ಮೈಸೂರು: ದಾಸವಾಳದ ದಿಂಡು ನುಂಗಿ 6 ತಿಂಗಳ ಮಗು ದುರ್ಮರಣ!

Date:

ಮೈಸೂರು: ದಾಸವಾಳದ ದಿಂಡು ನುಂಗಿ 6 ತಿಂಗಳ ಮಗು ದುರ್ಮರಣ!

ಮೈಸೂರು: ದಾಸವಾಳ ಹೂವಿನ ದಿಂಡಿನ ಭಾಗವನ್ನು ನುಂಗಿದ ಪರಿಣಾಮ ಉಸಿರಾಟದ ತೊಂದರೆಯಿಂದ ಆರೂವರೆ ತಿಂಗಳ ಮಗು ಮೃತಪಟ್ಟಿರುವ ದಾರುಣ ಘಟನೆ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ಹನಗೋಡು ಹೋಬಳಿಯ ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯ್ ಗೌಡ ಮೃತ ಮಗು ಎಂದು ಗುರುತಿಸಲಾಗಿದೆ.
ಮನೆಯ ಹೊಸ್ತಿಲಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳ ಹೂವಿನ ದಿಂಡನ್ನು ಮಗು ಆಟವಾಡುವ ವೇಳೆ ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ಮಗುವಿನ ಅಣ್ಣ ಅದನ್ನು ಹೊರತೆಗೆದಲು ಯತ್ನಿಸಿದ್ದರೂ, ಅದಕ್ಕಿಂತ ಮುಂಚೆಯೇ ಮಗು ದಿಂಡನ್ನು ನುಂಗಿದೆ.
ನುಂಗಿದ ಹೂವಿನ ಭಾಗವು ಶ್ವಾಸಕೋಶದಲ್ಲಿ ಸಿಲುಕಿಕೊಂಡ ಪರಿಣಾಮ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಪೋಷಕರು ಮಗುವನ್ನು ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದರು.
ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

Share post:

Subscribe

spot_imgspot_img

Popular

More like this
Related

ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ʼಗಳಿಂದ ಗ್ರಾಹಕರಿಗೆ ಶಾಕ್

ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ʼಗಳಿಂದ ಗ್ರಾಹಕರಿಗೆ ಶಾಕ್ ಬೆಂಗಳೂರು: ನಗರದಲ್ಲಿ ಪೆಟ್ರೋಲ್...

ಹಾಲು ಕಲಬೆರಕೆಯೇ? ಮನೆಯಲ್ಲಿ ಈ 4 ಟೆಸ್ಟ್ ಮಾಡಿ ಚೆಕ್ ಮಾಡಿ

ಹಾಲು ಕಲಬೆರಕೆಯೇ? ಮನೆಯಲ್ಲಿ ಈ 4 ಟೆಸ್ಟ್ ಮಾಡಿ ಚೆಕ್ ಮಾಡಿ ಇತ್ತೀಚಿನ...

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು ಬೆಂಗಳೂರು:...

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB!

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB! ಬೆಂಗಳೂರುದಲ್ಲಿರುವ ಎಂ....