No menu items!
24.1 C
Munich
Thursday, June 4, 2026

ಬಂಗಾಳ, ತಮಿಳುನಾಡು ಚುನಾವಣೆಯಲ್ಲಿ ಹಣದ ಮಳೆ; ₹1,000 ಕೋಟಿಗೂ ಅಧಿಕ ಮೌಲ್ಯದ ವಸ್ತು ಜಪ್ತಿ

Must read

ಭಾರತದಲ್ಲಿ ಚುನಾವಣೆ ಬಂದರೆ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತೆ. ಯಾಕೆಂದರೆ.. ಹಣ ಕಂಡರೆ ಹೆಣ ಕೂಡ ನಮ್ಮ ದೇಶದಲ್ಲಿ ಬಾಯಿ ಬಿಡುತ್ತೆ. ನೂರು, ಇನ್ನೂರು, ಐನೂರಕ್ಕೆಲ್ಲಾ ಇಲ್ಲಿ ಹಲವರು ಇಲ್ಲಿ ತಮ್ಮ ಮತ ಮಾರಿಕೊಳ್ಳುತ್ತಾರೆ. ಹೇಳಿಕೊಳ್ಳಲು ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಆದರೆ, ನೈತಿಕತೆ ಹಲವರಲ್ಲಿ ಇಲ್ಲಿ ಇಲ್ಲ. ಜನತೆಯ ಕಷ್ಟ ಅರಿಯದ ಜನಪ್ರತಿನಿಧಿಯನ್ನು ಹಲವರು ಧಿಕ್ಕರಿಸುವುದು ಇಲ್ಲ .

ಮತದಾನ ನಮ್ಮ ಹಕ್ಕು ಎಂದು ಹೇಳುತ್ತಾರೆ ಅಷ್ಟೇ. ಆದರೆ ಕುಣಿಯೋದು ಜನಪ್ರತಿನಿಧಿಗಳು ಕುಣಿಸಿದಂತೆಯೇ. ಇದಕ್ಕೆ ಕೈಗನ್ನಡಿ ಎಂಬಂತೆ ಚುನಾವಣೆಯ ಆಸು ಪಾಸು ಕೋಟ್ಯಾಂತರ ಹಣ ಜಪ್ತಿ ಮಾಡಲಾಗುತ್ತೆ. 2024ರ ಲೋಕ ಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಆಯೋಗವೇ ಹೇಳಿದಂತೆ 4,650 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ದೇಶಾದ್ಯಂತ ವಶಕ್ಕೆ ಪಡೆಯಲಾಗಿತ್ತು. ಅಲ್ಲಿಗೆ ನಮ್ಮ ದೇಶದಲ್ಲಿ ಮತ ಮಾರಿಕೊಳ್ಳುವವರ ಸಂಖ್ಯೆ ಎಷ್ಟಿದೆ ಎನ್ನುವುದನ್ನು ನೀವೆ ಲೆಕ್ಕ ಹಾಕಿ.


ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮತದಾರರನ್ನು ಸೆಳೆಯಲು ನಗದು, ಮಾದಕ ದ್ರವ್ಯಗಳು ಮತ್ತು ಮದ್ಯ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಶಪಡಿಸಿಕೊಳ್ಳುವಿಕೆಗಳು 1000 ಕೋಟಿ ರೂ.ಗಳನ್ನು ದಾಟಿವೆ ಎಂದು ಚುನಾವಣಾ ಆಯೋಗ ಇಂದು (ಏಪ್ರಿಲ್ 22) ತಿಳಿಸಿದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ ಮತದಾರರನ್ನು ಸೆಳೆಯಲು ಕಸರತ್ತು ತುಸು ಹೆಚ್ಚೇ ನಡೆದಿದ್ದು, ಜಪ್ತಿ ಮಾಡಿಕೊಳ್ಳಲಾದ ವಿವರ ಮತ್ತು ಅಂಕಿ-ಸಂಖ್ಯೆ ಈ ಕೆಳಗಿನಂತೆ ಇದೆ.

ವಿವರಗಳುಪಶ್ಚಿಮ ಬಂಗಾಳ (WB)ತಮಿಳುನಾಡು (TN)ಒಟ್ಟು
ನಗದು₹27.48 ಕೋಟಿ₹100.19 ಕೋಟಿ₹127.67 ಕೋಟಿ
ಮದ್ಯ₹102.45 ಕೋಟಿ₹3.85 ಕೋಟಿ₹106.3 ಕೋಟಿ
ಮಾದಕ ದ್ರವ್ಯ (Drugs)₹108.11 ಕೋಟಿ₹76.72 ಕೋಟಿ₹184.83 ಕೋಟಿ
ಅಮೂಲ್ಯ ಲೋಹಗಳು (ಚಿನ್ನ/ಬೆಳ್ಳಿ)₹55.88 ಕೋಟಿ₹159.31 ಕೋಟಿ₹215.19 ಕೋಟಿ
ಉಚಿತ ವಸ್ತುಗಳು (Freebies)₹178.83 ಕೋಟಿ₹259.14 ಕೋಟಿ₹437.97 ಕೋಟಿ
ಒಟ್ಟು ಮೊತ್ತ₹472.89 ಕೋಟಿ₹599.24 ಕೋಟಿ₹1,072.13 ಕೋಟಿ

ಇನ್ನುಳಿದಂತೆ ಪಶ್ಚಿಮ ಬಂಗಾಳದಲ್ಲಿ ನಾಳೆ ಅಂದರೆ ಏಪ್ರಿಲ್ 23ರಂದು ಮೊದಲ ಹಂತದ ಮತದಾನ ನಡೆಯಲಿದೆ. ಏಪ್ರಿಲ್ 29ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ನಾಳೆ (ಏಪ್ರಿಲ್ 23) ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಹಣಬಲದ ಮುಂದೆ ಜನ ಬಲ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

- Advertisement -spot_img

More articles

- Advertisement -spot_img

Latest article