No menu items!
11.1 C
Munich
Wednesday, April 29, 2026

ಪುನೀತ್ ರಾಜಕುಮಾರ್‌ಗೆ ಬಸವಶ್ರೀ ಪ್ರಶಸ್ತಿ

Must read

ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್​​ ಸ್ಟಾರ್​​​ ಪುನೀತ್​​ ರಾಜಕುಮಾರ್​​ ಅವರಿಗೆ ಬಸವಶ್ರೀ ಪ್ರಶಸ್ತಿ ಘೋಷಿಸಲಾಗಿದೆ. 2022ನೇ‌ ಸಾಲಿನ ಬಸವಶ್ರೀ ಪ್ರಶಸ್ತಿಯನ್ನ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿಯವರು ಪುನೀತ್​​​ ಅವರಿಗೆ ನೀಡುವುದಾಗಿ ಅನೌನ್ಸ್​ ಮಾಡಿದ್ದಾರೆ.

ಮುಂದಿನ ಬಸವ ಜಯಂತಿ ದಿನ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಚಿತ್ರದುರ್ಗದ ಮುರುಘಾಮಠ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ. ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪುನೀತ್ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಸವಶ್ರೀ ಪ್ರಶಸ್ತಿ’ ಮೊತ್ತ ಐದು ಲಕ್ಷ ರೂ. ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವು. ಕಾರ್ಯಕ್ರಮಕ್ಕೆ ಡಾ. ಶಿವರಾಜಕುಮಾರ್​​​ ಅವರನ್ನು ಆಹ್ವಾನಿಸಲಾಗುವುದು ಎಂದರು ಪೀಠಾಧಿಪತಿ ಡಾ. ಶಿವಮೂರ್ತಿಯವರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article