ಡಿವೋರ್ಸ್ ಆದ್ಮೇಲೆ ಜೀವನ ಕಳೆಯೋದು ಹೇಗೆ?

1
91

ಡಿವೋರ್ಸ್ ಆದ್ಮೇಲೆ ಜೀವನ ಕಳೆಯೋದು ಹೇಗೆ?

ಜೀವನದಲ್ಲಿ ಸುಖ-ದುಃಖ, ನೋವು-ನಲಿವು ಎಲ್ಲಾ ಮಾಮೂಲಿ. ಸೋಲು-ಗೆಲುವು ಎಲ್ಲವೂ ಕಾಮನ್. ಸಾಂಸಾರಿಕ ಜೀವನ…ಆ ಜೀವನದಲ್ಲಿ ಖುಷಿ, ದುಃಖವೂ ಇದ್ದಿದ್ದೇ.‌ ಮದುವೆಯಾದ ಬಳಿಕ ಡೈವರ್ಸ್ ಆಗಬಾರದು ಎಂದರೂ ಕೆಲವೊಮ್ಮೆ , ಕೆಲವರ ಜೀವನದಲ್ಲಿ ಅದೂ ನಡೆದು ಹೋಗುತ್ತದೆ.

ವಿಚ್ಚೇದನವಾದಾಗ ನೀವು ನೀವಾಗಿ ಬದುಕಲೇ ಬೇಕು. ಆ ನೋವಿನಿಂದ ಹೊರಬರಲೇ ಬೇಕು. ನೀವೇ ಇಷ್ಟ ಪಟ್ಟು ದೂರವಾದರೂ ಕೆಲವು ನೆನಪುಗಳು ನಿಮ್ಮನ್ನು ಕಾಡುತ್ತಾ ಇರುತ್ತವೆ.
ಅದಕ್ಕಾಗಿ ನೀವು ಏನು ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿ ತಿಳಿಸಿದ್ದೇವೆ.

* ದುಃಖ ಇದ್ದಿದ್ದೇ…ಹಾಗಂತ ಬರೀ ದುಃಖಿಸುತ್ತಲೇ ಕಾಲ ಕಳೆಯಬೇಡಿ. ಹೆಚ್ಚು ದುಃಖಿಸ ಬೇಡಿ. ದುಃಖದಲ್ಲೇ ಕಾಲ ಕಳೆದರೆ ನಿಮ್ಮ ಮುಂದಿನ ಭವಿಷ್ಯ ಕೂಡ ಹಾಳಾಗುತ್ತದೆ.

* ನಿಮ್ಮ ಭಾವನೆಗಳನ್ನು , ದುಃಖವನ್ನು ಆತ್ಮೀಯರಲ್ಲಿ ಹೇಳಿಕೊಳ್ಳಿ. ಅದರಿಂದಲೂ ಪ್ರಯೋಜನವಾಗದೇ ಇದ್ದರೆ ಥೆರೆಪಿ ಮೊರೆ ಹೋಗಿ. ಅಲ್ಲೂ ಆಗಿಲ್ಲ ಎಂದಾದರೆ ಆಧ್ಯಾತ್ಮದ ಮೊರೆ ಹೋಗಿ. ‌

* ಹಳೆಯದರ ಬಗ್ಗೆ ಚಿಂತಿಸಬೇಡಿ. ನಿಮ್ಮನ್ನು ನೀವು ಹುಡುಕಿಕೊಂಡು ನಿಮಗಾಗಿ ಕಾಲ ಕಳೆಯಿರಿ. ನಿಮ್ಮನ್ನು ನೀವು ಕಂಡು ಕೊಳ್ಳಿ.

* ಬದುಕನ್ನು ಎಂಜಾಯ್ ಮಾಡಿ. ಹೊರಗಡೆ ಹೆಚ್ಚು ಸಮಯ ಕಳೆಯಿರಿ. ಬೇರೆಯವರೊಂದಿಗೆ ಹೆಚ್ಚಾಗಿ ಬೆರೆಯಿರಿ.

* ಗತಿಸಿ ಹೋಗಿದ್ದು ಹೋದಂತೆ..ಅದರ ಬಗ್ಗೆ ತುಂಬಾ ಯೋಚನೆ ಮಾಡುತ್ತಾ ಕಾಲ ಕಳೆಯಬೇಡಿ.

*ವಾಟ್ಸಪ್ ಸ್ಟೇಟಸ್ , ಫೇಸ್ ಬುಕ್ ಪೋಸ್ಟ್ ಬೇಡ. ನಿಮ್ಮ ನೋವು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟರೆ ಸಿಗುವುದು ಏನು? ನಾಲ್ಕೈದು ಸ್ಯಾಡ್ ಎಮೋಜಿ ತಾನೆ..?ಅದನ್ನು ಬಿಟ್ಟು ಏನು ಲಾಭ?

* ಹೊಸ ಸಂಬಂಧ ಬಂದರೆ ಅದರೊಡನೆ ಅರ್ಥ ಮಾಡಿಕೊಂಡು ಬದುಕಿ‌.ಹಳೆಯ ನೆನಪಲ್ಲಿ ಹೊಸ ಸಂಬಂಧ ಬಿಡಬೇಡಿ.

* ಹೊಸ ಕೌಶಲ್ಯ ಕಲೀರಿ.‌ ಕೆಲಸದ ಬಗ್ಗೆ ಗಮನ ಕೊಡಿ .ಸಾಧನೆಯತ್ತ ಮುನ್ನುಗ್ಗಿ. ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ.

* ಆರ್ಥಿಕವಾಗಿ ಬಲಾಢ್ಯರಾಗಿ. ನಿಮಗಾಗಿ ನೀವು ಬದುಕಿ.

* ಡೇಟಿಂಗ್ ಮಾಡಿ.‌ಮನಸ್ಸು ಹಗುರವಾಗುತ್ತದೆ. .

ಒಟ್ಟಿನಲ್ಲಿ ವಿಚ್ಛೇದನ , ಬ್ರೇಕಪ್ ಆದಾಗ ಜೀವನವೇ ಮುಗಿಯಿತು ಎಂದು ಡಿಪ್ರೆಶನ್ ಗೆ ಒಳಗಾಗಬೇಡಿ. ನಿಮಗಾಗಿ ನೀವಿರಿ..ನಿಮ್ಮ ಬದುಕನ್ನು ಕಟ್ಟಿಕೊಳ್ಳಿ.

 

1 COMMENT

LEAVE A REPLY

Please enter your comment!
Please enter your name here