No menu items!
12.4 C
Munich
Wednesday, April 29, 2026

ನ್ಯೂಜಿಲೆಂಡ್ ಪರ ಆಡಲಿದ್ದಾರೆ ಈ ಕನ್ನಡಿಗ!

Must read

ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಬಿಸಿಸಿಐ ಈಗಾಗಲೇ 20 ಆಟಗಾರರ ಭಾರತ ತಂಡವನ್ನು ಪ್ರಕಟಿಸಿದೆ. ಅತ್ತ 20 ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ತಂಡ ಈಗಾಗಲೇ ಇಂಗ್ಲೆಂಡ್ ತಲುಪಿದೆ.

ವಿಶೇಷವೆಂದರೆ ಇಂಗ್ಲೆಂಡ್ ತಲುಪಿರುವ 20 ಆಟಗಾರರ ನ್ಯೂಜಿಲೆಂಡ್ ತಂಡದಲ್ಲಿ ಕರ್ನಾಟಕದ 21ರ ಹರೆಯದ ಹುಡುಗ ರಚಿನ್ ರವೀಂದ್ರ ಸ್ಥಾನ ಪಡೆದುಕೊಂಡಿದ್ದಾರೆ. ರಚಿನ್ ರವೀಂದ್ರ ಅವರ ಪೋಷಕರು ಮೂಲತಃ ಕರ್ನಾಟಕದವರಾಗಿದ್ದರೂ ಸಹ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದು ಸಾಫ್ಟ್ ವೇರ್ ಇಂಜಿನಿಯರ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

 

ಆಲ್‌ರೌಂಡರ್ ಆಟಗಾರನಾಗಿರುವ ರಚಿನ್ ರವೀಂದ್ರ 18 ವರ್ಷವಿದ್ದಾಗಲೇ ನ್ಯೂಜಿಲೆಂಡ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿ ಇದುವರೆಗೂ 3 ಶತಕ ಮತ್ತು 9 ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಇದುವರೆಗೂ 1470 ರನ್ ಗಳಿಸಿರುವ ರಚಿನ್ 22 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣಕ್ಕೆ ರಚಿನ್ ರವೀಂದ್ರ ಅವರಿಗೆ ನ್ಯೂಜಿಲೆಂಡ್ ಆಯ್ಕೆ ಸಮಿತಿ ಅವಕಾಶವನ್ನು ನೀಡಿದ್ದು ಮುಂಬರುವ ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article