No menu items!
12.4 C
Munich
Wednesday, April 29, 2026

ಬೆಂಗಳೂರಿನಲ್ಲಿ ಎಬಿಡಿ ರಸ್ತೆ!! ಏನ್ ಕ್ರೇಜ್ ಗುರೂ!

Must read

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಎಬಿ ಡಿವಿಲಿಯರ್ಸ್ ಸೌತ್ ಆಫ್ರಿಕಾದವರಾದರೂ ಸಹ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಭಾರತದ ಯಾವ ಕ್ರಿಕೆಟಿಗನಿಗೂ ಸಹ ಕಡಿಮೆಯಿಲ್ಲದಂತೆ ಎಬಿಡಿ ಅವರ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ.

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅದ್ಬುತ ಆಟ ಆಡುವ ಎಬಿಡಿ ಎಂದರೆ ಆರ್ ಸಿಬಿ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಇಷ್ಟು ಆವೃತ್ತಿಗಳ ಐಪಿಎಲ್ ನಂತೆ ಈ ಬಾರಿಯ ಐಪಿಎಲ್ ನಲ್ಲಿಯೂ ಸಹ ಎಬಿ ಡಿವಿಲಿಯರ್ಸ್ ಆರ್ ಸಿಬಿ ಪರ ಅದ್ಭುತ ಆಟವನ್ನು ಆಡುತ್ತಿತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ವಿಶೇಷವಾದ ಅಭಿಯಾನವೊಂದನ್ನು ಮಾಡಿದ್ದಾರೆ.

 

 

ಹೌದು ಬೆಂಗಳೂರಿನ ಯಾವುದಾದರೂ ಒಂದು ರಸ್ತೆಗೆ ಎಬಿ ಡಿವಿಲಿಯರ್ಸ್ ರಸ್ತೆ ಅಥವಾ ಯಾವುದಾದರೂ ಒಂದು ವೃತ್ತಕ್ಕೆ ಎಬಿ ಡಿವಿಲಿಯರ್ಸ್ ವೃತ್ತ ಎಂದು ಹೆಸರಿಡಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ. ಬಿ ಎಸ್ ಯಡಿಯೂರಪ್ಪ ಅವರನ್ನು ಟ್ಯಾಗ್ ಮಾಡಿ ಅಭಿಮಾನಿಗಳು ಈ ರೀತಿಯ ಟ್ರೆಂಡ್ ಮಾಡಿದ್ದು ಆದಷ್ಟು ಬೇಗ ಬೆಂಗಳೂರಿನಲ್ಲಿ ಎಬಿ ಡಿವಿಲಿಯರ್ಸ್ ರಸ್ತೆ ಬರಲಿ ಎಂದು ಕೇಳಿಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article