ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದ್ರೆ ದೇಹದಲ್ಲಿ ಏನಾಗುತ್ತೆ ಗೊತ್ತಾ?
ಬೇಸಿಗೆಯ ಬಿಸಿಲಿನಲ್ಲಿ ದೇಹದ ತಂಪು ಮತ್ತು ಚೈತನ್ಯವನ್ನು ಕಾಪಾಡಲು ಎಳನೀರು ಅತ್ಯುತ್ತಮ ಪಾನೀಯವಾಗಿದೆ. ವಿಶೇಷವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ತಜ್ಞರ ಪ್ರಕಾರ, ಎಳನೀರು ನೈಸರ್ಗಿಕ ಎನರ್ಜಿ ಡ್ರಿಂಕ್ ಆಗಿ ಕಾರ್ಯನಿರ್ವಹಿಸಿ ದೇಹಕ್ಕೆ ತಕ್ಷಣದ ಶಕ್ತಿ ನೀಡುತ್ತದೆ. ರಾತ್ರಿಯ ನಿದ್ದೆಯಲ್ಲಿ ಕಳೆದುಕೊಂಡ ನೀರಿನ ಅಂಶವನ್ನು ಮರುಪೂರೈಸಿ ದೇಹವನ್ನು ಹೈಡ್ರೇಟ್ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಎಳನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಣೆ ಕಾಣುತ್ತದೆ. ಆಸಿಡಿಟಿ, ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಕಾರಿ.
ಇದಲ್ಲದೆ, ಎಳನೀರಿನಲ್ಲಿ ಇರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯ ಕಾಪಾಡುವಲ್ಲಿಯೂ ಇದು ಉಪಯುಕ್ತವಾಗಿದೆ.
ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕುವ ಮೂಲಕ ತ್ವಚೆಯ ಕಾಂತಿಯನ್ನು ಹೆಚ್ಚಿಸುವುದಲ್ಲದೆ, ದೇಹದ ಆಯಾಸವನ್ನು ಕಡಿಮೆ ಮಾಡಿ ಚೈತನ್ಯವನ್ನು ಹೆಚ್ಚಿಸುತ್ತದೆ.
ಒಟ್ಟಾರೆ, ಬೇಸಿಗೆಯಲ್ಲಿ ಪ್ರತಿದಿನ ಬೆಳಿಗ್ಗೆ ಎಳನೀರು ಸೇವಿಸುವುದು ದೇಹದ ಆರೋಗ್ಯ ಕಾಪಾಡಲು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.



