No menu items!
20.9 C
Munich
Friday, August 21, 2026

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಪಕ್ಕಾ

Must read

ಟೋಕಿಯೋ ಒಲಿಂಪಿಕ್ಸ್ ಆರಂಭವಾಗಿ 7 ದಿನಗಳು ಕಳೆದಿದ್ದು ಇದುವರೆಗೂ ಭಾರತದ ಪರ ಪದಕವನ್ನು ಗೆದ್ದಿರುವ ಏಕೈಕ ಆಟಗಾರ್ತಿ ಮೀರಾಬಾಯಿ ಚಾನು ಮಾತ್ರ. ಸೈಕೋಮ್ ಮೀರಾಬಾಯಿ ಚಾನು ಹೊರತುಪಡಿಸಿ ಭಾರತದ ಬೇರೆ ಯಾವುದೇ ಕ್ರೀಡಾಪಟು ಕೂಡ ಪದಕವನ್ನು ಗೆದ್ದಿಲ್ಲ.

ಪಿವಿ ಸಿಂಧು, ಅತನು ದಾಸ್, ದೀಪಿಕಾ ಕುಮಾರಿ ಮತ್ತು ಭಾರತದ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ಇವರುಗಳ ಜೊತೆ ಇದೀಗ ಭಾರತದ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಪ್ರವೇಶ ಮಾಡಿದ್ದು ಭಾರತಕ್ಕೆ ಮತ್ತೊಂದು ಪದಕ ಬರುವುದು ಖಚಿತವಾಗಿದೆ.


ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದ ಎರಡನೇ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಚೀನಾದ ಎನ್ ಸಿ ಚೆನ್ ವಿರುದ್ಧ 4-1 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಭಾರತದ ಲೊವ್ಲಿನಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಲಭಿಸುವುದು ಖಚಿತವಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article