No menu items!
13.9 C
Munich
Sunday, May 24, 2026

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ: ಪೊಲೀಸರ ಅತಿಥಿಯಾದ ಅಪ್ಪ..!

Must read

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ: ಪೊಲೀಸರ ಅತಿಥಿಯಾದ ಅಪ್ಪ..!

ಬೆಂಗಳೂರು: ಹೆಣ್ಣುಮಕ್ಕಳಿಗೆ ಅಪ್ಪನೇ ಸೂಪರ್ ಹೀರೋ ಎಂಬ ಮಾತುಗಳು ನಾವು ಹಾಗಾಗ ಕೇಳುತ್ತಿರುತ್ತೇವೆ. ಅದರಂತೆ ಹೆಣ್ಣುಮಕ್ಕಳು ಸಹ ತಾಯಿಗಿಂತ ಅಪ್ಪನ ಮೇಲೆ ವಿಶೇಷ ಪ್ರೀತಿಯನ್ನು ಹೊಂದಿರುತ್ತಾರೆ. ಆದರೆ ಇಲ್ಲೋರ್ವ ವ್ಯಕ್ತಿ ಅಪ್ಪ ಎಂಬ ಪದಕ್ಕೆ ಮಸಿ ಬಳಿದಿದ್ದಾನೆ. ಮಗಳು ಎನ್ನುವುದನ್ನು ನೋಡದೇ ತಂದೆಯೇ ಆಕೆ ಮೇಲೆ ತನ್ನ ವಿಕೃತ ಕಾಮದ ತೀಟೆ ತೀರಿಸಿಕೊಂಡಿದ್ದಾನೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ತನ್ನ 19 ವರ್ಷದ ಮಗಳ ಮೇಲೆ ತಂದೆಯೇ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಕಾರು ಚಾಲಕನಾಗಿದ್ದ ತಂದೆ ಈ ಕೃತ್ಯ ಎಸಗಿದ್ದಾನೆ ಎಂದು ಸ್ವತಃ ಮಗಳೇ ಪೊಲೀಸ್ ಠಾಣೆಗೆ ಹೋಗಿ ತಂದೆ ವಿರುದ್ಧ ದೂರು ನೀಡಿದ್ದಾಳೆ.
ಈ ಪಾಪಿ ತಂದೆಗೆ ಮೂರು ಜನ ಮಕ್ಕಳಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದಾನೆ. ತನ್ನ ಹಿರಿಯ ಮಗಳ ಮೇಲೆ ತಂದೆ ನಿರಂತರವಾಗಿ‌ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ತಂದೆಯ ಕಿರುಕುಳ ತಾಳಲಾರದೆ ಯುವತಿ ಮನೆಯಿಂದ ದೂರ ಇದ್ದಳು. ಪಿಜಿಯಲ್ಲಿ ವಾಸಿಸಲು ಆರಂಭಿಸಿದ್ದಳು. ಆದರೆ ಆಗಲೂ ಈತ ಹಿಂದೆ ಕೊಡುತ್ತಿದ್ದನಂತೆ. ಈ ವಿಷಯ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಆರೋಪಿ ತಂದೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಇದೇ ಭಯದಿಂದ ಮತ್ತು ತಂದೆ ಕಾಟ ತಾಳಲಾರದೇ ಯುವತಿ ಮನೆಯಿಂದ ದೂರ ಉಳಿದಿದ್ದಳು. ನಂತರ ನಿರಂತರ ಕಾಟ, ಮಾನಸಿಕ ಹಿಂಸೆ ತಾಳಲಾರದೇ ದೂರು ನೀಡುವ ನಿರ್ಧಾರ ಮಾಡಿದ್ದಾಳೆ. ಅಂಬೇಡ್ಕರ್ ಸೇವಾ ಸಮಿತಿ ಸಂಘಟನೆಯ ಸಹಾಯ ಪಡೆದು ಯುವತಿ ತಂದೆಯ ವಿರುದ್ಧ ದೂರು ದಾಖಲಿಸಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.

- Advertisement -spot_img

More articles

- Advertisement -spot_img

Latest article