ಸತತ ನಾಲ್ಕನೇ ಬಾರಿ ಯೋಗಿ ಆಧಿತ್ಯನಾಥ್ ನಂಬರ್ 1 ಸಿಎಂ!

0
25

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ವರ್ಷದ ಮಾರ್ಚ್‌ಗೆ ಅಧಿಕಾರ ಪಡೆದುಕೊಂಡು ನಾಲ್ಕು ವರ್ಷ ಪೂರ್ಣಗೊಳಿಸಲಿದ್ದಾರೆ. ಈ ಮಧ್ಯೆ ನಡೆದಿರುವ ಸಮೀಕ್ಷೆಯೊಂದು ಹೊರಬಿದ್ದಿದ್ದು,, ದೇಶದ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ಹೊರಹೊಮ್ಮಿದ್ದಾರೆ. ಸತತ ನಾಲ್ಕು ಬಾರಿಯ ಅತ್ಯುತ್ತಮ ಮುಖ್ಯಮಂತ್ರಿ ಎನ್ನುವ ಪಟ್ಟವನ್ನು ಯೋಗಿ ಆದಿತ್ಯನಾಥ್‌ ಅಲಂಕರಿಸಿಕೊಂಡಿದ್ದಾರೆ.
ಇಂಡಿಯಾ ಟುಡೆ ಗ್ರೂಪ್-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ನಡೆಸಿದ 2021ರ ಸಾಲಿನ ಸಮೀಕ್ಷೆಯಲ್ಲಿ ಶೇ.25ರಷ್ಟು ಮತಗಳನ್ನು ಯೋಗಿ ಆದಿತ್ಯನಾಥ್‌ ಪಾಲಾಗಿದೆ. ಅತ್ಯುತ್ತಮ ಹಾಗೂ ಉತ್ತಮ ಸಾಧನೆ ತೋರಿದ ಮುಖ್ಯಮತ್ರಿ ಯಾರು ಎನ್ನುವ ಪ್ರಶ್ನೆಗೆ ಅನೇಕರು ಯೋಗಿ ಆದಿತ್ಯನಾಥ್‌ ಎಂದಿದ್ದಾರೆ. ಇನ್ನು ಸಮೀಕ್ಷೆಯ ಪ್ರಕಾರ, ಶೇಕಡಾ 54 ರಷ್ಟು ಜನರು ಆದಿತ್ಯನಾಥ್ ಅವರ ಮತಾಂತರ ವಿರೋಧಿ ಕಾನೂನನ್ನು ಬೆಂಬಲಿಸಿದರೆ, 58 ಪ್ರತಿಶತದಷ್ಟು ಜನರು ಅಂತರ್ ಧರ್ಮದ ವಿರುದ್ಧದ ಕಾನೂನುಗಳ ವಿರುದ್ಧ ಮತ ಚಲಾಯಿಸಿದ್ದಾರೆ.
ಯೋಗಿ ಆದಿತ್ಯನಾಥ್ ತಂದಿರುವ ಕಾನೂನುಗಳಿಗೂ ಸಮೀಕ್ಷೆಯಲ್ಲಿ ಮನ್ನಣೆ ಸಿಕ್ಕಿದೆ. ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್‌ , ಯುವ ನೇತಾರ ಕೂಡ ಹೌದು. ಬಿಜೆಪಿಯ ಫೈರ್‌ಬ್ರಾಂಡ್‌ ಅಂತಲೇ ಖ್ಯಾತಿ ಕೂಡ ಪಡೆದಿದ್ದಾರೆ. 2107ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದು ಯೋಗಿ ಆದಿತ್ಯನಾಥ್‌ ಸಿಎಂ ಆಗಿ ಆಯ್ಕೆಯಾಗಿದ್ದರು, ತದ ನಂತರ ಹಲವು ಕಾನೂನು ಸುವ್ಯವಸ್ಥೆ ಸಂಬಂಧ ಕಠಿಣ ನಿಲುವುಗಳನ್ನು ಕೈಗೆತ್ತಿಕೊಂಡಿದ್ದರು. ಇನ್ನು ಸರಕಾರದ ಬಗ್ಗೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿದರು ಕೂಡ ಅವರು ಜನಪ್ರಿಯತೆ ಕಮ್ಮಿಯಾಗಿಲ್ಲ.
ಇನ್ನು ಸಮೀಕ್ಷೆಯ ಪ್ರಕಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶೇ 14 ರಷ್ಟು ಮತಗಳನ್ನು ಗಳಿಸುವ ಮೂಲಕ ಎರಡನೇ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಅವರ ನಂತರ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಜೆಡಿಯು ಕಳಪೆ ಸಾಧನೆ ತೋರಿದ್ದರೂ ಸತತ ನಾಲ್ಕನೇ ಅವಧಿಗೆ ಬಿಹಾರ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ 6 ಶೇಕಡಾ ಮತಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ, ನಂತರ ಜಗನ್‌ ಮೋಹನ್‌ ರೆಡ್ಡಿ ಐದನೇ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here