No menu items!
7.9 C
Munich
Wednesday, September 23, 2026

ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ʼಗಳಿಂದ ಗ್ರಾಹಕರಿಗೆ ಶಾಕ್

Must read

ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ʼಗಳಿಂದ ಗ್ರಾಹಕರಿಗೆ ಶಾಕ್

ಬೆಂಗಳೂರು: ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಬಗ್ಗೆ ಹರಿದಾಡುತ್ತಿರುವ ವದಂತಿಗಳ ನಡುವೆ, ಶೆಲ್ ಪೆಟ್ರೋಲ್ ಬಂಕ್ಗಳು ದರ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿವೆ. ನಯಾರ ದರ ಹೆಚ್ಚಿಸಿದ ಬೆನ್ನಲ್ಲೇ ಶೆಲ್ ಕೂಡ ಬೆಲೆ ಏರಿಕೆ ಮಾಡಿದೆ.
ಬಂಕ್ಗಳಲ್ಲಿ ಏಕಾಏಕಿ ಪೆಟ್ರೋಲ್ ಲೀಟರ್ಗೆ 6 ರೂ. ಮತ್ತು ಡೀಸೆಲ್ ಲೀಟರ್ಗೆ 7 ರೂ. ಹೆಚ್ಚಳ ಮಾಡಲಾಗಿದೆ. ಕಳೆದ 15 ದಿನಗಳಲ್ಲಿ ಇದು ಮೂರನೇ ಬಾರಿ ದರ ಏರಿಕೆಯಾಗಿದೆ. ಪ್ರೀಮಿಯಂ ಪೆಟ್ರೋಲ್ ಜೊತೆಗೆ ಸಾಮಾನ್ಯ ಪೆಟ್ರೋಲ್ ದರವನ್ನೂ ಹೆಚ್ಚಿಸಲಾಗಿದೆ.
ಹಿಂದೆ 106 ರೂ. ಇದ್ದ ಪೆಟ್ರೋಲ್ ದರವನ್ನು ಮೊದಲು 108.50 ರೂ.ಗೆ ಏರಿಸಲಾಗಿತ್ತು. ಇದೀಗ ಮತ್ತಷ್ಟು 6 ರೂ. ಹೆಚ್ಚಳವಾಗಿದ್ದು, ಸಾಮಾನ್ಯ ಪೆಟ್ರೋಲ್ ದರ ಲೀಟರ್ಗೆ 112 ರೂ. ತಲುಪಿದೆ. ಪ್ರೀಮಿಯಂ ಪೆಟ್ರೋಲ್ ದರವು ಲೀಟರ್ಗೆ 122.42 ರೂ.ಗೆ ಏರಿಕೆಯಾಗಿದೆ.
ಡೀಸೆಲ್ ದರವೂ ಏರಿಕೆಯಾಗಿದ್ದು, ಕಳೆದ ವಾರ 91 ರೂ.ನಿಂದ 93.50 ರೂ.ಗೆ ಏರಿಕೆಯಾದ ಬೆಲೆ ಇದೀಗ 98 ರೂ.ಗೆ ತಲುಪಿದೆ. ಪ್ರೀಮಿಯಂ ಡೀಸೆಲ್ ದರ ಲೀಟರ್ಗೆ 108.50 ರೂ. ಆಗಿದೆ.
ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿನ ಇಂಧನ ದರ ಏರಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article