ಡಿಕೆ ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ ನೊಟೀಸ್ ನೀಡಿದೆ. ಉಷಾ, 112 ಕೋಟಿ ರೂ. ಆಸ್ತಿ ಹೊಂದಿದ್ದಾರೆ. 86 ಕೋಟಿ ಸ್ಥಿರಾಸ್ತಿ ಇದೆ. ಆಸ್ತಿ ಮಾರುಕಟ್ಟೆ ಮೌಲ್ಯವನ್ನು ಉಷಾ ಹೇಳಿದ್ದರು. ಪಿತ್ರಾರ್ಜಿತವಾಗಿ ಬಂದ ಆಸ್ತಿಯ ಬಗ್ಗೆಯೂ ಮಾಹಿತಿ ನೀಡಿದ್ದರು.
ಇದೇ ವೇಳೆ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಅವ್ರಿಗೆ ಇಡಿ ನೊಟೀಸ್ ನೀಡಿದೆ. ನಾಳೆ ದೆಹಲಿಗೆ ಬರುವಂತೆ ನೊಟೀಸ್ ನಲ್ಲಿ ಹೇಳಲಾಗಿದೆ.ಗೌರಮ್ಮ ತಮ್ಮ ಮೊಮ್ಮಗಳು ಐಶ್ವರ್ಯಗೆ ಹಣ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಹಾಗೆ ಜಮೀನು ನೀಡಲಾಗಿದೆ. ಮೊಮ್ಮಗಳು ಹಾಗೂ ಮಕ್ಕಳಿಗೆ ಹಣ ವರ್ಗಾವಣೆ ಮಾಡಿರುವ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.