ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯಲ್ಲಿನ ಪ್ರಶ್ನಾತೀತ ನಾಯಕರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ವರ್ಚಸ್ಸನ್ನೇ ಬಿಜೆಪಿ ಬಳಸಿಕೊಳ್ಳುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ.
ಇದರ ಮಧ್ಯೆ ಪ್ರಧಾನಿ ಮೋದಿ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಮಾತನಾಡುವ ವೇಳೆ, ಪಕ್ಷದಲ್ಲಿ ತಮ್ಮನ್ನು ಎಚ್ಚರಿಸುವ, ಬುದ್ಧಿವಾದ ಹೇಳುವ ಹಾಗೂ ಪ್ರಶ್ನಿಸುವವರು ಯಾರೆಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ನರೇಂದ್ರ ಮೋದಿಯವರು ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಜೊತೆ ಈ ಹಿಂದೆ ತಾವು ಪಕ್ಷದ ಕೆಲಸ ಮಾಡಿದ್ದು, ಅವರು ಮಾತ್ರ ನನಗೆ ಅಧಿಕಾರಯುತವಾಗಿ ಎಚ್ಚರಿಸುತ್ತಿದ್ದರು. ಈ ವಿಷಯ ಪಕ್ಷದಲ್ಲಿ ಎಲ್ಲರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಸುಮಿತ್ರಾ ಮಹಾಜನ್ ಅವರನ್ನು ಸುಮಿತ್ರಾ ತಾಯಿ ಎಂದು ಹೇಳಿದ ನರೇಂದ್ರ ಮೋದಿಯವರು, ಸಮಾವೇಶದ ಬಳಿಕ ತುಂಬ ಹಸಿವಾಗುತ್ತಿದೆ ಏನಾದರೂ ಇದೆಯಾ ಎಂದು ಪ್ರಶ್ನಿಸಿದ್ದಾರೆ.