ಮೀಟೂ ಚಿತ್ರರಂಗದಲ್ಲಿ ನಟಿಯರ ಮೇಲೆ ಆಗುವ ಅಹಿತಕರ ಘಟನೆ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ನಟಿಯರು ಹೇಳಿಕೊಳ್ಳುವಂತಹ ಒಂದು ದೊಡ್ಡ ಟಾಪಿಕ್.. ಈ ಅಭಿಯಾನದ ಅಡಿಯಲ್ಲಿ ಹಾಲಿವುಡ್ ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗಿನ ಬಹುತೇಕ ನಟಿಯರು ಇಂಡಸ್ಟ್ರಿಯಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಮುಕ್ತ ಮನಸ್ಸಿನಿಂದ ಹೇಳಿಕೊಂಡಿದ್ದರು. ಇನ್ನು ಚಂದನವನದ ನಟಿ ಶ್ರುತಿ ಹರಿಹರನ್ ಅವರು ಕನ್ನಡ ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಹೇಳಿಕೊಂಡಿದ್ದರು.
ಶ್ರುತಿ ಹರಿಹರನ್ ಅವರು ಮೀಟು ಅಭಿಯಾನದಡಿ ಮಾಡಿದ ಒಂದು ಆರೋಪ ಚಂದನವನವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆ ನಡೆದು ವರ್ಷವೇ ಕಳೆದಿದ್ದು ಇದೀಗ ಶ್ರುತಿ ಹರಿಹರನ್ ಅವರ ತಾಯಿ ಜಯಲಕ್ಷ್ಮಿ ಅವರು ಮೀ ಟೂ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿ ದ ವುಮೆನ್ ಎಂಬ ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ಶ್ರುತಿ ಹರಿಹರನ್ ಅವರ ತಾಯಿ ಜಯಲಕ್ಷ್ಮಿ ಅವರು ಮಾತನಾಡಿದರು. ಯಾರಿಗಾದರೂ ಮೀಟು ಅನುಭವವಾದರೆ ಮುಲಾಜಿಲ್ಲದೆ ಚಪ್ಪಲಿ ತಗೊಂಡು ಹೊಡೆದು ಬಿಡಿ ಎಂದು ಜಯಲಕ್ಷ್ಮಿ ಅವರು ಈ ವೇಳೆ ಹೇಳಿದರು.