ಪೋರ್ನ್ ಸೈಟ್ ಡೇಟಾ ಅಳಿಸಲು ಸುಲಭ ದಾರಿ ಕೊಟ್ಟ ಗೂಗಲ್!

0
68

ಗೂಗಲ್ ತನ್ನ ವಾರ್ಷಿಕ ಟೆಕ್ ಕಾನ್ಫರೆನ್ಸ್ ನಲ್ಲಿ ಹೊಸದೊಂದು ನಿರ್ಣಯವನ್ನು ತೆಗೆದುಕೊಳ್ಳುವುದರ ಮೂಲಕ ಬಳಕೆದಾರರ ಗೌಪ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಿದೆ. ಹೌದು ಈ ಹಿಂದೆ ಇರದೆ ಇದ್ದ ಹೊಸದೊಂದು ಆಪ್ಷನ್ ಅನ್ನು ಗೂಗಲ್ ಆರಂಭಿಸಿದ್ದು ಬಳಕೆದಾರರು ಕಳೆದ ಹದಿನೈದು ನಿಮಿಷಗಳ ಹುಡುಕಾಟವನ್ನು ಒಂದೇ ಟ್ಯಾಪ್ ನಲ್ಲಿ ಅಳಿಸಬಹುದಾಗಿದೆ.

 

 

ಈ ಹಿಂದೆ ತಾವು ಹುಡುಕಾಟ ನಡೆಸಿದ ಫಲಿತಾಂಶಗಳನ್ನು ಅಳಿಸಲು ಅನೇಕ ನಿಮಿಷಗಳು ಹಿಡಿಯುತ್ತಿತ್ತು. ಆದರೆ ಇದೀಗ ಕ್ವಿಕ್ ಡಿಲೀಟ್ ಎಂಬ ಹೊಸ ಆಪ್ಷನ್ ಅನ್ನು ಗೂಗಲ್ ಅನಾವರಣಗೊಳಿಸಿದ್ದು ಕೇವಲ ಒಂದೇ ಒಂದು ಕ್ಲಿಕ್ ನಲ್ಲಿ ನಿಮ್ಮ ಕೊನೆಯ ಹದಿನೈದು ನಿಮಿಷಗಳ ಸರ್ಚ್ ಹಿಸ್ಟರಿ ಮಾಯವಾಗಿ ಬಿಡಲಿದೆ.

 

 

 

ನಿಮ್ಮ ಗೂಗಲ್ ಅಪ್ಲಿಕೇಷನ್ ನಲ್ಲಿ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ ಡೌನ್ ಬಾರ್ ಓಪನ್ ಆಗುತ್ತದೆ. ಈ ಡೌನ್ ಬಾರ್ ನಲ್ಲಿ ಕಳೆದ ಹದಿನೈದು ನಿಮಿಷಗಳ ಸರ್ಚ್ ಹಿಸ್ಟರಿ ಯನ್ನು ಡಿಲೀಟ್ ಮಾಡಲು ಲಾಸ್ಟ್ 15 ಮಿನಿಟ್ಸ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ಹೀಗೆ ಮಾಡುವುದರಿಂದ ಅತಿ ವೇಗವಾಗಿ ಸರ್ಚ್ ಹಿಸ್ಟರಿ ಯನ್ನು ಅಳಿಸಬಹುದು.

LEAVE A REPLY

Please enter your comment!
Please enter your name here