ಪ್ರವಾಸ ನಿಲ್ಲಿಸಿ ಬೆಂಗಳೂರಿಗೆ ವಾಪಾಸ್ ಆಗ್ತಿದ್ದಾರೆ ಕುಮಾರ ಸ್ವಾಮಿ ! ಯಾಕೆ ಗೊತ್ತಾ?

Date:

ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಅಮೆರಿಕಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒಂದು ದಿನ ಮುಂಚಿತವಾಗಿಯೇ ಭಾರತಕ್ಕೆ ವಾಪಾಸ್‌ ಬರುತ್ತಿದ್ದಾರೆಂದು ತಿಳಿದುಬಂದಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿರುವ ಕುಮಾರಸ್ವಾಮಿ, ಈಗಾಗಲೇ ನ್ಯೂಜೆರ್ಸಿಯಿಂದ ನ್ಯೂಯಾರ್ಕ್‌ ಗೆ ತೆರಳುತ್ತಿದ್ದಾರೆಂದು ಹೇಳಲಾಗಿದೆ. ನ್ಯೂಯಾರ್ಕ್‌ ನಿಂದ ನವದೆಹಲಿಗೆ ಬರಲಿರುವ ಸಿಎಂ ಬಳಿಕ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಹ ವಿದೇಶದಲ್ಲಿದ್ದು, ಅವರೂ ಕೂಡಾ ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆಂದು ಹೇಳಲಾಗಿದೆ.

Share post:

Subscribe

spot_imgspot_img

Popular

More like this
Related

ಶೌಚಾಲಯದಲ್ಲಿ ಫೋನ್ ಬಳಸುತ್ತೀರಾ? ನಿಮಗೆ ಗೊತ್ತಿಲ್ಲದ ಈ ಸಮಸ್ಯೆಗಳು ಕಾಡಬಹುದು!

ಶೌಚಾಲಯದಲ್ಲಿ ಫೋನ್ ಬಳಸುತ್ತೀರಾ? ನಿಮಗೆ ಗೊತ್ತಿಲ್ಲದ ಈ ಸಮಸ್ಯೆಗಳು ಕಾಡಬಹುದು! ಇತ್ತೀಚಿನ ದಿನಗಳಲ್ಲಿ...

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ ಬೆಂಗಳೂರು:...

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ ಕಾರವಾರ:...

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ!

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ! ಬೆಂಗಳೂರು:...