ಕೈ ತುಂಬ ಸಂಬಳ ಸಿಕ್ತಿದ್ದ ಕೆಲ್ಸ ಬಿಟ್ಟು ಈಕೆ ಮಾಡಿದ್ದೇನು?

1
116

ಕೈ ತುಂಬ ಸಂಬಳ ಸಿಕ್ತಿದ್ದ ಕೆಲ್ಸ ಬಿಟ್ಟು ಈಕೆ ಮಾಡಿದ್ದೇನು?

ಮಲ್ಲಿಕಾ ಘೋಷ್ . ಮೂಲತಃ ಬೆಂಗಳೂರಿನವರು. ಮಲ್ಲಿಕಾ ಮತ್ತು ಅವರ ತಾಯಿ ಎಲೈನ್ ಘೋಷ್ ‘ಪರಿನಾಮ್ ’ ಅನ್ನೋ ಸಂಸ್ಥೆ ಸ್ಥಾಪಿಸಿ ಹಲವರ ಬಾಳಿಗೆ ಆಶಾಕಿರಣವಾಗಿದ್ಧಾರೆ. ತಾಯಿ ಸ್ಥಾಪಿಸಿದ ಪರಿನಾಮ್ ಅನ್ನು ಅವರು ವಿಧಿವಶವಾದ ಮೇಲೂ ಅವರ ಆಶಯವನ್ನು ಪೂರ್ಣಗೊಳಿಸಿದ ಹೆಗ್ಗಳಿಕೆ ಮಲ್ಲಿಕಾ ಘೋಷ್ ಅವರದ್ದು.

ಮಲ್ಲಿಕಾ ಘೋಷ್ ಅವರು, ಇಂಗ್ಲೆಂಡ್ನ ಬೋರ್ಡಿಂಗ್ ಸ್ಕೂಲ್ ಮತ್ತು ಯುಎಸ್ಎಯ ಯೂನಿವರ್ಸಿಟಿ ಯೊಂದರಲ್ಲಿ ವ್ಯಾಸಂಗ ಮಾಡಿದವರು. ನಂತ್ರ ಮೆಕ್ಕಾನ್ ಅವರು ಎರಿಕ್ಸನ್ನಲ್ಲಿ ದಕ್ಷಿಣ ಭಾರತದ ಚಿತ್ರಗಳ ಮುಖ್ಯಸ್ಥರಾಗಿದ್ದರು. ಆದ್ರೆ, ಸಾಮಾಜಿಕ ಕೆಲಸಗಳನ್ನು ಮಾಡಬೇಕೆಂಬ ಹಂಬಲ ಅವರನ್ನು ಕೆಲಸ ಬಿಡುವಂತೆ ಮಾಡಿತು.
ಮಲ್ಲಿಕಾ ಅವರ ತಂದೆ ಸಮಿತ್ ಘೋಷ್ ಖ್ಯಾತ ಮೈಕ್ರೋ ಫೈನಾನ್ಸ್ ಉಜ್ಜೀವನ್ ಅನ್ನೋ ಸಂಸ್ಥೆಯನ್ನು 2005ರಲ್ಲಿ ಸ್ಥಾಪಿಸಿದ್ದರು. ಆದ್ರೆ, ಪರಿನಾಮ್ ಸ್ಥಾಪನೆಯ ಹಿಂದೆ ದೊಡ್ಡ ಕನಸಿತ್ತು. ಆದ್ರೆ ಬಡಬಗ್ಗರಿಗೆ, ದೀನ ದಲಿತರಿಗೆ ಕೇವಲ ಆರ್ಥಿಕ ಸಹಾಯ ಮಾತ್ರ ಸಾಕಾಗೋದಿಲ್ಲ ಅನ್ನೋ ಅರಿವಿತ್ತು. ಹೀಗಾಗಿ ಬೇರೇನಾದ್ರೂ ಸಹಾಯ ಮಾಡ್ಬೇಕು ಅನ್ನೋ ಕನಸು ಹುಟ್ಟಿಕೊಂಡಿತ್ತು.
ಕೆಲವರು, ಬಡತನ ಅದ್ರ ಪಾಡಿಗೆ ಅದು ಹುಟ್ಟಿಕೊಳ್ಳುತ್ತೆ ಅನ್ನೋದನ್ನ ನಂಬಿದ್ದರು ಇವ್ರು. ಬಡವರಿಗೆ ಪರಿನಾಮ್ ಹಲವು ವಿಷಯಗಳಲ್ಲಿ ಸಹಾಯ ನೀಡುತ್ತಿದೆ. ಪರಿನಾಮ್, ಹೆಲ್ತ್ಕೇರ್, ಶಿಕ್ಷಣ, ಊಟ, ವಸತಿ ಮತ್ತು ಸಾಮಾಜಿಕ ಪರಿವರ್ತನೆಗಳಂತಹ ಕೆಲಸವನ್ನು ಮಾಡುತ್ತಿದೆ. ಹೀಗಾಗಿ ತಂದೆಯರ ಉಜ್ಜೀವನ್ ಫೈನಾನ್ಸ್ಗಿಂತ ಸಾಕಷ್ಟು ಮುಂದೆ ನಿಂತಿದೆ.

ಮಲ್ಲಿಕಾ ಅವರು, ಕಾರ್ಪೋರೇಟ್ ಕೆಲಸ ಬಿಟ್ಟು ಸಾಮಾಜಿಕ ಕೆಲಸಕ್ಕೆ ನಿಂತಿದ್ದು ದೊಡ್ಡ ಕೆಲಸವೇ ಸರಿ. ವಿದೇಶದಲ್ಲಿ ಓದಿದ್ದ ಮಲ್ಲಿಕಾ ಅವರು ಮೊದಲು ಚಿತ್ರತಾರೆ ಆಗ್ಬೇಕೆಂದು ಕನಸು ಕಂಡಿದ್ರು. ಅದಕ್ಕಾಗಿಯೇ 7 ವರ್ಷಗಳ ಕಾಲ ಜಾಹೀರಾತು ಕ್ಷೇತ್ರದಲ್ಲಿ ದುಡಿಮೆ ಮಾಡಿದ್ರು. ಆದ್ರೆ ಅದು ತೃಪ್ತಿ ನೀಡಲಿಲ್ಲವೆಂದು ಗುಡ್ ಬೈ ಹೇಳಿ ಬಡವರ ಶ್ರೇಯೋಭಿವೃದ್ಧಿಗೆ ದುಡಿಯಲು ಅಣಿಯಾದ್ರು.
ಮಲ್ಲಿಕಾ ಘೋಷ್ ಅವರು, ಬಡವರಿಗೆ ಏನಾದರೂ ಸಹಾಯ ಮಾಡಬೇಕೆಂದು ಆಲೋಚಿಸಿದ್ರು. ಅಪ್ಪ ಅಮ್ಮ ಮನೆಯಲ್ಲಿ ಬಡ ಮಹಿಳೆಯರಿಗೆ ಸಹಾಯ ಮಾಡುವ ಬಗ್ಗೆ ಚರ್ಚಿಸ್ತಾ ಇದ್ರು. ಬಡ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಪ್ಲಾನ್ಗಳನ್ನು ಮಾಡುತ್ತಿದ್ದರು. ಬಡವರ ಆರೋಗ್ಯದ ಬಗ್ಗೆ ಯೋಜನೆಗಳನ್ನು ರೂಪಿಸಿದ್ದರು. ಶಿಕ್ಷಣ ಇಲ್ಲದವರಿಗೆ ಅದನ್ನು ನೀಡುವ ಬಗ್ಗೆ, ಚರ್ಚಿಸುತ್ತಾ ಇದ್ರು. ಇದು ಮಲ್ಲಿಕಾ ಅವರ ಬದುಕು ಬದಲಿಸಿತು.
ಮಲ್ಲಿಕಾ ಅವರಿಗೆ ಮೊದ ಮೊದಲು ತಂದೆಯವರ ಉಜ್ಜೀವನ್ ಅಥವಾ ತಾಯಿಯರ ಪರಿನಾಮ್ನಲ್ಲಿ ಕೆಲಸ ಮಾಡೋದು ಇಷ್ಟ ಇರಲಿಲ್ಲವಂತೆ. ಆದರೆ, ಬಡವರ ಮಕ್ಕಳ ಜೊತೆಗೆ ಸಮಯ ಕಳೆಯೋದು ಮತ್ತು ಅವರಿಗೆ ಸಹಾಯ ಮಾಡೋದು ಮೊದಲ ಕನಸಾಗಿತ್ತಂತೆ. ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ಅವರ ಅಮ್ಮ ವಿಧಿವಶರಾದ್ರು. ಅನಿವಾರ್ಯವಾಗಿ ತಾಯಿ ನಡೆಸುತ್ತಿದ್ದ ಪರಿನಾಮ್ ಹೊಣೆ ಹೊತ್ತರು.

ಕಡುಬಡವರಿಗೆ ಆರ್ಥಿಕ ಶಿಕ್ಷಣ ಅನ್ನೋದು ಮಲ್ಲಿಕಾ ಅವರ ಅಮ್ಮನ ಯೋಚನೆ ಆಗಿತ್ತಂತೆ. ಅದಕ್ಕಾಗಿ ಪರಿನಾಮ್ ಮೂಲಕ ಬಡ ಮನೆಬಾಗಿಲುಗಳತ್ತ ಮುಖ ಮಾಡಿದರು. ಆರಂಭದಲ್ಲಿ ನಗರದ ಕಡುಬಡವರನ್ನು. ಕನಿಷ್ಠ ಸೌಲಭ್ಯದ ಜೊತೆ ಹಣಕಾಸಿನ ನೆರವು ಸಿಗಬೇಕಾದ್ರೆ ಬೇಕಾಗಿರುವ ಅಂಶಗಳನ್ನು ಕಂಡುಕೊಂಡು ಅವುಗಳನ್ನು ಈಡೇರಿಸುವ ಕೆಲಸ ಮಾಡಿದ್ರು. ಬಡವರಿಗಾಗಿ ಹಲವಾರು ಅರ್ಥಿಕ ಯೋಜನೆಗಳನ್ನು ತಂದು ಸೈ ಎನಿಸಿಕೊಂಡ್ರು.
ಮಲ್ಲಿಕಾ ಘೋಷ್ ಅವರು ತಮ್ಮ ಪರಿನಾಮ್ ಸಂಸ್ಥೆ ಮೂಲಕ ಸಾವಿರಾರು ಬಡವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಆರ್ಥಿಕ ಅರಿವು ನೀಡುತ್ತಿದ್ದಾರೆ. ಬಡವರ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಮುನ್ನುಡಿಯಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಮೂಲಕ ಸಾಮಾಜಿಕ ಕಾರ್ಯವನ್ನೂ ಗಟ್ಟಿಯಾಗಿ ಮಾಡುತ್ತಿದ್ದಾರೆ.
ಏನೇ ಹೇಳಿ, ಪರಿನಾಮ್ ಹಲವು ಜನರ ಬದುಕನ್ನು ಬದಲಿಸುವ ಜೊತೆಗೆ ಮಲ್ಲಿಕಾ ಘೋಷ್ ಅವರ ಬದುಕನ್ನು ಕೂಡ ಬದಲಿಸುವ ಮೂಲಕ ಇತರರಿಗೆ ಸ್ಪೂರ್ತಿ ಸೆಲೆ ಆಗಿರುವುದು ಹೆಮ್ಮೆಯ ಸಂಗತಿಯೇ ಸರಿ.

1 COMMENT

LEAVE A REPLY

Please enter your comment!
Please enter your name here