ರಾನು ಮೊಂಡಲ್ ಎಂಬ ಸಿಂಗರ್ ಬಗ್ಗೆ ನಾವು ನಿಮಗೆ ಹೆಚ್ಚೇನು ಹೇಳಬೇಕಾಗಿಲ್ಲ ಏಕೆಂದರೆ ಇವರು ಹೇಗೆ ಫೇಮಸ್ ಆದರು ಎಂಬುದನ್ನು ಸಾಮಾಜಿಕ ಜಾಲತಾಣದ ಮೂಲಕ ನೀವೇ ಹೆಚ್ಚಾಗಿ ನೋಡಿರುತ್ತೀರಾ. ಹೌದು ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ರಾನು ಮೊಂಡಲ್ ಇದ್ದಕ್ಕಿದ್ದಂತೆ ಓವರ್ ನೈಟ್ ಸ್ಟಾರ್ ಆಗಿಬಿಟ್ಟರು.
ಇಂಥವರನ್ನು ಕರೆದುಕೊಂಡು ಬಂದು ಚಿತ್ರಗಳಲ್ಲಿ ಹಾಡಲು ಅವಕಾಶ ನೀಡಿ ಸೆಲೆಬ್ರಿಟಿಯ ರೇಂಜಿಗೆ ಈಕೆ ಬೆಳೆದಿದ್ದಾಳೆ. ಕಷ್ಟದ ದಿನಗಳನ್ನು ಎದುರಿಸಿರುವ ಈಕೆ ನಡೆದು ಬಂದ ಹಾದಿಯನ್ನು ಮರೆಯದೆ ಇರಬೇಕಾಗಿತ್ತು. ಆದರೆ ಈಕೆ ಹೊರಗೆ ಹೊಂದಿದ್ದಂತಹ ಸಂದರ್ಭದಲ್ಲಿ ಈಕೆಯ ಅಭಿಮಾನಿಯೊಬ್ಬರು ಬಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಭುಜ ಮುಟ್ಟಿ ಕರೆದಿದ್ದಾರೆ.. ಅಭಿಮಾನಿ ಭುಜ ಮುಟ್ಟಿದರು ಎಂಬ ಕಾರಣಕ್ಕೆ ಗರಂ ಆದ ರಾನು ಹೀಗೆ ಏಕೆ ನನ್ನ ಕರೆಯುತ್ತೀಯಾ ಭುಜ ಮುಟ್ಟಬೇಡ ಎಂದು ಅಭಿಮಾನಿಗೆ ಸ್ಥಳದಲ್ಲಿಯೇ ಆವಾಜ್ ಹಾಕಿದ್ದಾಳೆ. ಇನ್ನು ಈಕೆಯ ವರಸೆಯನ್ನು ಸ್ಥಳೀಯರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.