ನಿಮ್ಮ ಮಕ್ಕಳ ಸಿಟ್ಟನ್ನು ನಿಯಂತ್ರಿಸಲು ನೀವು ಹೀಗೆ ಮಾಡುವುದು ಅನಿವಾರ್ಯ…!

0
899

ಕೆಲವು ಚಿಕ್ಕಮಕ್ಕಳಲ್ಲಿ ಸಿಕ್ಕಾಪಟ್ಟೆ ಕೋಪ ಇರುತ್ತದೆ. ಆ ಕೋಪವನ್ನು ನೀವು ನಿಯಂತ್ರಣ ಮಾಡುವುದೇ ದೊಡ್ಡ ತಲೆನೋವು ಆಗಿರುತ್ತದೆ. ಮಕ್ಕಳ ಸಿಟ್ಟನ್ನು ಕಂಟ್ರೋಲ್ ಮಾಡುವುದು ಸವಾಲೇ ಸರಿ.

ಹಾಗದರೆ ನೀವು ನಿಮ್ಮ ಮಕ್ಕಳ ಸಿಟ್ಟನ್ನು ಹೇಗೆ ನಿಯಂತ್ರಣ ಮಾಡಬಹುದು ಎಂದು ನಾವು ಹೇಳುತ್ತೇವೆ.

ನಮಗೆ ಮುಖ್ಯ ಅಲ್ಲ ಎಂದೆನಿಸಿದ್ದೇ ಮಕ್ಕಳಿಗೆ ಮುಖ್ಯ ಎನಿಸುತ್ತವೆ. ಹಾಗಾಗಿ ನೀವು ಅವರ ಮಾತುಗಳನ್ನು ಕೇಳಲೇ ಬೇಕು…ಅವರ ಮಾತನ್ನು ತಾಳ್ಮೆಯಿಂದ ಕೇಳಿ.

ಸಿಟ್ಟು ಬಂದಾಗ ಮಕ್ಕಳನ್ನು ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಿ. ಅವರದ್ದೇ ಆದ ಸ್ಪೇಸ್ ಅವರಿಗೆ ಕೊಟ್ಟು ಬಿಡಿ. ಆದರೆ ಗಮನವನ್ನು ಇಟ್ಟು ನೋಡುತ್ತಿರಿ ಅಷ್ಟೇ.. ಅನಾಹುತ ಮಾಡಿಕೊಳ್ಳ ಬಾರದಷ್ಟೇ.

ಮಕ್ಕಳಿಗೆ ಸಿಟ್ಟು ಬಂದಾಗ ನೀವೂ ಸಿಟ್ಟು ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅವರಿಗೆ ಹೊಡೆದರೆ , ಬೈದರೆ ಸಿಟ್ಟು ಕಡಿಮೆ ಆಗಲ್ಲ. ಹಠ ಜಾಸ್ತಿ ಮಾಡುತ್ತವೆ.

ನಾಲ್ಕು ಜನರ ಮಧ್ಯೆ ಮಕ್ಕಳನ್ನು ಅವಮಾನಿಸಬೇಡಿ. ಅವರ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತವೆ. ನೀವು ಯೋಚನೆ ಮಾಡಿ…ಪ್ರತಿಕ್ರಿಯೆ ನೀಡಿ‌..ಬೇಕಾಬಿಟ್ಟಿ ಕೋಪ ನಿಮಗೂ ಒಳ್ಳೆಯದಲ್ಲ. ಮಕ್ಕಳ ಮೇಲೆ ಸಿಟ್ಟು ಬೇಡ. ಅವು ನಿಮ್ಮ ಪ್ರೀತಿಯನ್ನು ಬಯಸುತ್ತವೆ.

LEAVE A REPLY

Please enter your comment!
Please enter your name here