No menu items!
20.3 C
Munich
Monday, June 15, 2026

ಡ್ಯಾನ್ಸರ್ ಕಿಂಗ್ ಈಗ ಟೆಂಡ್ರಿಂಗ್ನಲ್ಲಿ ನಂ 01.!

Must read

ಸೆಂಚುರಿ ಸ್ಟಾರ್ ಶಿವಣ್ಣ, ಡ್ಯಾನ್ಸಿಂಗ್ನಲ್ಲಿ ಕಿಂಗ್ ಅನ್ನೋದು ಇಡೀ ಚಂದನವನಕ್ಕೆ ಗೊತ್ತಿರೋ ವಿಷಯ. ವಯಸ್ಸು 50 ದಾಟಿದ್ರೂ ಯುವಕರೂ ನಾಚುವಂತೆ ಸ್ಟೆಪ್ ಹಾಕಿ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡ್ತಾರೆ. ಸದ್ಯ ರವಿವರ್ಮ ನಿರ್ದೇಶನದಲ್ಲಿ ಬರ್ತಿರೋ ‘ರುಸ್ತುಂ’ ಚಿತ್ರದ ‘ಯೂ ಆರ್ ಮೈ ಪೊಲೀಸ್ ಬೇಬಿ’ ಅನ್ನೋ ಮೊದಲ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಹಾಡಿನಲ್ಲಿ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಜೊತೆಯಾಗಿ ಶಿವಣ್ಣ ತಕಥೈ ಅಂತಾ ಕುಣಿದಿದ್ದಾರೆ.
ಕಣ್ಣಲ್ಲಿ ಕನ್ನಡಕ, ರಂಗು ರಂಗಿನ ಡ್ರೆಸ್, ಅದ್ಧೂರಿ ಸೆಟ್ನಲ್ಲಿ ಶಿವಣ್ಣ ಹಾಗೂ ಶ್ರದ್ಧಾ ಮಿಂಚಿದ್ದಾರೆ. ಇನ್ನು ಈ ಹಾಡಿಗೆ ಎ.ಪಿ ಅರ್ಜುನ್ ಲಿರಿಕ್ಸ್ ಬರೆದಿದ್ದು ರಘು ದೀಕ್ಷಿತ್ ಹಾಗೂ ಅಪೂರ್ವ ಶ್ರೀಧರ್ ಕಂಠದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ. ಜೊತೆಗೆ ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜನೆಯಿದೆ. ಸದ್ಯ ಈ ಹಾಡು ಭಾರೀ ಜನಮೆಚ್ಚುಗೆ ಗಳಿಸಿದ್ದು, 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸೋ ಮೂಲಕ ಟ್ರೆಂಡಿಂಗ್ನಲ್ಲಿ ಟಾಪ್ 15ನೇ ಸ್ಥಾನದಲ್ಲಿದೆ. ಚಿತ್ರದಲ್ಲಿ ಶಿವಣ್ಣ ರಗಡ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ವಿವೇಕ್ ಒಬೇರಾಯ್, ಮಯೂರಿ, ಶಿವರಾಜ್ ಕೆ. ಆರ್ ಪೇಟೆ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಚಿತ್ರ ಇದೇ ಜೂನ್ 14 ರಂದು ತೆರೆಗೆ ಅಪ್ಪಳಿಸಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article