ಮಂಡ್ಯದಲ್ಲಿ ಭಾರಿ ಭದ್ರತೆ, ಫಲಿತಾಂಶದ ದಿನ 144 ಸೆಕ್ಷನ್ ಜಾರಿ..! ಯಾಕೆ ಗೊತ್ತಾ?

0
472

ಮೇ.23ಕ್ಕೆ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನವನ್ನು ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶವನ್ನು ಇಡೀ ದೇಶದ ಜನತೆ ಎದುರು ನೋಡುತ್ತಿರುವುದರಿಂದ ಚುನಾವಣಾ ಆಯೋಗ ಕೂಡ ಮಂಡ್ಯ ಕ್ಷೇತ್ರದ ಬಗ್ಗೆ ತೀವ್ರವಾದ ಕಾಳಜಿಯನ್ನು ತೋರುತ್ತಿದೆ.


ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಫಲಿತಾಂಶ ತೀವ್ರ ಕುತೂಹಲ ಹುಟ್ಟು ಹಾಕಿದೆ.


ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯದಲ್ಲಿ ಮೇ 23ಕ್ಕೆ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಈಗಾಗಲೇ ನೇಮಿಸಲಾಗಿದೆ.


ಫಲಿತಾಂಶದ ಬಳಿಕ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ, ಹೀಗಾಗಿ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ತುಮಕೂರು, ಹಾಸನ, ಮೈಸೂರು, ರಾಮನಗರ, ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ.


ಇನ್ನು ಫಲಿತಾಂಶದಂದು ಬೆಳಿಗ್ಗೆ 6ರಿಂದ, ಮೇ 24ರ ಮಧ್ಯರಾತ್ರಿವರೆಗೂ 144 ಸೆಕ್ಷನ್ ಜಾರಿಯಾಗೆ ತರಲು ನಿರ್ಧರಿಸಲಾಗಿದೆ ಅಲ್ಲದೆ ಜಿಲ್ಲಾಡಳಿತದಿಂದ ಮದ್ಯ ಮಾರಾಟಕ್ಕೂ ಬ್ರೇಕ್ ಹಾಕಲಾಗಿದೆ.


ಒಟ್ಟಾರೆ ಫಲಿತಾಂಶದ ದಿನ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೀಗವಹಿಸಲು ಇಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಗಿದೆ.

LEAVE A REPLY

Please enter your comment!
Please enter your name here