No menu items!
14.8 C
Munich
Thursday, April 30, 2026

ರಶ್ಮಿಕಾ ಮಂದಣ್ಣ ಮುಟ್ಟಿ ನೋಡಿಕೊಳ್ಳುವಂತೆ ರಿಪ್ಲೈ ಕೊಟ್ರು ಕನ್ನಡದ ಯುವನಟಿ ಅಧಿತಿ ಪ್ರಭುದೇವ..

Must read

ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡವನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ರಶ್ಮಿಕಾ ಅವರು ಸಹ ಕನ್ನಡವನ್ನು ಹೆಚ್ಚಾಗಿ ಬಳಸದೆ ಟ್ರೋಲ್ ಕ್ಕೆ ತುತ್ತಾಗುತ್ತಿದ್ದಾರೆ. ಎಷ್ಟೇ ಟ್ರೋಲ್ ಗಳು ಆದರೂ ಸಹ ಅದ್ಭುತ ಕಲಿಯದ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗಷ್ಟೇ ನಡೆದ ಕನ್ನಡ ರಾಜ್ಯೋತ್ಸವದ ಬಗ್ಗೆಯೂ ಸಹ ಕೇವಲ ಒಂದು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿ ಸುಮ್ಮನಾಗಿದ್ದರು. ಇನ್ನು ಇದೀಗ ಅದಿತಿ ಪ್ರಭುದೇವ ಅವರು ರಂಗನಾಯಕಿ ಚಿತ್ರದ ಪ್ರೀಮಿಯರ್ ಶೋ ವೇಳೆ ಮಾಧ್ಯಮದವರೊಡನೆ ಮಾತನಾಡುವಾಗ ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿದರು.

ಹೀಗೆ ಮಾತನಾಡುವ ವೇಳೆ ಅದಿತಿ ಪ್ರಭುದೇವ ಅವರು ಕನ್ನಡ ಗೊತ್ತಿದ್ದರೂ ಸಹ ಬಳಸದೇ ಇರುವ ಜನರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ನಮ್ಮ ತಾಯಿಯನ್ನು ತಾಯಿ ಅಂತ ಹೇಳ್ಕೊಳ್ಳೋಕೆ ಹಿಂಜರಿತೀರ ಅಂದ್ರೆ ನೀವು ಎಂಥವರು ಅಂತ ನಾವು ಹೇಳಬೇಕಿಲ್ಲ ಎಂದು ಅದಿತಿ ಪ್ರಭುದೇವ ಅವರು ಕನ್ನಡವನ್ನು ಕಡೆಗಣಿಸುವವರ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಇನ್ನು ಅದಿತಿ ಪ್ರಭುದೇವ ಅವರ ಈ ಹೇಳಿಕೆಯನ್ನು ಕೇಳಿದ ಜನ ಇದು ರಶ್ಮಿಕಾ ಮಂದಣ್ಣ ಅವರಿಗೆ ಸಖತ್ತಾಗಿ ಸೂಟ್ ಆಗುತ್ತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article