ನಿಮ್ಮ ಆಧಾರ್ ಕಾರ್ಡಲ್ಲಿ ಎಷ್ಟು ಸಿಮ್ ಗಳು ನೋಂದಯಿಸಲ್ಪಟ್ಟಿವೆ ಗೊತ್ತಾ?

1
59

ಹೊಸ ಸಿಮ್ ಕಾರ್ಡ್ ಒಂದನ್ನು ಕೊಳ್ಳುವಾಗ ಸಾಮಾನ್ಯವಾಗಿ ನಾವು ಐಡಿ ಹಾಗೂ ಅಡ್ರೆಸ್ ಪ್ರೂಫ್ಗಾಗಿ ನಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಿರುತ್ತೇವೆ. ಹೀಗೆ ಪ್ರತಿಬಾರಿಯೂ ಸಿಮ್ ಕೊಳ್ಳುವಾಗ ಆಧಾರ್ ಸಂಖ್ಯೆ ಕೊಟ್ಟಿರುತ್ತೇವೆ.
ಆದರೆ ದಿನಕಳೆದಂತೆ ಹಳೆಯ ಮೊಬೈಲ್ ನಂಬರುಗಳನ್ನು ಉಪಯೋಗಿಸುವುದನ್ನು ಬಿಟ್ಟುಬಿಟ್ಟಿರುತ್ತೇವೆ. ಕೊನೆಕೊನೆಗೆ ಯಾವೆಲ್ಲಾ ಮೊಬೈಲ್ ಸಂಖ್ಯೆಗಳಿಗೆ ನಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬುದು ಸಹ ನೆನಪಿರಲ್ಲ. ಇನ್ನು ಕೆಲ ಬಾರಿ ನಮಗೆ ಗೊತ್ತಿಲ್ಲದೆಯೇ ಮತ್ತೊಬ್ಬರು ನಮ್ಮ ಆಧಾರ್ ಸಂಖ್ಯೆ ಬಳಸಿ ಸಿಮ್ ಪಡೆದುಕೊಂಡಿರಬಹುದು.

ಇಂಥ ಪರಿಸ್ಥಿತಿಯಲ್ಲಿ ನಮ್ಮ ಆಧಾರ್ ಸಂಖ್ಯೆ ಬಳಸಿ ಯಾವೆಲ್ಲ ಸಿಮ್ ಕಾರ್ಡ್ ನೋಂದಾಯಿಸಲ್ಪಟ್ಟಿವೆ ಎಂಬುದನ್ನು ತಿಳಿಯುವುದು ಹೇಗೆ? ಅಲ್ಲದೆ ಬಳಕೆಯಲ್ಲಿಲ್ಲದ ಅಥವಾ ನಮಗೆ ಗೊತ್ತಿಲ್ಲದೆ ನಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಸಿಮ್ ಕಾಡುಗಳನ್ನು ಡಿಲಿಂಕ್ ಮಾಡುವುದು ಹೇಗೆ?
ಚಿಂತೆ ಮಾಡಬೇಡಿ.. ಇದಕ್ಕಾಗಿ ಸುಲಭ ಹಾಗೂ ಸರಳವಾದ ಉಪಾಯವೊಂದನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ಈಗ ಹೊಸ ಪೋರ್ಟಲ್ ಒಂದನ್ನು ಆರಂಭಿಸಿದ್ದು, ಇದರಲ್ಲಿ ನಿಮ್ಮ ಆಧಾರ್ ಸಂಖ್ಯೆ ಬಳಸಿ ನೋಂದಾಯಿಸಲ್ಪಟ್ಟಿರುವ ಎಲ್ಲ ಮೊಬೈಲ್ ನಂಬರುಗಳನ್ನು ನೀವೀಗ ಚೆಕ್ ಮಾಡಬಹುದು. ಸದ್ಯಕ್ಕೆ ಈ ಪೋರ್ಟಲ್ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಕೆಲವೇ ದಿನಗಳಲ್ಲಿ ಇತರ ರಾಜ್ಯಗಳ ಜನರಿಗೂ ಈ ಸೇವೆ ಲಭ್ಯವಾಗಲಿದೆ.


ಬನ್ನಿ.. ಹಾಗಾದರೆ ನಿಮ್ಮ ಆಧಾರ್ ಸಂಖ್ಯೆ ಬಳಸಿ ಯಾವೆಲ್ಲ ಮೊಬೈಲ್ ನಂಬರುಗಳು ರಜಿಸ್ಟರ್ ಆಗಿವೆ ಎಂಬುದನ್ನು ಪರಿಶೀಲಿಸುವ ಬಗ್ಗೆ ವಿವರವಾಗಿ ತಿಳಿಯೋಣ.
ಗ್ರಾಹಕರ ಆಧಾರ್ ಸಂಖ್ಯೆ ಬಳಸಿ ಎಷ್ಟು ಮೊಬೈಲ್ ಸಂಖ್ಯೆಗಳು ನೋಂದಾಯಿಸಲ್ಪಟ್ಟಿವೆ ಎಂಬುದನ್ನು ತಿಳಿಯಲು ಹಾಗೂ ಹೆಚ್ಚುವರಿಯಾಗಿ ಮೊಬೈಲ್ ಸಂಖ್ಯೆಗಳು ನೋಂದಾಯಿಸಲ್ಪಟ್ಟಿದ್ದರೆ ಅವನ್ನು ಸೂಕ್ತವಾಗಿ ನಿರ್ವಹಿಸಲು ಸಹಾಯ ಮಾಡುವುದಕ್ಕಾಗಿ ಈ ಪೋರ್ಟಲ್ ಆರಂಭಿಸಲಾಗಿದೆ. ಎಂದು ದೂರಸಂಪರ್ಕ ಇಲಾಖೆ ತನ್ನ ಈ ವೆಬ್ಸೈಟಿನಲ್ಲಿ ತಿಳಿಸಿದೆ.
ಓರ್ವ ಬಳಕೆದಾರನು ತನ್ನ ಹೆಸರಿನಲ್ಲಿ ಗರಿಷ್ಠ 9 ಮೊಬೈಲ್ ಸಂಖ್ಯೆಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ದೂರಸಂಪರ್ಕ ಇಲಾಖೆ ನಿಯಮ ರೂಪಿಸಿದೆ. ಇದಕ್ಕೂ ಹೆಚ್ಚಿನ ಮೊಬೈಲ್ ಸಂಖ್ಯೆಗಳು ಆ ಗ್ರಾಹಕನ ಹೆಸರಿನಲ್ಲಿ ನೊಂದಾಯಿಸಲ್ಪಟ್ಟಲ್ಲಿ ಅವನ್ನು ವಾಣಿಜ್ಯ ಬಳಕೆಯ ಮೊಬೈಲ್ ಸಂಖ್ಯೆಗಳಾಗಿ ಪರಿಗಣಿಸಲಾಗುವುದು ಎಂದು ನಿಯಮ ಹೇಳುತ್ತದೆ. ಹೀಗಾಗಿ ನಿಮ್ಮ ಹೆಸರಿನಲ್ಲಿ ಒಟ್ಟು ಎಷ್ಟು ಮೊಬೈಲ್ ಸಂಖ್ಯೆಗಳು ನೋಂದಾಯಿಸಲ್ಪಟ್ಟಿವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಅಗತ್ಯವಾಗಿದೆ.
ನಿಮ್ಮ ಆಧಾರ್ ಸಂಖ್ಯೆ ಬಳಸಿ ನೋಂದಾಯಿಸಲ್ಪಟ್ಟಿರುವ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸುವ ಸ್ಟೆಪ್ ಬೈ ಸ್ಟೆಪ್ ಗೈಡ್:https://tafcop.dgtelecom.gov.in/

ಗೆ ಹೋಗಿ. ಸದ್ಯ ಚಾಲ್ತಿಯಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ.
ಈಗ ನಿಮ್ಮ ಮೊಬೈಲಿಗೆ ಬಂದಿರುವ ಓಟಿಪಿ ನಮೂದಿಸಿ, Validate. ಎಂಬುದನ್ನು ಕ್ಲಿಕ್ ಮಾಡಿ.
ಈಗ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನೋಂದಾಯಿಸಲ್ಪಟ್ಟಿರುವ ಎಲ್ಲಾ ಮೊಬೈಲ್ ನಂಬರುಗಳು ನಿಮಗೆ ಕಾಣಿಸುತ್ತವೆ.
ಇಲ್ಲಿ ನೀವೀಗ ಬಳಸುತ್ತಿರುವ ಹಾಗೂ ಬಳಸದೆ ಇರುವ ಎಲ್ಲ ಮೊಬೈಲ್ ನಂಬರುಗಳನ್ನು ಪರಿಶೀಲಿಸಬಹುದು.
ಗ್ರಾಹಕರು ತಾವು ಬಳಸದಿರುವ ಅಥವಾ ತಮಗೆ ಬೇಡವಾದ ಮೊಬೈಲ್ ಸಂಖ್ಯೆಗಳನ್ನು ಇಲ್ಲಿ ರಿಪೋರ್ಟ್ ಮಾಡುವ ಸೌಲಭ್ಯವೂ ಇದೆ.

1 COMMENT

LEAVE A REPLY

Please enter your comment!
Please enter your name here