ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

0
1343

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ನಮಗೆ ಏನೇ ಬೇಕಾದ್ರು..! ಅದೆಂಥಾ ಇನ್ಫಾರ್ಮೇಶನ್ ಬೇಕಾದ್ರು…, ಇವತ್ತು ತುಂಬಾ ಈಸಿ ಆಗಿ ಪಡೆಯಬಹುದು..! ಏನ್ಬೇಕು ಹೇಳಿ..? ತಕ್ಷಣ ಅದರ ಬಗ್ಗೆ ಮಾಹಿತಿ ಸಿಕ್ಕೇ ಸಿಗುತ್ತೆ..! ಆ ವಸ್ತು, ಪ್ಲೇಸ್, ಅಥವಾ ಸಬ್ಜೆಕ್ಟ್ ಇದ್ದಿದ್ದೇ ಆದ್ರೆ ಅದರ ಮಾಹಿತಿ ಪಡೆಯೋದೇನೂ ಕಷ್ಟವಿಲ್ಲ..! ಯಾಕಂದ್ರೆ ಗೂಗಲ್ ಇದೆಯಲ್ವಾ? ಹೌದು..,ಇವತ್ತು ಯಾವುದನ್ನೇ ಸರ್ಚ್ ಮಾಡೋದಾದ್ರೂ ಗೂಗಲ್, ಗೂಗಲ್, ಗೂಗಲ್..! ಈ ಗೂಗಲ್ ನಲ್ಲಿ ಬೇಕಾಗಿದ್ದು, ಬೇಡವಾಗಿದ್ದು ಎಲ್ಲವನ್ನೂ ಜಾಲಾಡ್ತಾ ಇರ್ತೀವಿ..! ಈ ನಮ್ಮ ಜಾಲಾಡೋ ಕೆಲಸ ಇದೆಯಲ್ಲಾ ಅದು ನಮ್ ಟೇಸ್ಟ್ ಅಂಡ್ ಇಂಟ್ರೆಸ್ಟ್ ಬಗ್ಗೆ ಹೇಳುತ್ತೆ..! ನಮಗೆ ಯಾವುದರ ಬಗ್ಗೆ ಅತೀ ಹೆಚ್ಚು ಇಂಟ್ರೆಸ್ಟ್ ಇರುತ್ತೋ ಅದನ್ನೇ ಹೆಚ್ಚು ಹೆಚ್ಚು ಹುಡುಕೋದು ಅಲ್ವೇನ್ರೀ..? ಸರಿ, ಈಗ ಯಾವ್ ಯಾವ್ ದೇಶದ ಜನ ಏನ್ ಏನನ್ನ ಗೂಗಲ್ ನಲ್ಲಿ ಸಿಕ್ಕಾಪಟ್ಟೆ ಸರ್ಚ್ ಮಾಡ್ತಾರೆ ಎಂಬುದನ್ನು ಹೊಸ ಮ್ಯಾಪ್ ಹೇಳ್ತಾ ಇದೆ..! ಆ ಮ್ಯಾಪ್ ನಲ್ಲಿರುವಂತೆ ಯಾವ್ ಯಾವ್ ದೇಶದ ಜನ ಗೂಗಲ್ ನಲ್ಲಿ ಏನೇನು ಹುಡುಕ್ತಾರೆ ಅಂತ ಸ್ವಲ್ಪ ನೋಡೋಣ ಬನ್ನಿ..!

ಆ್ಞಂ, ಮೊದಲಿಗೆ ನಮ್ ದೇಶದಿಂದಲೇ ಹೋಗೋಣ..! ಭಾರತೀಯರು ಗೂಗಲ್ ನಲ್ಲಿ ಅತೀ ಹೆಚ್ಚಾಗಿ ಹುಡುಕೋದು ಏನನ್ನ ಗೊತ್ತಾ..? ಗೆಸ್ ಮಾಡಿ..! ಐಷಾರಾಮಿ ಕಾರು..? ಬಂಗಲೆ..? ಹೋಟೆಲ್..? ಟೂರಿಸ್ಟ್ ಪ್ಲೇಸ್..? ಸಾರ್, ಇದ್ಯಾವ್ದು ಅಲ್ವೇ ಅಲ್ಲ..! ಇಂಡಿಯಾದಲ್ಲಿ ಅತೀ ಹೆಚ್ಚು ಗೂಗಲ್ ನಲ್ಲಿ ಸರ್ಚ್ ಮಾಡೋದು “ಹಸು(ದನ)ಗಳನ್ನು”…! ಆಶ್ಚರ್ಯ ಆದ್ರೂ ಇದು ಸತ್ಯ..ಸತ್ಯ ಸತ್ಯ..! ಭಾರತೀರಂತೆ “ಬಾಂಗ್ಲಾ”ದೇಶದವರೂ ಕೂಡ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕುವುದು ದನ ಅಥವಾ ಹಸುಗಳನ್ನೇ..!
“ರಷ್ಯಾ”ದವರು ಏನನ್ನ ಸರ್ಚ್ ಮಾಡ್ತಾರೆ ಗೊತ್ತಾ..? ಸಾರ್, ಅವ್ರು ಮೇಲೆ ಹೋಗೋ ಯೋಚ್ನೆಯನ್ನೇ ಮಾಡೋದು..! ಮೇಲ್ ಹೋಗೋ ಯೋಚ್ನೆ ಅಂದ್ರೆ ಸಾಯೋ ಯೋಚ್ನೆ ಅಂತ ಅನ್ಕೊಳ್ಬೇಡಿ ಬಾಸ್..! ರಷ್ಯಾದಲ್ಲಿ ಮಿಗ್(ಮಿಲಟರಿ ಏರ್ ಕ್ರಾಫ್ಟ್)ನಲ್ಲಿ ಹಾರಾಟ ನಡೆಸೋಕೆ ಎಷ್ಟು ವೆಚ್ಚ ಬೀಳುತ್ತೆ ಅಂತ ಗೂಗಲ್ಲಲ್ಲಿ ಸಿಕ್ಕಾಪಟ್ಟೆ ಸರ್ಚ್ ಮಾಡ್ತಾರೆ..! www.tnit.in
ಇನ್ನು “ಇರಾನಿಯನ್ನರಂತೂ” ಡಿಫರೆಂಟೋ..ಡಿಫರೆಂಟೋ..! ಇವರು ಗೂಗಲ್ನಲ್ಲಿ “ಕಿಡ್ನಿ” ಕೊಡು ಕೊಳ್ಳುವೆಕೆಯ ಕುರಿತು ಸರ್ಚ್ ಮಾಡ್ತಾರೆ..! ಊಫ್..!
“ಚೀನಿಯರು”ಐಫೋನ್ ಜಾಲಾಡಿದ್ರೆ..! “ಮಾರಿಟಾನಿಯನ್ನರು” ಗೂಗಲ್ಲಲ್ಲಿ “ಗುಲಾಮರನ್ನು” ಹುಡುಕ್ತಾರೆ..!, “ಸಿರಿಯಾ” ಮತ್ತು “ಲಿಯೋನ್”ನಲ್ಲಿ “ವಜ್ರವನ್ನು” ಸರ್ಚ್ ಮಾಡ್ತಾರೆ..! “ಚಿಲಿ” ಮತ್ತು “ಥೈವಾನ್”ನಲ್ಲಿ “ಕೋಕೇನ್”(ಇದೊಂದು ಮಾದಕ ವಸ್ತು)ನ್ನ ಗೂಗಲ್ ನಲ್ಲಿ ಸರ್ಚ್ ಮಾಡ್ತಾರಂತೆ ಮಾರಾಯರೇ..! ಇನ್ನೂ ಅಚ್ಚರಿ ಅಂದ್ರೆ “ಜಪಾನಿಯನ್ನರು”, “ಕಲ್ಲಂಗಡಿ” ಅಥವಾ “ಕರಬೂಜ”ವನ್ನು ಗೂಗಲ್ ನಲ್ಲಿ ಹುಡುಕ್ತಾರಂತೆ ಶಿವಾ..! “ಅಮೇರಿಕನ್ನರು” “ರತ್ನಗಂಬಳಿಯನ್ನು” ಗೂಗಲಲ್ಲಿ ಸರ್ಚ್ ಮಾಡ್ತಾರಂತೆ ಸಾರ್..!
“ಐರ್ಲೆಂಡ್”ನವರ ಇಂಟ್ರೆಸ್ಟ್ ಇನ್ನೂ ಅಮೇಜಿಂಗ್..! ಇವ್ರು “ತಿಥಿ ಕ್ರಿಯೆ”ಬಗ್ಗೆ ಗೂಗಲ್ ನಲ್ಲಿ ನೋಡ್ತಾರಂತಪ್ಪೋ..! “ಮಾಲ್ಡೀವ್ಸ್”ನಲ್ಲಿ “ಹನಿಮೂನ್”ಬಗ್ಗೆ ಗೂಗಲ್ಲಲ್ಲಿ ಸರ್ಚ್ ಮಾಡಿದ್ರೆ..,”ಟ್ರಿನಿಡಾಡ್” “ಟೋಬ್ಯಾಗೋ” ಗಳಲ್ಲಿ “ವಿಚ್ಛೇದನ”(ಡಿವೋರ್ಸ್) ಬಗ್ಗೆ ಸರ್ಚ್ ಮಾಡ್ತಾರಂತಪ್ಪಾ..! ಇವಲ್ಲಕ್ಕಿಂತ ಭಿನ್ನವಾಗಿ ಬ್ರೆಜಿಲ್, ಉಕ್ರೇನ್, ಹಾಂಗ್ ಕಾಂಗ್, ಕೊಲಂಬಿಯಾ, ಲಾಟ್ವಿಯಾ ರಾಷ್ಟ್ರಗಳ ಜನರು “ವೇಶ್ಯೆ”ಯರನ್ನು ಗೂಗಲ್ನಲ್ಲಿ ಹುಡುಕ್ತಾರೆ..! ಅಯ್ಯಬ್ಬ.. ಶಿವ ಶಿವ..! ಗೂಗಲ್ಲಾಯ ನಮಃ ದೇವರೇ ಕಾಪಡಪ್ಪ..!
ಹೀಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಗೂಗಲ್ ನಲ್ಲಿ ಏನೇನೋ ಹುಡುಕಾಟ ಮಾಡೋದ್ರಲ್ಲಿ ಬ್ಯುಸಿ ಆಗಿರ್ತಾರಂತೆ..! ಅಂದಹಾಗೆ ಗೂಗಲ್ನಲ್ಲಿ ಯಾವ ಯಾವ ದೇಶದವರು ಹೆಚ್ಚು ಹೆಚ್ಚಾಗಿ ಏನೇನು ಹುಡುಕ್ತಾ ಇದ್ದಾರೋ ಅದಕ್ಕೆ ಆ ದೇಶಗಳಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಕೂಡ ಇದೆ, ನೆನಪಿರಲಿ..! ಅವರು ಹುಡುಕುವುದನ್ನು ಹುಡುಕಿ ಕೊಟ್ರೆ ನಿಮಗೂ ದುಡ್ಡು ಸಿಗಬಹುದೇನೋ..! ಹೊಸ ಕೆಲಸ ಸಿಕ್ಕಂಗೂ ಆಗುತ್ತೆ..! ಈಗ ಇಲ್ಲಿ ಕೆಲವೇ ದೇಶದ ಜನರು ಗೂಗಲ್ ನಲ್ಲಿ ಏನೆಲ್ಲಾ.. ಹುಡುಕ್ತಾರೆ ಅನ್ನೋ ಇಂಟ್ರೆಸ್ಟಿಂಗ್ ಮ್ಯಾಟ್ರು ಹೇಳಿದ್ದೇವೆ..! ಇತರೆ ದೇಶಗಳಲ್ಲಿ ಗೂಗಲ್ ನಲ್ಲಿ ಏನೆಲ್ಲಾ ಹೆಚ್ಚಾಗಿ ಹುಡುಕ್ತಾರೆ ಅನ್ನೋ ಕುತೂಹಲ ಇದ್ರೆ ಈ ಕೆಳಗಿನ ಮ್ಯಾಪ್ ನೋಡಿ ಹಾಗೇ ಸುಮ್ಮನೇ..!

google-cost-obsessions-world

LEAVE A REPLY

Please enter your comment!
Please enter your name here