿಗೆ ಮಾರಾಟ ಮಾಡಲು ಉದ್ಧೇಶಿಸಿತ್ತು..! ಈ ಬಗ್ಗೆ ಮಾತನಾಡಲೆಂದುಹೋದ ರತನ್ ಟಾಟಾ ಗೆ ಫೋರ್ಡ್ ಕಂಪನಿ ಅವಮಾನ ಮಾಡಿ ಕಳುಹಿಸಿತ್ತು..! “ಕಾರು ವ್ಯವಹಾರದ ಬಗ್ಗೆ ನಿಮಗೇನೂ ಗೊತ್ತಿಲ್ಲವೆಂದು ಗೇಲಿ ಮಾಡಿತ್ತು..! ಆದ್ದರಿಂದ ಆ ವ್ಯವಹಾರ ಮುರಿದು ಬಿದ್ದಿತ್ತು..! ಆದರೆ ನಂತರ 9 ವರ್ಷಗಳ ಬಳಿಕ ಅದೇ ಫೋರ್ಡ್ ಕಂಪನಿಯ ಜಾಗ್ವಾರ್ ಅಂಡ್ ಲ್ಯಾಂಡ್ ರೋವರ್ ಘಟಕವನ್ನು ಟಾಟಾ ಖರೀಧಿಸಿದ್ದರು..! ಆಗ ಫೋಡರ್್ ಕಂಪನಿಯ ಮುಖ್ಯಸ್ಥ ಟಾಟಾ ರವರಿಗೆ ಕೃತಜ್ಞತೆ ಸಲ್ಲಿಸಿದ್ದರು..!

9. ಬ್ರಿಯಾನ್ ಆಕ್ಟನ್ :

N-101

ಇಂದು ಅತ್ಯಂತ ಜನಪ್ರೀಯತೆಗಳಿಸಿರುವ “ವಾಟ್ಸ್ ಆಪ್”ನ ಫೌಂಡರ್ರೇ ಈ ಬ್ರಿಯಾನ್ ಆಕ್ಟನ್..! ಇದನ್ನು ಹುಟ್ಟು ಹಾಕುವ ಮೊದಲು 9 ವರ್ಷ ಯಾಹು ಕಂಪನಿಯೊಡನೆ ಇದ್ದರು..! ನಂತರ ಫೇಸ್ ಬುಕ್, ಟ್ವೀಟರ್ ಸಂಸ್ಥೆಗಳಲ್ಲಿ ಇವರನ್ನು ನಿರ್ಲಕ್ಷಿಸಿ, ಕೆಲಸಕ್ಕೆ ಇವರನ್ನು ನಿರಾಕರಿಸಿದ್ದರು..! ಆದರೆ ಇದೇ ಫೇಸ್ ಬುಕ್ 19 ಬಿಲಿಯನ್ ಡಾಲರ್ ನೀಡಿ 2014ರಲ್ಲಿ ಬ್ರಿಯಾನ್ ಆಕ್ಟನ್ ರ “ವಾಟ್ಸ್ ಆಪ್”ನ್ನು ಕೊಂಡು ಕೊಂಡಿದೆ…!
ಹೀಗೆ ಅನೇಕ ಸಾಧಕರು ಅವಮಾನ, ಸವಾಲುಗಳನ್ನು ಮೆಟ್ಟಿನಿಂತವರೇ..! ಏನಾಗಲೀ ಮುಂದೇ ಸಾಗು ನೀ.. ಬಯಸಿದ್ದೆಲ್ಲಾ ಸಿಗದೂ ಬಾಳಲಿ…! ಆದ್ರೂ ಪ್ರಯತ್ನ ಪಟ್ಟರೆ ಸಿಕ್ಕೆ ಸಿಗುತ್ತೆ..! ನಿಮಗಾದ ಅವಮಾನವನ್ನು ಮೆಟ್ಟಿನಿಲ್ಲಿ, ಸಾಧನೆಯ ಉತ್ತುಂಗವನ್ನು ತಲುಪಿ ಎನ್ನುತ್ತಾ…

LEAVE A REPLY

Please enter your comment!
Please enter your name here