ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ಯಾ? ತಿಳಿಯುವುದು ಹೇಗೆ?

1
189

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುತ್ತಿದೆ . ಕಡಿಮೆ ದರ, ಸುಲಭ ಲಭ್ಯತೆ ಆಂಡ್ರಾಯ್ಡ್ ಫೋನ್ ಗಳು ಹೆಚ್ಚು ಜನಪ್ರಿಯವಾಗಿವೆ. ಅಲ್ಲದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ವಿವಿಧ ಆ್ಯಪ್‌ಗಳನ್ನು ಕೂಡ ಸುಲಭದಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇಲ್ಲದ ಆ್ಯಪ್‌ಗಳನ್ನು ಕೂಡ ಇನ್‌ಸ್ಟಾಲ್ ಮಾಡಲು ಆಂಡ್ರಾಯ್ಡ್‌ ಫೋನ್‌ನಲ್ಲಿ ಅವಕಾಶವಿದೆ. ಹೀಗಿರುವಾಗ ಅದರ ಸುಲಭ ಸಾಫ್ಟ್‌ವೇರ್ ಮತ್ತು ಅದರಲ್ಲಿನ ಕೆಲವೊಂದು ಲೋಪದೋಷಗಳನ್ನು ಹ್ಯಾಕರ್‌ಗಳು ಸುಲಭದಲ್ಲಿ ಬಳಸಿಕೊಳ್ಳುತ್ತಾರೆ. ಅದರಿಂದಾಗಿ ಮೊಬೈಲ್‌ಗೆ ವೈರಸ್, ಮಾಲ್ವೇರ್, ಸ್ಪೈ ಆ್ಯಪ್‌, ಅಪಾಯಕಾರಿ ಆ್ಯಪ್‌ಗಳು ದಾಳಿ ಇಡುತ್ತವೆ. ಹೀಗಾಗಿ ನಿಮ್ಮ ಫೋನ್‌ಗೂ ವೈರಸ್ ದಾಳಿಯಾಗಿದ್ದರೆ ಅದನ್ನು ಕಂಡು ಹಿಡಿಯುವುದು ಹೇಗೆ? ಇಲ್ಲಿದೆ ಆ ಬಗ್ಗೆ ಮಾಹಿತಿ.

* ನೀವು ಇಂಟರ್‌ನೆಟ್ ಬಳಸುತ್ತಿದ್ದು, ನಿಮ್ಮ ಗಮನಕ್ಕೆ ಬಾರದೆಯೇ ಅಲ್ಲಿ ಹೆಚ್ಚಿನ ಡೇಟಾ ಬಳಕೆಯಾಗುತ್ತಿದ್ದರೆ ನಿಮ್ಮ ಅರಿವಿಗೆ ಬಾರದೆಯೇ ಅಲ್ಲಿರುವ ಆ್ಯಪ್‌ ಹೆಚ್ಚಿನ ಡೇಟಾ ಬಳಕೆ ಮಾಡುತ್ತಿದೆ ಎಂದರ್ಥ. ಜತೆಗೆ ನಿಮ್ಮ ಫೋನ್‌ನಿಂದ ಮಾಹಿತಿ ಕಳವಾಗುತ್ತಿರಬಹುದು.

*ನಿಮ್ಮ ಫೋನ್‌ನಲ್ಲಿ ಇದ್ದಕ್ಕಿಂದಂತೆ ವಿವಿಧ ಸ್ವರೂಪದ ಜಾಹೀರಾತು ಕಾಣಿಸಿಕೊಳ್ಳಬಹುದು. ನಿಮಗೆ ಸಂಬಂಧವೇ ಇಲ್ಲದ ಜಾಹೀರಾತು ಏಕಾಏಕಿ ಕಾಣಿಸಿಕೊಂಡು ಮರೆಯಾಗಬಹುದು. ಜತೆಗೆ ಸಾಧಾರಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅವು ಇರುತ್ತವೆ. ಹೀಗಾಗಿದ್ದಲ್ಲಿ ನಿಮ್ಮ‌ ಫೋನ್ ಹ್ಯಾಕ್ ಆಗಿರಬಹುದು…

* ನಿಮ್ಮ ಗಮನಕ್ಕೆ ಬರದೇ, ನಿಮ್ಮ ಅರಿವಿಲ್ಲದೆ ನಿಮ್ಮ ಫೋನ್‌ನಲ್ಲಿ ಅಪರಿಚಿತ ಆ್ಯಪ್‌ ಇನ್‌ಸ್ಟಾಲ್ ಆಗಬಹುದು. ನೀವು ಇನ್‌ಸ್ಟಾಲ್ ಮಾಡಿಲ್ಲವೆಂದಾದರೂ, ಅದಾಗಿಯೇ ಇನ್‌ಸ್ಟಾಲ್ ಆಗಿರುವ ಸಾಧ್ಯತೆಯಿರುತ್ತದೆ ..ಹೀಗಾಗಿದ್ದಲ್ಲಿ ನಿಮ್ಮ ಫೋನ್ ಹ್ಯಾಕ್ ಆಗಿದೆ!

ನಿಮ್ಮ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿರಬಹುದು. ಹೆಸರು ಅಥವಾ ನಂಬರ್ ಕಾಣಿಸದೇ ಇರಬಹುದು. ಇಂಟರ್‌ನೆಟ್ ಕಾಲ್, ಇಂಟರ್‌ನ್ಯಾಶನಲ್ ಕಾಲ್ ಕೂಡ ಬಂದಿರುವ ಸಾಧ್ಯತೆ ಹೆಚ್ಚು. ಹೀಗಾಗಿ ನಿಮಗೆ ಬರುವ ಕರೆಗಳ ಕುರಿತು ನಿಗಾ ವಹಿಸಿ.

 

ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿರುವ ಆ್ಯಪ್‌ ಐಕಾನ್ ಮರೆಯಾಗಿದ್ದರೆ, ಇಲ್ಲವೇ ನೀವು ಹೊಸದಾಗಿ ಇನ್‌ಸ್ಟಾಲ್ ಮಾಡಿರುವ ಆ್ಯಪ್‌ ಕೂಡ ಹೋಮ್‌ಸ್ಕ್ರೀನ್ ಐಕಾನ್ ಕಾಣೆಯಾಗಿರಬಹುದು. ಡೌನ್‌ಲೋಡ್ ಪಟ್ಟಿಯಲ್ಲಿ ಆ್ಯಪ್‌ ಕಾಣಿಸದೇ ಇದ್ದರೆ ಹ್ಯಾಕ್ ಆಗಿರುವ ಸಾಧ್ಯತೆ ಹೆಚ್ಚಿದೆ ಎಂದೇ ಅರ್ಥ.

ನಿಮ್ಮ ಫೋನ್‌ ಸಾಧಾರಣ ಬಳಕೆಯಲ್ಲಿ ಇರುವ ಅವಧಿಗಿಂತ ಇತರ ಸಮಯದಲ್ಲಿ ಒಮ್ಮೆಲೆ ಬ್ಯಾಟರಿ ಖಾಲಿಯಾಗಬಹುದು. ಅಥವಾ ಏಕಾಏಕಿ ಪೂರ್ತಿ ಇದ್ದ ಚಾರ್ಜ್ ಕಡಿಮೆಯಾಗಬಹುದು. ಇದು ನಿಮ್ಮ ಫೋನ್‌ನಲ್ಲಿ ನಿಮಗರಿವಿಲ್ಲದೆಯೇ ಬ್ಯಾಟರಿ ಬಳಕೆಯಾಗುತ್ತಿರುವ ಸೂಚನೆ ಆಗಿರುತ್ತವೆ!

RR ವಿರುದ್ಧ ಟಾಸ್ ಗೆದ್ದ MI ಬ್ಯಾಟಿಂಗ್ ಆಯ್ಕೆ ‌..!

ಅಬುಧಾಬಿ : ಮುಂಬೈ ಇಂಡಿಯನ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿದೆ.
ರೋಹಿತ್ ಶರ್ಮಾ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಕಿರಾನ್ ಪೊಲಾರ್ಡ್ ತಂಡದ ಸಾರಥಿಯಾಗಿ ಮುಂದುವರೆದಿದ್ದಾರೆ. ಟಾಸ್ ಗೆದ್ದ ಮುಂಬೈ ನಾಯಕ ಪೊಲಾರ್ಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಆರ್‌ಆರ್‌ XI: ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಜೋಸ್ ಬಟ್ಲರ್, ಸ್ಟೀವ್ ಸ್ಮಿತ್ (ನಾಯಕ), ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಫ್ರ ಆರ್ಚರ್, ಶ್ರೇಯಾಸ್ ಗೋಪಾಲ್, ಅಂಕಿತ್ ರಜಪೂತ್, ಕಾರ್ತಿಕ್ ತ್ಯಾಗಿ.

ಎಂಐ XI: ಕ್ವಿಂಟನ್ ಡಿ’ಕಾಕ್ (ವಿಕೆಟ್‌ಕೀಪರ್‌), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೈರೊನ್ ಪೊಲಾರ್ಡ್ (ನಾಯಕ), ಕ್ರುಣಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.

ಮಿಂಚಿದ ಗಾಯಕ್ವಾಡ್ : RCB ವಿರುದ್ಧ CSK ಗೆ ಗೆಲುವು

ನಿರಂತರ ವೈಫಲ್ಯಗಳಿಂದ ಟೀಕಾಕಾರರ ಬಾಯಿಗೆ ಸಿಲುಕಿದ್ದ ಯುವ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ ಅಂತು ಇಂತು ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ. ಅವರ ಅಜೇಯ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ಗೆ ಕೇವಲ 145 ರನ್ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ಚೆನ್ನೈ‌ಇನ್ನು 8 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿತು.
ಆರ್ ಸಿಬಿ ಪರ ದೇವದತ್ ಪಡಿಕ್ಕಲ್ 22, ಆರೊನ್ ಫಿಂಚ್ 15, ವಿರಾಟ್ ಕೊಹ್ಲಿ 50, ಎಬಿ ಡಿ’ವಿಲಿಯರ್ಸ್‌ 39; ಸ್ಯಾಮ್‌ ಕರ್ರನ್ 19ಕ್ಕೆ 3, ದೀಪಕ್ ಚಹರ್ 33ಕ್ಕೆ 2 ವಿಕೆಟ್ ಕೊ ಡುಗೆ ನೀಡಿದರು.
ಚೆನ್ನೈ ಗೆಲುವಿನಲ್ಲಿ ಋತುರಾಜ್ ಗಾಯಕ್ವಾಡ್‌ 65*, ಫಾಫ್ ಡು’ಪ್ಲೆಸಿಸ್‌ 25, ಅಂಬಾಟಿ ರಾಯುಡು 39, ಎಂಎಸ್‌ ಧೋನಿ 19*; ಕ್ರಿಸ್‌ ಮಾರಿಸ್‌ 39ಕ್ಕೆ 1, ಯುಜ್ವೇಂದ್ರ ಚಹಲ್ 21ಕ್ಕೆ 1 ವಿಕೆಟ್ ಪಡೆದು ಪ್ರಮುಖ ಪಾತ್ರ ವಹಿಸಿದರು.

ಗೂಗಲ್ ನಲ್ಲಿ ಈ 10 ವಿಚಾರಗಳನ್ನು ಹುಡುಕಲೇ ಬಾರದು!
ಇದು ಸೋಶಿಯಲ್ ಮೀಡಿಯಾ ಜಮಾನ. ಅದರಲ್ಲು ಗೂಗಲ್ ವರ್ಲ್ಡ್ ಅಂದ್ರೆ ತಪ್ಪಾಗಲ್ಲ..! ಏನನ್ನೇ ಹುಡುಕುವುದಾದರೂ ಗೂಗಲ್ ಗೂಗಲ್ ಗೂಗಲ್..! ಆದರೆ ಆನ್ಲೈನ್ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜಾಗುರಕರಾಗಿರಬೇಕಾಗುತ್ತದೆ.
ನೀವು ಗೂಗಲ್ನಲ್ಲಿ ಕೆಲವೊಂದನ್ನು ಎಂದಿಗೂ, ಯಾವತ್ತಿಗೂ ಹುಡುಕಲು ಹೋಗಬಾರದು! ಅಂತಹ 10 ವಿಚಾರಗಳು ಇಲ್ಲಿವೆ ಮಿಸ್ ಮಾಡದೆ ಓದಿ.
ಆನ್ ಲೈನ್ ಬ್ಯಾಂಕಿಂಗ್ : ಗೂಗಲ್ನಲ್ಲಿ ಆನ್ ಲೈನ್ ಬ್ಯಾಂಕಿಂಗ್ ಹುಡುಕ ಬೇಡಿ. ಬ್ಯಾಂಕ್ಗಳ ಅಧಿಕೃತ ವೆಬ್ಸೈಟ್ ನಲ್ಲೇ ಸರ್ಚ್ ಮಾಡಿ.

ಕಸ್ಟಮರ್ ಕೇರ್ ನಂಬರ್ : ಬೇರೆ ಬೇರೆ ಸೇವೆಗಳನ್ನು ಒದಗಿಸುವ ಕಂಪನಿಗಳ ಗ್ರಾಹಕರ ಸಹಾಯವಾಣಿ ಸಂಖ್ಯೆಯನ್ನು ಗೂಗಲ್ನಲ್ಲಿ ಹುಡುಕಬೇಡಿ. ಕಂಪನಿಗಳ ಅಧಿಕೃತ ವೆಬ್ಸೈಟ್ಗಳಲ್ಲಿ ನೋಡಿ.

ಗೂಗಲ್ ನಲ್ಲಿ ಆ್ಯಪ್ ಮತ್ತು ಸಾಫ್ಟ್ ವೇರ್ ಅಪ್ಲೋಡ್ ಮಾಡುವಾಗ

ಗೂಗಲ್​ನಲ್ಲಿ ಔಷಧಿಯನ್ನು ಹುಡುಕಬೇಡಿ. ಆರೋಗ್ಯದಲ್ಲಿ ವೈಪರೀತ್ಯ ಕಂಡು ಬಂದಾಗ ನೇರವಾಗಿ ವೈದ್ಯರನ್ನು ಭೇಟಿ ಮಾಡಿ.

ಮೊಬೈಲ್ ಮತ್ತು ಸ್ಮಾರ್ಟ್‌ಫೋನ್, ಕಂಪ್ಯೂಟರ್ ಆ್ಯಪ್‌, ಸಾಫ್ಟ್‌ವೇರ್‌ಗಳಿಗಾಗಿ ಗೂಗಲ್‌ನಲ್ಲಿ ಹುಡುಕಬೇಡಿ, ನೇರವಾಗಿ ಪ್ಲೇ ಸ್ಟೋರ್, ಆ್ಯಪಲ್ ಆ್ಯಪ್ ಸ್ಟೋರ್‌ ಬಳಸಿ.

ಗೂಗಲ್​ನಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸಿದ ಲಾಗ್​ ಔಟ್​ ಆಗಲು ಮರೆಯದಿರಿ. ಅಂತೆಯೇ, ನಕಲಿ ತಾಣಗಳೆಂದು ಪರಿಶೀಲಿಸಿ ನಂತರ ಬಳಸಲು ಮುಂದಾಗಿ.

ಚೆನ್ನೈ ಎದುರು ಟಾಸ್ ಗೆದ್ದ ಆರ್ ಸಿಬಿ ಬ್ಯಾಟಿಂಗ್ ಆಯ್ಕೆ..!
ದುಬೈ : ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ನೇ ಆವೃತ್ತಿ IPL ನಲ್ಲಿ ಎರಡನೇ ಬಾರಿ ಮುಖಾಮುಖಿ ಆಗುತ್ತಿವೆ. ಮೊದಲ ಹಣಾಹಣಿಯಲ್ಲಿ ಆರ್ ಸಿ ಬಿ ಗೆದ್ದಿತ್ತು.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
RCB : ದೇವದುತ್ ಪಡಿಕ್ಕಲ್, ಆರೊನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ’ವಿಲಿಯರ್ಸ್ (ವಿಕೆಟ್‌ಕೀಪರ್‌), ಮೊಯೀನ್ ಅಲಿ, ಗುರುಕೀರತ್ ಸಿಂಗ್ ಮಾನ್, ಕ್ರಿಸ್ ಮಾರಿಸ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.
CSK : ಋತುರಾಜ್ ಗಾಯಕ್ವಾಡ್, ಫಾಫ್ ಡು’ಪ್ಲೆಸಿಸ್, ಅಂಬಾಟಿ ರಾಯುಡು, ಎನ್ ಜಗದೀಶನ್, ಎಂ.ಎಸ್ ಧೋನಿ (ವಿಕೆಟ್‌ಕೀಪರ್‌ / ನಾಯಕ), ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಮಿಚೆಲ್ ಸಾಂಟ್ನರ್, ದೀಪಕ್ ಚಹರ್, ಇಮ್ರಾನ್ ತಾಹಿರ್, ಮೋನು ಕುಮಾರ್.

 

ವರುಣ್ ಚಕ್ರವರ್ತಿ ಮಾರಕ ದಾಳಿಗೆ ತಲೆಬಾಗಿದ ಡೆಲ್ಲಿ ಕ್ಯಾಪಿಟಲ್ಸ್ ..!

ವರುಣ್ ಚಕ್ರವರ್ತಿ (20ಕ್ಕೆ 5) ಮತ್ತು ಪ್ಯಾಟ್ ಕಮಿನ್ಸ್ (17ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಯ ಜತೆಗೆ ನಿತೀಶ್ ರಾಣಾ (81) ಮತ್ತು ಸುನೀಲ್ ನರೈನ್(64) ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ಕೋಲ್ಕೊತಾ ನೈಟ್ ರೈಡರ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್ ಗಳಿಂದ ಬಗ್ಗು ಬಡಿದು ಟೂರ್ನಿಯಲ್ಲಿ 6ನೇ ಜಯ ದಾಖಿಲಿಸಿತು.
ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಂಗ್ ಮಾಡಿದ ಕೋಲ್ಕೊತಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಇನಿಂಗ್ಸ್ ಆರಂಭಿಸಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು.

 

KXIP vs SRH : ಟಾಸ್ ಸೋತ ಪಂಜಾಬ್ ಬ್ಯಾಟಿಂಗ್

ದುಬೈ : ಹ್ಯಾಟ್ರಿಕ್ ಗೆಲುವಿನ ಖುಷಿಯಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ.

ಟಾಸ್ ಗೆದ್ದ ಹೈದರಾಬಾದ್ ಪಂಜಾಬ್ ಗೆ ಬ್ಯಾಟಿಂಗ್ ನೀಡಿದೆ.

ಪಂಜಾಬ್ XI: ಕೆಎಲ್ ರಾಹುಲ್ (ವಿಕೆಟ್‌ಕೀಪರ್‌/ನಾಯಕ) ಕ್ರಿಸ್ ಗೇಲ್, ಮಂದೀಪ್ ಸಿಂಗ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್, ದೀಪಕ್ ಹೂಡ, ಮುರುಗನ್ ಅಶ್ವಿನ್, ಕ್ರಿಸ್ ಜಾರ್ಡನ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷ್‌ದೀಪ್ ಸಿಂಗ್.

ಹೈದರಾಬಾದ್ XI: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್‌), ಮನೀಶ್ ಪಾಂಡೆ, ವಿಜಯ್ ಶಂಕರ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಟಿ ನಟರಾಜನ್.

ಚೇಸಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ..!

13 ನೇ ಆವೃತ್ತಿ IPLನ ಇಂದಿನ ಮೊದಲ‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Kolkata Knight Riders (Playing XI): Shubman Gill, Sunil Narine, Nitish Rana, Rahul Tripathi, Eoin Morgan(c), Dinesh Karthik(w), Pat Cummins, Lockie Ferguson, Kamlesh Nagarkoti, Prasidh Krishna, Varun Chakravarthy

Delhi Capitals (Playing XI): Shikhar Dhawan, Ajinkya Rahane, Shreyas Iyer(c), Rishabh Pant(w), Marcus Stoinis, Shimron Hetmyer, Axar Patel, Ravichandran Ashwin, Kagiso Rabada, Tushar Deshpande, Anrich Nortje

13 ನೇ ಆವೃತ್ತಿ IPLನ ಇಂದಿನ ಮೊದಲ‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Kolkata Knight Riders (Playing XI): Shubman Gill, Sunil Narine, Nitish Rana, Rahul Tripathi, Eoin Morgan(c), Dinesh Karthik(w), Pat Cummins, Lockie Ferguson, Kamlesh Nagarkoti, Prasidh Krishna, Varun Chakravarthy

Delhi Capitals (Playing XI): Shikhar Dhawan, Ajinkya Rahane, Shreyas Iyer(c), Rishabh Pant(w), Marcus Stoinis, Shimron Hetmyer, Axar Patel, Ravichandran Ashwin, Kagiso Rabada, Tushar Deshpande, Anrich Nortje

ಪ್ರತಿಷ್ಠಿತ ಟೂರ್ನಿಗೆ ಯುವಿ, ಧೋನಿ, ರೈನಾ ?

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ , ಸುರೇಶ್ ರೈನಾ ಪ್ರತಿಷ್ಠಿತ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ 2 ನೇ ವಾರದಲ್ಲಿ ಬಿಗ್ ಬಾಷ್ ಲೀಗ್ ಆರಂಭವಾಗಲಿದೆ‌ . ಈ ಬಿಗ್ ಬಾಷ್ 2020ಗೆ ಧೋನಿ , ರೈನಾ ಮತ್ತು ಯುವರಾಜ್ ಸಿಂಗ್ ಅವರನ್ನು ತಂಡ ಕೂಡಿಸಿಕೊಳ್ಳಲು ಫ್ರಾಂಚೈಸಿಗಳು ಮುಂದಾಗಿವೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಭಾರತದ ಮಾಜಿ ಕ್ರಿಕೆಟಿಗರು ಬಿಗ್​ಬಾಷ್​ ಟಿ20 ಕ್ರಿಕೆಟ್​ನಲ್ಲಿ ಆಡುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಬಿಗ್​ಬಾಷ್​ನಲ್ಲಿ ಯುವರಾಜ್​ ಸಿಂಗ್​ ಆಡುವುದು ಖಚಿತ ಎಂದು ಹೇಳಲಾಗಿದೆ. ಈ ನಡುವೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿರುವ ಎಂ.ಎಸ್​.ಧೋನಿ ಹಾಗೂ ಸುರೇಶ್​ ರೈನಾ ಖರೀದಿಗೆ ಫ್ರಾಂಚೈಸಿ ಚಿಂತನೆ ನಡೆಸಿವೆ ಎನ್ನಲಾಗಿದೆ.

ಜೈಲಲ್ಲಿರುವ ರಾಗಿಣಿ , ಸಂಜನಾರನ್ನು ನೋಡಲು ಯಾರೂ ಬಂದಿಲ್ವಂತೆ..! ಕಾರಣ ಏನ್ ಗೊತ್ತಾ?

ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ನೋಡಲು ಇದುವರೆಗೆ ಯಾರೂ ಕೂಡ ಬಂದಿಲ್ಲವಂತೆ!
ಜೈಲಿನಲ್ಲಿರುವ ವ್ಯಕ್ತಿಗಳನ್ನು ನೋಡಲು ಅವರ ಆಪ್ತರು ಭೇಟಿ ನೀಡುತ್ತಾರೆ. ‌ಆದರೆ, ರಾಗಿಣಿ ಮತ್ತು ಸಂಜನಾ ವಿಚಾರದಲ್ಲಿ ಯಾರೂ ಕೂಡ ಅವರನ್ನು ನೋಡಲು ಬಂದಿಲ್ಲ ಎಂದು ವರದಿಯಾಗಿದೆ.
ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗರ ಯಾರೆಲ್ಲಾ ಭೇಟಿ ನೀಡಿದ್ದಾರೆ ಎಂದು ಟಿ. ನರಸಿಂಹ ಮೂರ್ತಿ ಎಂಬುವವರು ಆರ್ ಟಿ ಐ ಮೂಲಕ ಅರ್ಜಿ ಸಲ್ಲಿಸಿದ್ದರು.
ಅವರ ಅರ್ಜಿಗೆ ಉತ್ತರ ನೀಡಿರುವ ಜೈಲು ಅಧಿಕಾರಿಗಳು ಈ ವರೆಗೆ ರಾಗಿಣಿ ಮತ್ತು ಸಂಜನಾರನ್ನು ಭೇಟಿಯಾಗಲು ಯಾರಿಗೂ ಆಗಿಲ್ಲ ಎಂದು ತಿಳಿಸಿದ್ದಾರೆ.
ಕೊರೋನಾ ಸೋಂಕು ಹೆಚ್ಚಳವಾಗಿರುವುದರಿಂದ ಜೈಲಿನಲ್ಲಿರುವವರನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಹೀಗಾಗಿ ರಾಗಿಣಿ ಮತ್ತು ಸಂಜನಾರನ್ನು ನೋಡಲು ಕೂಡ ಯಾರೂ ಬರಲಾಗಿಲ್ಲ.
ಸಿಸಿಬಿ ಅಧಿಕಾರಿಗಳು ಸೆ. 4 ರಂದು ರಾಗಿಣಿ ಅವರನ್ನು ಬಂಧಿಸಿದ್ದರು. ಸೆ. 8 ರಂದು ಸಂಜನಾ ಅವರ ಮನೆ ಮೇಲೆ ದಾಳಿ ಮಾಡಿ ಅವರನ್ನು ಕೂಡ ವಶಕ್ಕೆ ಪಡೆಯಲಾಗಿತ್ತು.

ಹೃದಯಾಘಾತ ಕಂಪನಿ ತೆರೆಯಲು ಕಾರಣವಾಯ್ತು ಅಂದ್ರೆ ನಂಬ್ತೀರಾ?

ಕೆವಿನ್ ಸ್ಕಾಟ್ ಕೈಗರ್ ಹಾಗೂ ಗಜಾನನ ಸತೀಶ್ ನಾಗಶೇಖರ್ ಇವರಿಬ್ಬರು ವೈದ್ಯಕೀಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಗೋವಾದಲ್ಲಿ ಹೆಲ್ತ್ಕೇರ್ ವೆಂಚರ್ ಒಂದನ್ನು ನಡೆಸುತ್ತಿದ್ದಾರೆ. ಕಲ್ಲೋಸ್ ಎಂಜಿನಿಯರಿಂಗ್ ಎಂಬ ಈ ಸಂಸ್ಥೆ ಕಾರ್ಡಿಯಾಕ್ ಮೊನಿಟರ್ಗಳನ್ನು ತಯಾರಿಸುತ್ತಿದೆ. ಜೊತೆಗೆ ಅಲ್ಟ್ರಾ ಪೋರ್ಟೆಬಲ್ ಹಾಗೂ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ಗಳನ್ನು ತಯಾರಿಸುತ್ತಿದೆ.
ಗಜಾನನ ಹಾಗೂ ಕೆವಿನ್ 6 ವರ್ಷಗಳ ಹಿಂದೆ ಗೋವಾದಲ್ಲಿ ಕಲ್ಲೋಸ್ ಕಂಪನಿಯನ್ನು ಆರಂಭಿಸಿದ್ದರು. ಇವರಿಬ್ಬರೂ ಜಿಇ ಸಿಸ್ಟಮ್ಸ್ನ ಎಂಆರ್ಐ ಕೆಲಸ ಮಾಡಿದ್ರು. 2006ರಲ್ಲಿ ಪರಸ್ಪರ ಪರಿಚಿತರಾಗಿದ್ದ ಗಜಾನನ ಹಾಗೂ ಕೆವಿನ್ ಮಧ್ಯೆ ಗೆಳೆತನವೂ ಬೆಳೆದಿತ್ತು. ಭಾರತದಲ್ಲಿ ಇನ್ನಷ್ಟು ತಂತ್ರಜ್ಞಾನದ ಸಂಪನ್ಮೂಲಗಳ ಅವಶ್ಯಕತೆ ಅನ್ನೋದನ್ನು ಕೆವಿನ್ ಅರಿತಿದ್ರು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಕನಸು ಕಂಡಿದ್ರು. ಗಜಾನನ ಅವರದ್ದೂ ಇದೇ ಮನಸ್ಥಿತಿ.
ಈ ಬಗ್ಗೆ ಚರ್ಚೆ ನಡೆಸಿದ ಬೆನ್ನಲ್ಲೇ ಕೆವಿನ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ಗಜಾನನ ಕೂಡ ಕೆಲಸಕ್ಕೆ ಗುಡ್ ಬೈ ಹೇಳಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ರು. ಕೆವಿನ್ ಅವರ ಮನೆಯೇ ಪಾಠಶಾಲೆಯಾಗಿತ್ತು. ಈ ಸಂದರ್ಭದಲ್ಲೇ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಓಶನೋಗ್ರಫಿಯಿಂದ ಮೊದಲ ಗುತ್ತಿಗೆ ಕೂಡ ಸಿಕ್ಕಿತ್ತು. ಮೊಬೈಲ್ ಹಾಗೂ ಇಸಿಜಿಯಂತಹ ಉಪಕರಣ ತಯಾರಿಕೆ ಬಗ್ಗೆ ಕೆವಿನ್ ಹಾಗೂ ಗಜಾನನ ತಜ್ಞರ ಜೊತೆ ಮಾತುಕತೆ ನಡೆಸಿದ್ರು. ಆ ಸಂದರ್ಭದಲ್ಲಿ ಇಸಿಜಿ ತಯಾರಿಕಾ ಕಂಪನಿಗಳ ಮಧ್ಯೆ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಇತ್ತು. ಮೊಬೈಲ್ ತಯಾರಿಕೆಗಂತೂ ಬಂಡವಾಳದ ಅಗತ್ಯವಿತ್ತು. ಹಾಗಾಗಿ ಕೆವಿನ್ ಮೋಟೊರೋಲಾ ಜೊತೆ ಒಡಂಬಡಿಕೆ ಮಾಡಿಕೊಂಡು ಕೆಲಸ ಆರಂಭಿಸಿದ್ರು.
ಕಲ್ಲೋಸ್ ಎಂಬ ಹೆಸರು ಗಜಾನನ ಅವರ ಕಾಲ್ಪನಿಕ ಆವಿಷ್ಕಾರ. ಯಾವುದೇ ಗೊಂದಲಿವಿಲ್ಲದಂತಹ ಸರಳ ಹೆಸರನ್ನು ಶೀಘ್ರವಾಗಿ ಹುಡುಕಬೇಕೆಂಬುದು ಅವರ ಬಯಕೆಯಾಗಿತ್ತು. ಕೆವಿನ್ ಅವರ ಹೆಸರಿನ ಕೆ ಅಕ್ಷರವನ್ನು ಬಳಸಿಕೊಂಡು ಗಜಾನನ ಸಂಸ್ಥೆಗೆ ಕಲ್ಲೋಸ್ ಎಂಜಿನಿಯರಿಂಗ್ ಎಂದು ನಾಮಕರಣ ಮಾಡಿದ್ದಾರೆ. ಹೃದಯವನ್ನು ಮೊನಿಟರ್ ಮಾಡುವ ಇಸಿಜಿ, ರಕ್ತ ಮತ್ತು ಆಮ್ಲನಜಕ ಪ್ರಮಾಣವನ್ನು ಅಳೆಯುವ ಉಪಕರಣವನ್ನು ಕಲ್ಲೋಸ್ನಲ್ಲಿ ತಯಾರಿಸಲಾಗುತ್ತದೆ.
ಕಲ್ಲೋಸ್ ಆರಂಭಿಸಿದ ಬಳಿಕ ಅಮೆರಿಕಕ್ಕೆ ತೆರಳಿದ ಕೆವಿನ್ ಅರ್ಧಕ್ಕೆ ನಿಂತಿದ್ದ ಓದನ್ನು ಮುಂದುವರಿಸಿ ವೈದ್ಯಕೀಯ ಪದವಿ ಪಡೆದ್ರು. ಅದೇ ಸಮಯಕ್ಕೆ ಕ್ಯಾಲಿಫೋರ್ನಿಯಾ ಸ್ಯಾನ್ಡಿಯಾಗೋ ವಿವಿಯಿಂದ ಆಹ್ವಾನ ಬಂದಿದ್ದರಿಂದ ಗಜಾನನ ಕೂಡ ಅಮೆರಿಕ್ಕೆ ಆಗಮಿಸಿದರು. ಕೆವಿನ್ ಹಾಗೂ ಗಜಾನನ ಇಬ್ಬರೂ ಅಮೆರಿಕದಲ್ಲಿದ್ದುಕೊಂಡೇ ಗೋವಾದಲ್ಲಿರುವ ಕಲ್ಲೋಸ್ ಕಚೇರಿಯನ್ನು ನಿರ್ವಹಿಸುತ್ತಿದ್ರು. ಯುಎಸ್ಸಿಡಿಯಲ್ಲಿ ಅಸೈನ್ಮೆಂಟ್ ಮುಗಿಸಿದ ಗಜಾನನ ಬ್ಯುಸಿನೆಸ್ ಪ್ಲಾನ್ ಸ್ಪರ್ಧೆಯಲ್ಲಿ ವಿಜೇತರಾದ್ರು. ಬಳಿಕ ಅಮೆರಿಕದಿಂದ ಗೋವಾಕ್ಕೆ ಮರಳಿದ ಗಜಾನನ ಹಾಗೂ ಕೆವಿನ್ ವೈದ್ಯಕೀಯ ಉಪಕರಣ ತಯಾರಿಕಾ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.


ಕೆವಿನ್ ಅವರ ಪಾಲಿಗೆ ಗೋವಾ ಒಂದು ಕುತೂಹಲಕರ ತಾಣ. ಗಜಾನನ ಅವರಿಗೆ ತವರು ಮನೆ. ಕಡಲ ಕಿನಾರೆ ಗೋವಾಕ್ಕೆ ತಂದೆಯೊಡನೆ ಪ್ರವಾಸಕ್ಕೆ ಬಂದಿದ್ದ ಕೆವಿನ್ ಬೀಚ್ನಲ್ಲಿ ಕುಳಿತೇ ಕೆಲಸ ಮಾಡುವ ಕನಸು ಕಂಡಿದ್ರು. ಆದ್ರೆ ಆ ಕನಸು ಈಡೇರಿಲ್ಲ. 2007ರಲ್ಲಿ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಕೆವಿನ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಇಸಿಜಿ ಹಾಗೂ ತಜ್ಞ ವೈದ್ಯರು ಸಿಕ್ಕಿದ್ದರಿಂದ ತಮ್ಮ ಪ್ರಾಣ ಉಳಿಯಿತು ಅನ್ನೋದು ಕೆವಿನ್ ಅವರ ಮನದಾಳದ ಮಾತು. ಈ ಅನುಭವವೇ ಅವರಿಗೆ ಇಸಿಜಿ ತಯಾರಿಕಾ ಕಂಪನಿ ಸ್ಥಾಪನೆಗೆ ಪ್ರೇರಣೆಯಾಯ್ತು.
ವಿಭಿನ್ನ ಸಂಸ್ಕøತಿ, ಆಚಾರ-ವಿಚಾರಗಳು ಬೇರೆಬೇರೆಯಾಗಿದ್ದರೂ ಜೊತೆಯಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಕೆವಿನ್ ಹಾಗೂ ಗಜಾನನ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದಾರೆ.

 

 

1 COMMENT

LEAVE A REPLY

Please enter your comment!
Please enter your name here