No menu items!
14.6 C
Munich
Sunday, April 26, 2026

ಮಲಗಿದ್ದ ಮಗುವನ್ನು ನೀರಿನ ಟ್ಯಾಂಕ್‌ಗೆ ಹಾಕಿದ ಕೋತಿಗಳು

Must read

ಆಘಾತಕಾರಿ ಘಟನೆಯೊಂದರಲ್ಲಿ ಮಂಗಗಳ ಗುಂಪೊಂದು ಟೆರೇಸ್ ಮೇಲಿನ ರೂಮೊಂದರಲ್ಲಿ ಮಲಗಿಸಿದ್ದ ಎರಡು ತಿಂಗಳ ಪುಟ್ಟ ಮಗುವನ್ನು ಎತ್ತಿಕೊಂಡು ಹೋಗಿ ನೀರಿನ ಟ್ಯಾಂಕಿಗೆ ಎಸೆದ ಭಯಾನಕ ಘಟನೆ ನಡೆದಿದೆ. ಈ ದುರಂತದಲ್ಲಿ ಮಗು ಪ್ರಾಣ ಬಿಟ್ಟಿದ್ದು, ಉತ್ತರ ಪ್ರದೇಶದ ಭಾಗ್ಪತ್‌ನಲ್ಲಿ ಭಾನುವಾರ ಈ ಘಟನೆ ನಡೆದಿದೆ.

 

ವರದಿಗಳ ಪ್ರಕಾರ ಮಗು ಕೇಶವ್‌ ಕುಮಾರ್‌ ತನ್ನ ಅಜ್ಜಿಯೊಂದಿಗೆ ಟೆರೇಸ್‌ ಮೇಲೆ ಇರುವ ರೂಮೊಂದರಲ್ಲಿ ಮಲಗಿತ್ತು. ಈ ಕೋಣೆಯ ಬಾಗಿಲು ಸ್ವಲ್ಪ ತೆರೆದಿತ್ತು. ಸ್ವಲ್ಪ ತೆರೆದಿದ್ದ ಬಾಗಿಲಿನ ಮೂಲಕ ಒಳಬಂದ ಮಂಗಗಳು ಮಗುವನ್ನು ಎಳೆದುಕೊಂಡು ಹೋಗಿವೆ. ಈ ವೇಳೆ ಮಗು ನಾಪತ್ತೆಯಾಗಿರುವುದು ಅಜ್ಜಿಯ ಗಮನಕ್ಕೆ ಬಂದಿದ್ದು, ಆಕೆ ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾಳೆ. ಈ ವೇಳೆ ಅಜ್ಜಿ ಬೊಬ್ಬೆ ಕೇಳಿ ಮನೆಯವರು ಕೂಡ ಅಲ್ಲಿಗೆ ಬಂದಿದ್ದು ಮಗುವನ್ನು ಹುಡುಕಲು ಶುರು ಮಾಡಿದ್ದಾರೆ. ಈ ವೇಳೆ ಮಗು ನೀರಿನ ಟ್ಯಾಂಕಿಯಲ್ಲಿ ಪತ್ತೆಯಾಗಿದೆ.

 

ಈ ಹಿಂದೆಯೂ ಮಂಗಗಳು ಮಗುವನ್ನು ಎಳೆದೊಯ್ಯಲು ಪ್ರಯತ್ನಿಸಿದ್ದವು. ಈ ವೇಳೆ ಅಲ್ಲೇ ಇದ್ದ ಸಂಬಂಧಿಗಳು ಮಂಗಗಳ ಯತ್ನವನ್ನು ವಿಫಲಗೊಳಿಸಿದ್ದವು ಎಂದು ಮಗುವಿನ ಪೋಷಕರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಂದಿನಗರ ಪೊಲೀಸ್ ಠಾಣೆಯ ಅಧಿಕಾರಿ ಒ.ಪಿ. ಸಿಂಗ್‌ ಮಾಧ್ಯಮಗಳೊಂದಿಗೆ ಮಾತನಾಡಿ, ಇಲ್ಲಿ ಮಂಗಗಳ ಹಾವಳಿ ವಿಪರೀತವಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ತಿಳಿಸಿದ್ದೇವೆ ಎಂದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article