No menu items!
12.4 C
Munich
Wednesday, April 29, 2026

ಟೀಮ್ ಇಂಡಿಯಾ ನಾಯಕ ಸ್ಥಾನದಿಂದ ಕೊಹ್ಲಿ ಔಟ್, ರೋಹಿತ್ ಹೊಸ ನಾಯಕ

Must read

ಅಕ್ಟೋಬರ್‌-ನವೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಪ್ರತಿಷ್ಠಿತ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಟೂರ್ನಿ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ವೈಟ್‌ಬಾಲ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ವೈಟ್‌ಬಾಲ್ ಮತ್ತು ರೆಡ್‌ಬಾಲ್ ಎರಡಕ್ಕೂ ಸದ್ಯ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ. ಆದರೆ ಮುಂದೆ ವೈಟ್‌ಬಾಲ್ ನಾಯಕತ್ವ ಶರ್ಮಾ ಅವರದ್ದಾಗಲಿದೆ.

32ರ ಹರೆಯದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್, ಟಿ20ಐ ಮತ್ತು ಟೆಸ್ಟ್‌ ಕ್ರಿಕೆಟ್‌ನ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ ಟಿ20 ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್ ಮತ್ತು ಟಿ20ಐ ಕ್ರಿಕೆಟ್‌ನ ನಾಯಕತ್ವವನ್ನು 34ರ ಹರೆಯದ ರೋಹಿತ್ ಶರ್ಮಾ ವಹಿಸಿಕೊಳ್ಳಲಿದ್ದಾರೆ. ವೈಟ್‌ಬಾಲ್‌ನಲ್ಲಿ ವಿಶೇಷ ದಾಖಲೆಗಳನ್ನು ಹೊಂದಿರುವ ಶರ್ಮಾಗೆ ನಾಯಕತ್ವ ನೀಡಲಿರುವ ವಿಚಾರ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ತಂದಿದೆ.

ಸ್ವತಃ ವಿರಾಟ್ ಕೊಹ್ಲಿಯವರೇ ಟಿ 20 ವಿಶ್ವಕಪ್ ನಂತರ ಭಾರತದ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳ ನಾಯಕ ಸ್ಥಾನದಿಂದ ಕೆಳಗಿಯುವ ಘೋಷಣೆಯನ್ನು ಟಿ ಟ್ವೆಂಟಿ ವಿಶ್ವಕಪ್ ನಂತರ ಮಾಡಲಿದ್ದಾರೆ ಎಂದು ವರದಿಯಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article