ಬರೋಬ್ಬರಿ 400 ಕಂಪನಿ ಒಡೆಯನ ಸ್ಟೋರಿ..!

1
102

ಫ್ರ್ಯಾನ್ಸ್ ದೇಶದ ಜೀನ್ ಮಾರ್ಕ್ ಬೊರೆಲ್ಲೋ ಅಂತಾ. ಇವರ ವಯಸ್ಸು ಈಗ 60 ದಾಟಿದೆ. ಸೋಶಿಯಲ್ ಸಾಲಿಡಾರಿಟಿ ಎಕಾನಮಿ ಗ್ರೂಪ್ – ಎಸ್ ಓ ಎಸ್ ಅನ್ನೋ ಕಂಪನಿಯ ಸಂಸ್ಥಾಪಕರು ಹೌದು. ಗ್ರೂಪ್ ಎಸ್ ಓ ಎಸ್ ವಿಶ್ವದಲ್ಲೇ ಅತಿ ಹೆಚ್ಚು ಸೋಶಿಯಲ್ ಎಂಟರ್ಪ್ರೈಸಸ್ ಉದ್ಯಮವನ್ನು ಹೊಂದಿದೆ.

ಜೀನ್, ಎಸ್ ಓ ಎಸ್ ಎಂಬ ಈ ಒಂದೇ ಕಂಪನಿಯ ಒಡೆತನ ಹೊಂದಿಲ್ಲ. ಜಿನ್ ಮತ್ತವರ ತಂಡ ಈಗ ಸರಿಸುಮಾರು 400ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಅಚ್ಚರಿ ಅದರೆ, ಗ್ರೂಪ್ ಎಸ್ ಓ ಎಸ್ ಅಧೀನದಲ್ಲಿ ಬರುವ ಎಲ್ಲಾ ಕಂಪನಿಗಳು ಸ್ವತಂತ್ರ ಹಣಕಾಸು ವ್ಯವಸ್ಥೆಯನ್ನು ಕೂಡ ಹೊಂದಿವೆ.
ಇನ್ನು, ಗ್ರೂಪ್ ಎಸ್ ಓ ಎಸ್ ಆರಂಭವಾಗಿದ್ದು 1984ರಲ್ಲಿ. ಕಳೆದ 35 ವರ್ಷಗಳಲ್ಲಿ ಗ್ರೂಪ್ ಎಸ್ ಓ ಎಸ್ 35 ದೇಶಗಳಿಗೆ ವಿಸ್ತರಿಸಿದೆ.ಸದ್ಯಕ್ಕೆ ಸುಮಾರು 15 ಸಾವಿರಕ್ಕಿಂತಲೂ ಅಧಿಕ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿದೆ. ಶಿಕ್ಷಣ, ಆರೋಗ್ಯ, ಹೌಸಿಂಗ್, ಎಂಪ್ಲಾಯಿಮೆಂಟ್ ಸೇರಿದಂತೆ ಹಲವು ಸಾಮಾಜಿಕ ವಿಭಾಗಗಳಲ್ಲೂ ಸೇವೆ ಸಲ್ಲಿಸುತ್ತಿದೆ. ಹೀಗಾಗಿ ಗ್ರೂಪ್ ಎಸ್ ಓ ಎಸ್ ಯುರೋಪ್ ದೇಶಗಳಲ್ಲೇ ಅತ್ಯುತ್ತಮ ಪ್ರಸಿದ್ಧ ಕಂಪನಿಯೆಂದು ಹೆಸರು ಮಾಡಿದೆ.


ಅಂದಹಾಗೇ, ಜೀನ್ ಮಾರ್ಕ್ ಬೊರೆಲ್ಲೋರನ್ನು ಸೋಶಿಯಲ್ ಸೆಕ್ಟರ್ನ ‘ ಬಿಲ್ ಗೇಟ್ಸ್ ’ ಅಂತನೂ ಕರೆಯುತ್ತಾರಂತೆ ಯುರೋಪ್ ರಾಷ್ಟ್ರಗಳ ಜನ. ಏಕೆಂದರೆ, ಜೀನ್ ಗಳಿಕೆಯಲ್ಲೂ ಸಾಕಷ್ಟು ಮುಂದಿದ್ದಾರೆ. ಫ್ರಾನ್ಸ್ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ಸೈನಿಕನ ಮಗನಾಗಿ ಹುಟ್ಟಿದ್ದ ಜೀನ್ ಸಾಕಷ್ಟು ಕಷ್ಟಪಟ್ಟು ಮೇಲೆ ಬಂದು ಈಗ ಉದ್ಯಮ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ.
ಇನ್ನು,1984ರಲ್ಲಿ ಜೀನ್, ಗ್ರೂಪ್ ಎಸ್ ಓ ಎಸ್ ಹುಟ್ಟು ಹಾಕಿದ್ರು. ಆಗ ಅದು ಕೇವಲ ಒಂದೇ ಒಂದು ಸಂಸ್ಥೆಯಾಗಿತ್ತು. ಫ್ರಾನ್ಸ್ನಲ್ಲಿದ್ದ ಡ್ರಗ್ ಮಾಫಿಯಾ ವಿರುದ್ಧ ಹೋರಾಟ ಮಾಡುತ್ತಾ ಡಗ್ಸ್ನಿಂದ ತೊಂದರೆಗೀಡಾದವರ ನೆರವಿಗೆ ನಿಂತ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಗ್ರೂಪ್ ಎಸ್ ಓ ಎಸ್ ಪಾತ್ರವಾಗಿದೆ.


ಸಮಾಜಮುಖಿ ಜೀನ್, ಡ್ರಗ್ಸ್ನ ದಾಸರಾಗಿದ್ದ ನೂರಾರು ಜನ ಮನ ಪರಿವರ್ತಿಸುವ ಕಾರ್ಯ ಮಾಡುತ್ತಿದ್ದಾರೆ. ಹೆಚ್ಐವಿ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿದ್ದವರಿಗಾಗಿ ರಕ್ತ ಪರೀಕ್ಷಾ ಕೇಂದ್ರವನ್ನು ಸಹ ಆರಂಭಿಸಿದ್ದಾರೆ. ಹೆಲ್ತ್ ಕೇರ್ ಉದ್ಯಮಕ್ಕೆ ಕಾಲಿಟ್ಟು ಆಸ್ಪತ್ರೆಗಳನ್ನು ಕಟ್ಟಿಸಿದ್ದರಲ್ಲದೆ, ನಿವೃತ್ತರಿಗಾಗಿ ಮನೆಗಳನ್ನು ಕೂಡ ನಿರ್ಮಿಸಿಕೊಟ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಸಾಮಾನ್ಯ ಸೈನಿಕ ಮಗ ಜೀನ್, ಜೀವನದಲ್ಲಿ ಒಂದೊಂದೇ ಹೆಜ್ಜೆಗಳನ್ನು ಇಟ್ಟು ಇಂದು ಯಶಸ್ಸಿನ ಶಿಖರ ಏರಿದ್ದಾರೆ. ಚಿಕ್ಕ ಚಿಕ್ಕ ಹೆಜ್ಜೆಗಳು ಜೀನ್ ಅವರನ್ನು ವಿಶ್ವದ ಪ್ರಸಿದ್ಧ ವ್ಯಕ್ತಿಯನ್ನಾಗಿಸಿದೆ. ಇಂದು ಗ್ರೂಪ್ ಎಸ್ ಓ ಎಸ್ ವಿಶ್ವದ ಮೂಲೆ ಮೂಲೆಯನ್ನು ತಲುಪಿದೆ. ಸದ್ಯಕ್ಕೆ ಗ್ರೂಪ್ ಎಸ್ ಓ ಎಸ್ 600 ಮಿಲಿಯನ್ ಯುರೋ ವಹಿವಾಟು ನಡೆಸುತ್ತಿದೆ. ಈ ವಹಿವಾಟನ್ನು 1 ಬಿಲಿಯನ್ ಯೂರೋಗೆ ಹೆಚ್ಚಿಸಿ ಗ್ರೂಪ್ ಎಸ್ ಓ ಎಸ್ ನಿಂದ ನಿವೃತ್ತರಾಗುವ ಕನಸು ಜೀನ್ ಮಾರ್ಕ್ ಬೊರೆಲ್ಲೋ ಅವರದ್ದು.
ಏನೇ ಹೇಳಿ, ಫ್ರಾನ್ಸ್ ದೇಶದ ಉದ್ಯಮಿಯ ಈ ಸಾಧನೆ ವಿಶ್ವದ ಎಲ್ಲಾ ಉದ್ಯಮಿಗಳಿಗೂ ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ.

1 COMMENT

LEAVE A REPLY

Please enter your comment!
Please enter your name here