ಗಮನಿಸಿ, ಇನ್ಮುಂದೆ ಈ ಮೊಬೈಲ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ!

0
72

ಸಾಮಾಜಿಕ ಜಾಲತಾಣಗಳ ಹಿರಿಯಣ್ಣ ಎಂದು ಗುರುತಿಸಿಕೊಂಡಿರುವ ಫೇಸ್‌ಬುಕ್ ಹಲವು ಉಪಯುಕ್ತ ಸೇವೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ವಿಶ್ವ ಜನಪ್ರಿಯ ವಾಟ್ಸಾಪ್‌ ಸಹ ಒಂದಾಗಿದೆ. ಟೆಕ್ಸ್ಟ್, ಫೋಟೊ, ವಿಡಿಯೋಗಳನ್ನು ಶೇರ್ ಮಾಡಬಹುದಾದ ಆಯ್ಕೆಗಳನ್ನು ಒಳಗೊಂಡಿರುವ ವಾಟ್ಸಾಪ್ ಈಗಾಗಲೇ ಹಲವು ಅಪ್‌ಡೇಟ್ ಕಂಡು ಮತ್ತಷ್ಟು ನೂತನ ಫೀಚರ್ಸ್‌ಗಳನ್ನು ಭರ್ತಿ ಮಾಡಿಕೊಂಡಿದೆ. ಇನ್ನು ಇದೇ ನವೆಂಬರ್ 1, 2021 ರಿಂದ ಆಂಡ್ರಾಯ್ಡ್‌ ಮತ್ತು ಐಓಎಸ್‌ನ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಆಪ್ ಸ್ಥಗಿತವಾಗಲಿದೆ ಎಂದು ಹೇಳಲಾಗಿದೆ.

ಹೌದು, ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು, ಇದು ನಿರಂತರವಾಗಿ ತನ್ನ ಬಳಕೆದಾರರಿಗೆ ಅತ್ಯುತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತ ಮುನ್ನಡೆದಿದೆ. ಕಂಪನಿಯು ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಯ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸ ಫೋನ್‌ಗಳಿಗೆ ಹೊಂದಾಣಿಕೆಯನ್ನು ಸುಧಾರಿಸಲು 1 ನೇ ನವೆಂಬರ್ 2021 ರಿಂದ ವಾಟ್ಸಾಪ್ ಹಳೆಯ ಆಪರೇಟಿಂಗ್ ಸಿಸ್ಟಮ್ (ಓಎಸ್‌) ಫೋನ್‌ಗಳಿಗೆ ತನ್ನ ಸಪೋರ್ಟ್‌ ನಿಲ್ಲಿಸಲಿದೆ.

 

ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜ್‌ ದೈತ್ಯ ವಾಟ್ಸಾಪ್, ಇದೇ ನವೆಂಬರ್ 1, ಒಟ್ಟು 43 ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಕಾರ್ಯ ನಿರ್ವಹಣೆಯನ್ನು ಶಾಶ್ವತವಾಗಿ ನಿಲ್ಲಿಸುತ್ತದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಆಪಲ್‌ ಐಓಎಸ್‌ 9 ಅಥವಾ ಆಂಡ್ರಾಯ್ಡ್‌ 4.0.3 ಓಎಸ್‌ ಗಿಂತ ಹಿಂದಿನ ಆಪರೇಟಿಂಗ್ ಸಿಸ್ಟಮ್‌ ಬೆಂಬಲದ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ನಿಲ್ಲಿಸಲಿದೆ ಎನ್ನಲಾಗಿದೆ.

ಐಓಎಸ್‌ 9 ಅಥವಾ ಆಂಡ್ರಾಯ್ಡ್‌ 4.0.3 ಓಎಸ್‌ ಗಿಂತ ಹಿಂದಿನ ಓಎಸ್‌ ನಲ್ಲಿ ಕಾರ್ಯನಿರ್ವಹಿಸುವ ಫೋನ್‌ಗಳಲ್ಲಿ ವಾಟ್ಸಾಪ್‌ ನವೆಂಬರ್‌ನಿಂದ ಕಾರ್ಯನಿರ್ವಹಿಸಲ್ಲ. ಹೀಗಾಗಿ 4.1 ಓಎಸ್ ಅಥವಾ ಅದಕ್ಕಿಂತ ಮೇಲ್ಪಟ್ಟ ಓಎಸ್‌ನ ಆಂಡ್ರಾಯ್ಡ್ ಫೋನ್‌ಗಳನ್ನು ಮತ್ತು ಐಒಎಸ್ 10 ಮತ್ತು ಅದಕ್ಕಿಂತ ಮೇಲ್ಪಟ್ಟ ಐಫೋನ್‌ ಮಾಡೆಲ್‌ಗಳನ್ನು ಬಳಸುವ ಬಳಕೆದಾರರಿಗೆ ಮಾತ್ರ ವಾಟ್ಸಾಪ್‌ ಲಭ್ಯವಾಗಲಿದೆ.

LEAVE A REPLY

Please enter your comment!
Please enter your name here