No menu items!
4.6 C
Munich
Friday, April 17, 2026

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಡ್ಯಾನ್ಸ್‌ಗೆ ನೆಟ್ಟಿಗರು ಫಿದಾ

Must read

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಬಳಿಕ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಕಂಚಿನ ಪದಕ ಜಯಿಸುವ ಮೂಲಕ ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿರುವ ಪಿವಿ ಸಿಂಧು, ಇದೀಗ ಬ್ಯಾಡ್ಮಿಂಟನ್ ಕೋರ್ಟ್ ಹೊರಗೂ ಗಮನಸೆಳೆದಿದ್ದಾರೆ.

 

ಬರೀ ಕ್ರೀಡೆಗೆ ಸೀಮಿತವಾಗದೆ, ನೃತ್ಯದಲ್ಲೂ ತಮಗಿರುವ ಪ್ರತಿಭೆಯನ್ನು ಪಿವಿ ಸಿಂಧು ದೀಪಾವಳಿ ಹಬ್ಬದ ಸಮಯದಲ್ಲಿ ಪ್ರದರ್ಶಿಸಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

26 ವರ್ಷದ ಪಿವಿ ಸಿಂಧು ದೀಪಾವಳಿ ಹಬ್ಬದ ಸಮಯದಲ್ಲಿ ಜನಪ್ರಿಯ ‘ಲವ್ ನ್ವಾನ್‌ಟಿಟಿ’ ಸಂಗೀತದ ರಿಮಿಕ್ಸ್ ಮ್ಯೂಸಿಕ್‌ಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಸಿಂಧು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅವರ ಅಭಿಮಾನಿಗಳು ಅವರ ನೃತ್ಯ ಪ್ರತಿಭೆಗೆ ಫಿದಾ ಆಗಿದ್ದಾರೆ.

ನೈಜೀರಿಯಾದ ಗಾಯಕ ಸಿಕೇ ಅವರ ಜನಪ್ರಿಯ ಹಾಡಿನ ರಿಮಿಕ್ಸ್ ಸಂಗೀತಕ್ಕೆ ಸಿಂಧು, ಹಸಿರು ಲೆಹೆಂಗಾದಲ್ಲಿ ನರ್ತಿಸಿದ್ದು, ಅವರ ಲವ್ಲಿ ನಗುವಿಗೂ ಅಭಿಮಾನಿಗಳು ಮನಸೋತಿದ್ದಾರೆ. ಕೆಲವೇ ಗಂಟೆಗಳಲ್ಲಿ 1.7 ದಶಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿರುವ ಈ ವಿಡಿಯೋ, ಸುಮಾರು ನಾಲ್ಕೂವರೆ ಲಕ್ಷದಷ್ಟು ಲೈಕ್ಸ್‌ಗಳನ್ನು ಪಡೆದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article