ಮಧ್ಯಮ ವರ್ಗದ ಕಾರ್ಮಿಕರಿಗೆ ಬಜೆಟ್ ಮೂಲಕ ಗುಡ್ ನ್ಯೂಸ್ ಕೊಟ್ಟ ಮೋದಿ..!!
ಇಂದು ಹಣಕಾಸು ಸಚಿವ ಪಿಯೂಶ್ ಗೋಯೆಲ್ ಬಜೆಟ್ ಮಂಡಿಸಿದ್ದಾರೆ.. ಈ ಬಜೆಟ್ ನ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ರು, ಮೋದಿ ಮಧ್ಯಮ ವರ್ಗದ ಕಾರ್ಮಿಕರಿಗೆ ರಿಲೀಫ್ ನೀಡಿದ್ದಾರೆ… ಈ ಹಿಂದೆ ವಾರ್ಷಿಕವಾಗಿ 2.50 ಲಕ್ಷ ಸಂಬಳವಿರುವವರು ಸಹ ತೆರಿಗೆ ಕಟ್ಟಬೇಕಾಗಿತ್ತು.. ಇದರಿಂದ ಈ ವರ್ಗದಲ್ಲಿ ಬರುವ ಮಧ್ಯಮ ಕುಟುಂಬಗಳ ಕೆಲಸಗಾರರು ತೀರ್ವ ತೊಂದರೆ ಎದುರಿಸುವಂತಾಗಿತ್ತು..
ಹೀಗಾಗೆ ಇಂದು ಮಂಡನೆಯಾದ ಬಜೆಟ್ ನಲ್ಲಿ ಮೋದಿ 2.50 ಇಂದ 5 ಲಕ್ಷ ಇದನ್ನ ಏರಿದಿದ್ದು, 5 ಲಕ್ಷದ ವರೆಗು ವಾರ್ಷಿಕ ಸಂಬಳ ಪಡೆಯುವರ್ಯಾರು ಇನ್ನು ಮುಂದೆ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ ಎಂದಿದೆ.. ಮೋದಿಯ ಈ ನಿಲುವನ್ನ ರಾಜಕೀಯ ಹಿತಸಾಕ್ತಿಯ ಹಿನ್ನೆಲೆಯನ್ನ ಬಣ್ಣಿಸಲಾಗುತ್ತಿದ್ದು, ಆದರೆ ಮಧ್ಯಮ ವರ್ಗದ ಕಾರ್ಮಿಕರು ಖುಷಿ ವ್ಯಕ್ತ ಪಡೆಸಿದ್ದಾರೆ..
ಇನ್ನು ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಬೇಕಾದರೆ, ಮುಂದಿನ ಬಾರಿ ಅಧಿಕಾರ ಹಿಡಿಯಲಿರುವ ಸರ್ಕಾರ ಇದಕ್ಕೆ ಅನುಮೋದೆನೆ ನೀಡುವುದು ಮುಖ್ಯವಾಗಿದೆ..