ಹುಡುಗಿಯರನ್ನ ಪಟಾಯೊಸೋಕೆ ಹುಡುಗರ ಮಾಡೋ ಕಸರತ್ತುಗಳು ಒಂದೊಂದಲ್ಲ. ನೂರಾರು ರೀತಿಯಲ್ಲಿ ಪ್ಲಾನ್ ಮಾಡಿ ಹುಡುಗಿಯರನ್ನ ಸೆಳೆಯೋದಕ್ಕೆ ಟ್ರೈ ಮಾಡ್ತಾರೆ. ಕೆಲವೊಮ್ಮೆ ಹುಡುಗಿಯರ ಮುಂದೆ ಶೋ ತೋರಿಸೋದಕ್ಕೆ ಹೋಗಿ ನಗೆಪಾಟಲೀಗೆ ಈಡಾಗಿರುವುದು ಇದೆ. ಹುಡುಗರು ಮಾಡುವ ಒಂದೊಂದು ತಂತ್ರಗಳನ್ನು ಕೂಡ ಹುಡುಗಿಯರು ಅಷ್ಟೇ ಸೂಕ್ಷ್ಮವಾಗಿ ಗಮನಿಸುತ್ತಾರೆ. ಪುರುಷರಲ್ಲಿರುವ ಚಿಕ್ಕ ಚಿಕ್ಕ ಸಂಗತಿಗಳಿಂದ ಮಹಿಳೆಯರು ಬೇಗ ಆಕರ್ಷಿತರಾಗುತ್ತಾರೆ.
ಪುರುಷರು ಮಾತನಾಡುವ ಸ್ಟೈಲ್ ಕೆಲವರಿಗೆ ಇಷ್ಟವಾದ್ರೆ, ಇನ್ನೂ ಕೆಲವರಿಗೆ ಹೇರ್ ಸ್ಟೈಲ್, ನಗು , ಫಿಟ್ನೆಸ್ ಆಕರ್ಷಿಸುತ್ತವೆ. ಆಕರ್ಷಣೆ ಎನ್ನುವುದು ಯಾರಲ್ಲಿ, ಯಾವಾಗ ಹುಟ್ಟಿಕೊಳ್ಳುತ್ತೆ. ಪ್ರತಿಯೊಬ್ಬರಲ್ಲೂ ಆಕರ್ಷಣೆ ಗುಣಗಳು ಇದ್ದೇ ಇರುತ್ತೆ. ಕೆಲವು ಅಂಶಗಳಿಂದ ಪುರುಷರು ಮಹಿಳೆಯರಿಗೆ ಹೆಚ್ಚು ಇಷ್ಟವಾಗ್ತಾರೆ.

ಪುರುಷರು ಕೂಲಿಂಗ್ ಗ್ಲಾಸ್ ಹಾಕಿದಾಗ ಲುಕ್ ಬದಲಾಗುತ್ತೆ. ಆ ಹೊಸ ಲುಕ್ ಹೆಚ್ಚಿನ ಮಹಿಳೆಯರಿಗೆ ಇಷ್ಟವಾಗುತ್ತೆ. ಇನ್ನು ಹುಡುಗರು ಮಾತನಾಡುವಾಗ ತೊದಲುವುದು, ಹುಡುಗರ ಈ ತೊದಲು ನುಡಿಯ ಮಾತು ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತದೆ. ಹುಡುಗಿಯನ್ನೇ ಹೆಚ್ಚಾಗಿ ಹೊಗಳುವುದು, ಹೆಚ್ಚು ಕಾಮಿಡಿ ಮಾಡುವುದು ಇವೆಲ್ಲಾವೂ ಹುಡುಗಿರಯರಿಗೆ ಹೆಚ್ಚು ಇಷ್ಟವಾಗುತ್ತೆ.
ಇನ್ನು ಹುಡುಗರ ಡ್ರೆಸ್ಸೆನ್ಸ್ ನೋಡಿಯೂ ಹುಡುಗಿಯರು ಫಿದಾ ಆಗ್ತಾರೆ.. ಫಿಟ್ ಆಂಡ್ ಫೈನ್ ದೇಹಕ್ಕೆ ತಕ್ಕಂತೆ ಹೊಂದುವಂತೆ ಡ್ರೆಸ್ ಮಾಡಿಕೊಂಡ್ರೆ ಇಷ್ಟವಾಗುತ್ತೆ. ಹುಡುಗರ ನಗು, ಅದ್ರಲ್ಲೂ ಗುಳಿ ಕೆನ್ನೆಯ ಹುಡಗನ ನಗು ಅಂತೂ ಹುಡುಗಿಯರಿಗೆ ಹುಚ್ಚು ಹಿಡಿಸುತದಂತೆ






