ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..?

0
483

ಎಲ್ಲರೂ ಗೂಗಲ್ ಬಳಸ್ತೀರಾ ಅಲ್ವೇ..? ಎಲ್ಲರೂ ಬಳಸೇ ಬಳಸ್ತೀರ..! ಏನೇ ಮಾಹಿತಿ ಬೇಕಾದ್ರೂ ಹುಡುಕೋದು ಗೂಗಲ್ ಎಂಬ ಸರ್ಚ್ ಇಂಜಿನ್ ಮೂಲಕವೇ..! ಆದ್ರೆ ಗೂಗಲ್ ನಲ್ಲಿ ಎಲ್ಲವೂ ನಿಖರವಾಗಿ ನಾವು ಕೇಳಿದ ರೀತಿಯೇ ಸಿಗುತ್ತಾ..?! ಸಿಗಲ್ಲ ಅಲ್ವಾ…? ಚಿಕ್ಕ ಮಗು ಹಠ ಮಾಡಿದಂತೆ ಗೂಗಲ್ ಕೂಡ ನಾವ್ ಏನೇ ಕೇಳಿದ್ರೂ ಅದರಲ್ಲಿರುವಂತೆಯೇ.. ತನ್ನಿಷ್ಟದಂತೆಯೇ ಅದು ಕೊಡುತ್ತೆ..! ಒಂದು ಮಾಹಿತಿ ಏನೋ ಬೇಕಾಗಿರುತ್ತೆ..ಅದನ್ನ ಕೊಡು ಅಂತ ಕೇಳಿದ್ರೆ ನಮ್ ಗೂಗಲ್ ಬೇಕಾಗಿದ್ದು ನಮಗೆ ಬೇಡವಾಗಿದ್ದೆಲ್ಲವನ್ನೂ ಕೊಡುತ್ತೆ..! ಅದು ಕೊಟ್ಟ ಮಾಹಿತಿಯಲ್ಲಿ ನಮಗೆ ಬೇಕಾದುದನ್ನು ನಾವೇ ಆಯ್ಕೆ ಮಾಡಿಕೊಳ್ಬೇಕು ಅಲ್ವಾ..? ನಾವು ಏನೋ ಕೇಳಿರ್ತೀವಿ, ಗೂಗಲ್ ಇನ್ನೇನನ್ನೋ ಕೊಡುತ್ತೆ..! ನಮಗೆ ಬೇಡವಾದ, ನಮ್ಮ ಮನಸ್ಸಿಗೆ ರುಚಿಸದ ವಿಷಯಗಳೂ ಕೂಡ ಸರ್ಚ್ ಮಾಡುವಾಗ ಕಿರಿಕಿರಿ ಉಂಟು ಮಾಡುತ್ತವೆ..! ಆದ್ರೆ ಈಗ ನಾವು ಹೇಳೋ ಗೂಗಲ್ ಟ್ರಿಕ್ಸ್ ಗಳನ್ನು ಫಾಲೋ ಮಾಡಿದ್ರೆ ನಿಮಗೆ ಕಿರಿಕಿರಿ ಆಗಲ್ಲ…! ಬೇಕಂದ ಮಾಹಿತಿ ಅದರಲ್ಲಿ ಇದ್ದರೆ ತಟ್ಟನೆ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಮೂಡಿ ಬರುತ್ತೆ..! ಕೆಲವೊಂದು ನಿರ್ಧಿಷ್ಟ ವಿಷಯಗಳನ್ನು ಹುಡುಕುವುದು ತುಂಬಾ ಸುಲಭ..! ನೀವೆಲ್ಲಾ ಗೂಗಲ್ ಬಳಕೆದಾರರೇ ಆಗಿದ್ದಲ್ಲಿ ಈ ಟ್ರಿಕ್ಸ್ ಗಳನ್ನು ತಿಳಿದುಕೊಳ್ಳಿ..! ಉಪಯುಕ್ತವಾದ ಮಾಹಿತಿ ನಾವು ನಿಮಗೋಸ್ಕರ… ನೀಡ್ತಾ ಇದ್ದೀವಿ..!

* ನೀವು ಯಾವ ಮಾಹಿತಿಯನ್ನು ಹುಡುಕಲು ಬಯಸಿದ್ದೀರೋ ಆ ಮಾಹಿತಿಗೆ ಸಂಬಂಧಿಸಿದ ಟೈಟಲ್ ನ ಹಿಂದೆ “intitle:”  ಎಂದು ಟೈಪ್ ಮಾಡಿ ಎಂಟರ್ ಕೊಡಿ..! ಆಗ ನಿಮಗೆ ನಿರ್ಧಿಷ್ಟ ಮಾಹಿತಿ ಲಭ್ಯವಾಗುತ್ತೆ..! ಹುಡುಕಾಟ ಸುಲಭವಾಗುತ್ತೆ..! ಉದಾಹರಣೆಗೆ ಲಂಡನ್ ಇತಿಹಾಸ ಬೇಕೆಂದಲ್ಲಿ “intitle:” london history   ಎಂದು ಸರ್ಚ್ ಮಾಡಿ ಆಗ ನಿಖರವಾದ ಮಾಹಿತಿ ಬರುತ್ತೆ..! ನಿಮ್ಮ ಹುಡುಕಾಟದ ಸಮಯವೂ ಉಳಿಯುತ್ತೆ..!

GT_2

 

* ನೀವು ಹುಡುಕುವ ಮಾಹಿತಿಯಲ್ಲಿ ನಿಮಗೆ ಬೇಡವಾದ ಮಾಹಿತಿಯು ಬಿಟ್ಟು ಬೇರೆಲ್ಲಾ ಮಾಹಿತಿ ಬೇಕೆಂದರೆ, ನೀವು ಹುಡುಕುವ ವಿಷಯದ ಮುಂದೆ ಮೈನೆಸ್ (ವ್ಯವಕಲನ)(-) ಚಿಹ್ನೆಯನ್ನು ಬರೆದು ಅದರ ಮುಂದೆ ಬೇಡವಾದ ವಿಷಯವನ್ನು ಬರೆದರೆ ಆ ಬೇಡವಾದ ವಿಷಯ ಸರ್ಚ್ ರಿಸೆಲ್ಟ್ ನಲ್ಲಿ ಬರಲ್ಲ..! ಉದಾಹರಣೆಗೆ ನೀವು ಕನ್ನಡದ ಹೆಸರಾಂತ ನಟ ಶಂಕರ್ನಾಗ್ ಬಗ್ಗೆ ಹುಡುಕುವಾಗ ಅವರ ವಿಕಿಪೀಡಿಯಾ ಬೇಡವೆಂದಿಟ್ಟುಕೊಳ್ಳಿ ಆಗ Shankarnag -wiki  ಎಂದು ಟೈಪ್ ಮಾಡಿ ಸರ್ಚ್ ಮಾಡಿ..! ಆಗ ಅವರ ವಿಕಿಪೀಡಿಯಾ ಬಿಟ್ಟು ಬೇರೆಲ್ಲಾ ಮಾಹಿತಿ ಬರುತ್ತೆ..! ವಿಕಿ ಬರಲ್ಲ..!

shankar-nag

 

* ನೀವು ಒಂದೇ ಟ್ಯಾಬ್ ನಲ್ಲಿ ಎರಡು ವಿಷಯ ಅಥವಾ ಇಬ್ಬರು ವ್ಯಕ್ತಿಗಳ ಬಗ್ಗೆ ಮಾಹಿತಿ ಹುಡುಕ ಬೇಕೆಂದರೆ “ಎ” ಅಥವಾ “ಬಿ” ಫಾರ್ಮ್ಯಾಟ್ ನಲ್ಲಿ ಗೂಗಲ್ ಸರ್ಚ್ ಮಾಡಿ..! ಉದಾಹರಣೆಗೆ ನೀವು ಒಂದೇ ಟ್ಯಾಬ್ ನಲ್ಲಿ ಅನಂತ್ ನಾಗ್ ಹಾಗೂ ಶಂಕರ್ ನಾಗ್ ಇಬ್ಬರ ಬಗ್ಗೆಯೂ ಮಾಹಿತಿ ಹುಡುಕ ಬೇಕೆಂದರೆ “ananth nag” OR “shankar naag”  ಎಂದು ಸರ್ಚ್ ಮಾಡಿ..!

shankar-nag-anaNTH-NAG
* ಅನಿಮೆಟೆಡ್ ಚಿತ್ರಗಳು ಬೇಕಿದ್ದಲ್ಲಿ ಗೂಗಲ್ ಇಮೇಜ್ ಗೆ ಹೋಗಿ ಬೇಕಾದ ಎನಿಮೇಟಿಡೆ ಚಿತ್ರದ ಹೆಸರನ್ನು ಟೈಪ್ ಮಾಡಿ, ಸರ್ಚ್ ಟೂಲ್ ನಲ್ಲಿ ಟೈಪ್ ಕಮಾಂಡ್ ಗೆ ಹೋಗಿ ಅನಿಮೇಟೆಡ್ ಎಂಬ ಆಪ್ಷನ್ ಕ್ಲಿಕ್ಕಿಸಿದ್ರೆ ಅನಿಮೇಟೆಡ್ ಇಮೇಜ್ ಗಳು ತೆರೆದುಕೊಳ್ತವೆ..!

GT_5

* ಬಹಳ ವರ್ಷದ ಹಿಂದಿನ ಸುದ್ಧಿಗಳನ್ನು, ಮಾಹಿತಿಗಳನ್ನು ಹುಡುಕಲು ಕಷ್ಟ ಪಡಬೇಕಿಲ್ಲ..! ನೀವು ಸುಲಭವಾಗಿ ಡಿಜಿಟಲ್ ರೂಪದಲ್ಲಿ ಗೂಗಲ್ ನ್ಯೂಸ್ ಹುಡಕಬಹುದು..! 1800ನೇ ಇಸವಿಯಿಂದ ಹಿಡಿದು ಇವತ್ತಿನ ತನಕ ಯಾವುದೇ ನ್ಯೂಸ್ ಅನ್ನು ಹುಡುಕ ಬಹುದು..! ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..!

GT_6

* ಒಂದೇ ರೀತಿಯ ಗುಣ ಲಕ್ಷಣಗಳನ್ನು ಅಂದರೆ ಸಿಮಿಲರ್ ನೇಚರ್ ಹೊಂದಿರುವ ಇತರೆ ವೆಬ್ ಸೈಟ್ ಗಳನ್ನೂ ತಿಳಿಯುವುದು ತುಂಬಾ ಸುಲಭ..! ಅದರಕ್ಕಾಗಿ ರಿಲೆಟೆಡ್: ಅಂತ ಟೈಪ್ ಮಾಡಿ ವೆಬ್ ಸೈಟ್ ಹೆಸರು ಬರೆದು ಎಂಟರ್ ಕೊಟ್ಟರೆ ಸಾಕು..! ರಿಲೇಟೆಡ್ ವೆಬ್ ಸೈಟ್ ಗಳು ತೆರೆದು ಕೊಳ್ಳುತ್ತವೆ..! ಉದಾಹರಣೆಗೆ ಫೇಸ್ ಬುಕ್ ಗೆ ರಿಲೆಟೆಡ್ ಆದ ವೆಬ್ ಸೈಟ್ ಗಳನ್ನು ತಿಳಿಯಲು related:facebook.com  ಎಂದು ಟೈಪ್ ಮಾಡಿ ಗೂಗಲ್ ಸರ್ಚ್ ಕೊಡಿ..!

GT_9

* ನಿಮ್ಮ ಐಪಿ ವಿಳಾಸವನ್ನು ತಿಳಿಯಲು ಐಪಿ ಅಡ್ರಸ್ ಅಂತ ಇಂಗ್ಲಿಷ್ ನಲ್ಲಿ ಟೈಪ್ ಮಾಡಿ ಎಂಟರ್ ಕೊಟ್ರೆ ಸಿಗುತ್ತೆ..!

GT_12

* ಫ್ಲೈಟ್ ನೇಮ್ ಟೈಪ್ ಮಾಡಿ ಗೂಗಲ್ ಸರ್ಚ್ ಕೊಟ್ರೆ ಆ ಫ್ಲೈಟ್ ನ ಷೆಡ್ಯೂಲ್ ಅಥವಾ ವೇಳಾಪಟ್ಟಿ ಸಿಗುತ್ತೆ..!

GT_13
* ಗೂಗಲ್ ನಲ್ಲಿ ಟೈಮರ್ ಕೂಡ ಸೆಟ್ ಮಾಡ್ಬಹುದು..! ಸೆಟ್ ಟೈಮರ್ ಅಂತ ಇಂಗ್ಲಿಷ್ ನಲ್ಲಿ ಟೈಪ್ ಮಾಡಿ ನಿಗಧಿತ ಟೈಮ್ ಬರೆದು ಎಂಟರ್ ಕೊಟ್ರೆ ಟೈಮರ್ ಸೆಟ್ ಆಗುತ್ತೆ..! ಉದಾಹರಣೆಗೆ 2ಗಂಟೆ ಕಾಲಕ್ಕೆ ಟೈಮರ್ ಸೆಟ್ ಮಾಡುವುದಾದ್ರೆ.., set timer for 2 hours   ಎಂದು ಗೂಗಲ್ ನಲ್ಲಿ ಟೈಪ್ ಮಾಡಿ ಎಂಟರ್ ಕೊಡಿ ಅಷ್ಟೇ..!

GT_14

* ಯಾವ ಪದ ಎಲ್ಲಿ ಹುಟ್ಟಿತು ಎಂದು ತಿಳಿಯಲು ಆ ಪದದ ಮುಂದೆ ಎಟ್ಮೋಲಜಿ ಅಂತ ಟೈಪ್ ಮಾಡಿ..! ಉದಾಹರಣೆಗೆ ಲವ್ ಎಂಬ ಪದ ಯಾವ ದೇಶದಲ್ಲಿ ಹುಟ್ಟಿದ್ದು ಎಂದು ತಿಳಿಯಲು love etymology ಎಂದು ಟೈಪ್ ಮಾಡಿ ಎಂಟರ್ ಕೊಟ್ರೆ ಆ ಪದ ಜರ್ಮನಿಯದ್ದು ಎಂದು ತಿಳಿಯುತ್ತೆ..!

GT_16

* ಎರಡು ಆಹಾರ ಪದಾರ್ಥಗಳನ್ನು ಹೋಲಿಕೆ ಮಾಡಲು “ಎಕ್ಸ್” ವರ್ಸಸ್ “ವೈ” ಫಾರ್ಮ್ ಬಳಸಿ..! ಉದಾಹಣೆಗೆ ಸೇಬು ಮತ್ತು ಆರೆಂಜ್ ನ್ನು ಹೋಲಿಸಲು orange vs apple  ಎಂದು ಸರ್ಚ್ ಮಾಡಿ..!

ORANGE-APPLA
* ಬೇರೆ ಬೇರೆ ನಗರಗಳಲ್ಲಿನ ಸೂರ್ಯಾಸ್ತ ಮತ್ತು ಸೂರ್ಯೋದಯದ ಸಮಯವನ್ನು ತಿಳಿಯಲು ಸನ್ರೈಸ್ ಅಥವಾ ಸನ್ ಸೆಟ್ ಎಂಬ ಇಂಗ್ಲೀಷ್ ಪದದ ಮುಂದೆ ಆ ನಗರದ ಹೆಸರನ್ನು ಟೈಪು ಮಾಡುವುದು..! ಉದಾಹರಣೆಗೆ ಬೆಂಗಳೂರಿನಲ್ಲಿ ಸೂರ್ಯೋದಯದ ಅವಧಿ ತಿಳಿಯಲು Bengaluru sunrise   ಎಂದು ಸರ್ಚ್ ಮಾಡಿದ್ರೆ ಸೂರ್ಯೋದಯದ ಸಮಯ ತಿಳಿಯುತ್ತೆ..!

bengaluru-sunrise

 

* ಗೂಗಲ್ ದಿನಕ್ಕೊಂದು ಹೊಸ ಹೊಸ ಡೂಡಲ್ಸ್ ಅನ್ನು ತನ್ನ ಮುಖಪುಟದಲ್ಲಿ ತೇಲಿ ಬಿಡ್ತಾ ಇರುತ್ತೆ..! ವಿಶೇಷ ದಿನದಲ್ಲಂತೂ ತುಂಬಾ ಸೊಗಸಾದ ಡೂಡಲ್ಸ್ ಅನ್ನು ಹಾಕ್ತಾ ಇರುತ್ತೆ..! ಆದ್ರೆ ಇವತ್ತು ಹಾಕಿದ ಡೂಡಲ್ಸ್ ನಾಳೆ ನಮಗೆ ಅದರ ಮುಖ ಪುಟದಲ್ಲಿ ಕಾಣಲ್ಲ ಅಲ್ವಾ..? ಹಿಂದಿನ ಗೂಗಲ್ ಡೂಡಲ್ಸ್ ಗಳನ್ನು ನೋಡಲು ನಿಮ್ಮ ಗೂಗಲ್ ಮುಖಪುಟದ ಮೇಲಿನ ಬಲ ತುದಿ (ನಿಮ್ಮ ಎಡ ತುದಿ) ಯಲ್ಲಿನ ಗೂಗಲ್ ಎಂಬ ಸಂಕೇತಾಕ್ಷರದ ವಿನ್ಯಾಸದ ಮೇಲೆ ಕ್ಲಿಕ್ ಮಾಡಿ ‘I’m Feeling Lucky   ಮೇಲೆ ಕ್ಲಿಕ್ ಮಾಡಿ ಹಿಂದಿನ ಡೂಡಲ್ಸ್ ದಿನಾಂಕ ಸಮೇತ ಬರುತ್ತೆ..!

google-doodles

  • ನಿಮ್ಮ ಹತ್ತಿರದ ಏರಿಯಾ ಅಥವಾ ಪ್ರದೇಶವನ್ನು ತಿಳಿಯಲು ಗೂಗಲ್ ಸರ್ಚ್ ನಲ್ಲಿ  “Near Me” ಅಂತ ಟೈಪ್ ಮಾಡಿ ಎಂಟರ್ ಕೊಡಿ..! ತಟ್ಟನೆ ನೀವಿರುವ ಪ್ರದೇಶದ ಸಮೀಪದ ಸ್ಥಳಗಳನ್ನು ನೀವು ತಿಳಿಯ ಬಹುದು..! ಉದಾಹರಣೆಗೆ ನೀವಿರುವ ಪ್ರದೇಶಕ್ಕೆ ಹತ್ತಿರದ ರೆಸ್ಟೋರೆಂಟ್ ಯಾವುದೆಂದು ತಿಳಿಯಲು  ರೆಸ್ಟೋರೆಂಟ್ಸ್ ನಿಯರ್ ಮಿ ಅಂತ ಸರ್ಚ್ ಮಾಡಿ..! ಅದೇ ರೀತಿ ನಿಮ್ಮ ಹತ್ತಿರದ ಪ್ರದೇಶಗಳೆಲ್ಲವನ್ನೂ ತಿಳಿಯ ಬಹುದು..

GT_10

ನಿಮಗೆ ಈ ಗೂಗಲ್ ಟ್ರಿಕ್ಸ್ ಗೊತ್ತಿತ್ತೇ..! ಗೊತ್ತಿದ್ದರೆ ತುಂಬಾ ಸಂತೋಷ..! ಗೊತ್ತಿಲ್ದೆ ಇದ್ರೂ ಇಗ ತಿಳಿದು ಕೊಂಡ್ರಲ್ಲಾ..! ಈಗ ಇದನ್ನು ಶೇರ್ ಮಾಡಿನೋ ಅಥವಾ ನೀವೇ ನೇರವಾಗಿಯೋ ಒಂದಷ್ಟು ಜನರಿಗೆ ತಿಳಿಸಿ..! ಸಾರ್ ನಮಗೆ ಗೊತ್ತಿರುವುದನ್ನು ಬೇರೆ ಅವ್ರಿಗೂ ಗೊತ್ತು ಮಾಡ್ಬೇಕು ಕಣ್ರೀ..

LEAVE A REPLY

Please enter your comment!
Please enter your name here