ನನ್ನ ಜೀವಮಾನದಲ್ಲಿ ‘ಮೋದಿಯಂತಹ ಹೇಡಿ, ದುರ್ಬಲ ಪ್ರಧಾನಿಯನ್ನು ನೋಡಿಲ್ಲ’ ಪ್ರಿಯಾಂಕ ಗಾಂಧಿ ವಿವಾದಾತ್ಮಕ ಹೇಳಿಕೆ !?

Must read

ತಮ್ಮ ಜೀವಮಾನದಲ್ಲೇ ಮೋದಿ ಅವರಷ್ಟುದುರ್ಬಲ ಹಾಗೂ ಹೇಡಿ ಪ್ರಧಾನಿಯನ್ನು ನೋಡಿಯೇ ಇಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಚುನಾವಣಾ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ‘ಟೀವಿ ಶೋಗಳು ಹಾಗೂ ದೊಡ್ಡ-ದೊಡ್ಡ ರಾರ‍ಯಲಿಗಳ ಮೂಲಕ ರಾಜಕೀಯ ಶಕ್ತಿ ಸಾಧಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೊಡ್ಡವರು,’ ಎಂದು ಹೇಳುವ ಮೋದಿಗೆ ಟಾಂಗ್‌ ನೀಡಿದರು. ಓರ್ವ ನಾಯಕನಿಗೆ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪರಿಹರಿಸುವ ಶಕ್ತಿ ಇರಬೇಕು.

ಪ್ರತಿಪಕ್ಷಗಳ ಧ್ವನಿಯನ್ನು ಕೇಳುವ ವ್ಯವಧಾನ ಇರಬೇಕು. ನಿಮ್ಮ ಧ್ವನಿ ಕೇಳುವುದನ್ನು ಬಿಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲೂ ಮೋದಿ ಅವರಿಗೆ ಗೊತ್ತಿಲ್ಲ,’ ಎಂದು ಕಿಡಿಕಾರಿದರು.

ಈಡೇರಿಸದೇ ಹಾಗೆಯೇ ಉಳಿದ ರೈತರ ಆದಾಯ ಹೆಚ್ಚಿಸುವ ಹಾಗೂ 2 ಕೋಟಿ ಹುದ್ದೆಗಳ ಕುರಿತಾಗಿ ಜನತೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಮೋದಿ ಅವರು ವಿಫಲರಾಗಿದ್ದಾರೆ. ಪ್ರಧಾನಿ ಮೋದಿ ಅವರು ನಿಜವಾಗಿಯೂ ಶಕ್ತಿಶಾಲಿಯಾಗಿದ್ದರೆ, ನಿಮ್ಮ ಸಮಸ್ಯೆಗಳನ್ನು ಅವರು ಏಕೆ ಪರಿಹರಿಸುತ್ತಿಲ್ಲ. ತಮ್ಮ ಪ್ರತಿಯೊಂದು ಭಾಷಣದಲ್ಲಿಯೂ ಪಾಕಿಸ್ತಾನವನ್ನು ಉಲ್ಲೇಖಿಸುತ್ತಾರೆ. ಆದರೆ, ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಏನು ಮಾಡಿದೆ ಎಂಬ ಬಗ್ಗೆಯೂ ತಿಳಿಸಬೇಕು. ನೀವು ನಮಗೆ ನಾಯಕರನ್ನಾಗಿ ಮಾಡಿದ್ದೀರಿ. ಆದರೆ, ನಮಗಿಂತ ನೀವೇ ದೊಡ್ಡವರು ಎಂದು ಪ್ರಿಯಾಂಕಾ ವಾದ್ರಾ ಹೇಳಿದರು.

- Advertisement -spot_img

More articles

- Advertisement -spot_img

Latest article