ರಾಬರ್ಟ್ ಸಿನಿಮಾ ಬಡವರಿಗಲ್ಲ..!?

0
77

ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಇದೆ ಮಹಾಶಿವರಾತ್ರಿ ಪ್ರಯುಕ್ತ ಗುರುವಾರದಂದು ಬಿಡುಗಡೆಯಾಗುತ್ತಿದೆ. ಕೊರೋನಾವೈರಸ್ ಎಫೆಕ್ಟ್ನಿಂದ ಮುಚ್ಚಿದ್ದ ಚಿತ್ರಮಂದಿರಗಳನ್ನು ಮತ್ತೆ ತೆರೆಯಲಾಗಿದೆ. ನಿರೀಕ್ಷೆಯಂತೆ ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರಗಳನ್ನು ವೀಕ್ಷಿಸಲು ಜನರು ಚಿತ್ರಮಂದಿರಗಳಿಗೆ ಬಂದಿದ್ದರು. ಇನ್ನು ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕೂ ಸಹ ಇದೇ ರೀತಿ ಅಭಿಮಾನಿಗಳು ಬರಲಿದ್ದಾರೆ ಎಂಬ ನಂಬಿಕೆ ಎಲ್ಲರಲ್ಲಿಯೂ ಇದೆ ಯಾಕೆಂದರೆ ಇದು ದರ್ಶನ್ ಅವರ ಸಿನಿಮಾ ಅವರಿಗೆ ಅಪಾರವಾದ ಅಭಿಮಾನಿ ಬಳಗ ಇದೆ ಹೀಗಾಗಿ ಚಿತ್ರಮಂದಿರಗಳು ಹೌಸ್ ಫುಲ್ ಆಗಲಿದೆ ಎಂಬುದರಲ್ಲಿ ಯಾವುದೇ ಡೌಟ್ ಇಲ್ಲ.

 

 

ಇನ್ನು ರಾಬರ್ಟ್ ಚಿತ್ರದ ಮುಂಗಡ ಬುಕ್ಕಿಂಗ್ ಈಗಾಗಲೇ ಬುಕ್ ಮೈ ಶೋ ಅಪ್ಲಿಕೇಶನ್ ನಲ್ಲಿ ಆರಂಭವಾಗಿತ್ತು ಚಿತ್ರವನ್ನು ಬುಕ್ ಮಾಡಲು ತೆರಳಿದವರಿಗೆ ಕೊಂಚ ನಿರಾಸೆ ಉಂಟಾಗುವುದಂತೂ ನಿಜ ಏಕೆಂದರೆ ಮಲ್ಟಿಪ್ಲೆಕ್ಸ್ ಗಳಲ್ಲಿ ರಾಬರ್ಟ್ ಚಿತ್ರದ ಟಿಕೆಟ್ ರೇಟ್ ಬರೋಬ್ಬರಿ 300 ರಿಂದ 500!!  ಹೌದಾ ಮಲ್ಟಿಫ್ಲೆಕ್ಸ್ ಗಳಲ್ಲಿ 200 ರೂ ಇದ್ದ ಟಿಕೆಟ್ ಗಳ ಬೆಲೆಯನ್ನು ರಾಬರ್ಟ್ ಚಿತ್ರಕ್ಕೆ 400 & 500 ರೂ ಗೆ ಏರಿಸಲಾಗಿದೆ. ಇನ್ನು ಈ ಹಿಂದೆ 150 ರೂ ಇದ್ದ ಟಿಕೆಟ್ ಗಳ ಬೆಲೆಯನ್ನು 300 ರೂಪಾಯಿಗಳಿಗೆ ಏರಿಸಲಾಗಿದೆ..!!

 

 

ಅಂದರೆ ಈ ಹಿಂದೆ ಇದ್ದ ಟಿಕೆಟ್ ಬೆಲೆ ಗಿಂತ ಎರಡರಷ್ಟು ಟಿಕೆಟ್ ಬೆಲೆಯನ್ನು ರಾಬರ್ಟ್ ಚಿತ್ರತಂಡ ಹೆಚ್ಚಿಸಿದೆ. ಇದು ಮಲ್ಟಿಫ್ಲೆಕ್ಸ್ ಕತೆಯಾದರೆ ಇನ್ನು ಸಾಮಾನ್ಯ ಜನ ನೋಡುವಂತಹ ಸಿಂಗಲ್ ಸ್ಕ್ರೀನ್ ಗಳಲ್ಲಿಯೂ ಸಹ ಇದೇ ಹಣೆಬರಹ ಈ ಹಿಂದೆ ಇದ್ದ ಟಿಕೆಟ್ ರೇಟ್ ಗಿಂತ ಅತಿ ಹೆಚ್ಚಳವಾಗಿದೆ. ಸಿಂಗಲ್ ಸ್ಕ್ರೀನ್ ಗಳಲ್ಲಿ ರಾಬರ್ಟ್ ವೀಕ್ಷಿಸಬೇಕೆಂದರೆ ಬಾಲ್ಕನಿಗೆ 200 & ಸೆಕೆಂಡ್ ಕ್ಲಾಸ್ ಗೆ 150 ರೂಪಾಯಿ ಕೊಡಲೇಬೇಕು..!!!

 

 

ಕೊರೋನಾವೈರಸ್ ನಂತರ ಬಿಡುಗಡೆಯಾದ ಯಾವ ಚಿತ್ರದ ಟಿಕೆಟ್ ರೇಟ್ ಗಳಲ್ಲಿಯೂ ಸಹ ಇಷ್ಟು ದೊಡ್ಡ ಮಟ್ಟದ ಏರಿಕೆ ಆಗಿರಲಿಲ್ಲ. ರಾಬರ್ಟ್ ಚಿತ್ರತಂಡ ಮಾತ್ರ ಯಾಕೆ ಟಿಕೆಟ್ ರೇಟ್ ಗಳನ್ನು ಎರಡರಷ್ಟು ಹೆಚ್ಚಿಸಿದೆ? ಸಿನಿಮಾ ಮೇಲೆ ನಂಬಿಕೆ ಹೋಯ್ತಾ? ಹೀಗಾಗಿ ಟಿಕೆಟ್ ರೇಟ್ ಹೆಚ್ಚಿಸಿ ಕಡಿಮೆ ದಿನಗಳಲ್ಲಿ ಹಾಕಿದ್ದ ದುಡ್ಡನ್ನು  ಹೇಗಾದರೂ ಮಾಡಿ ಎತ್ತಿಕೊಂಡು ಬಿಡೋಣ ಎನ್ನುವ ಪ್ಲಾನ್ ಮಾಡಿದೆಯಾ ಚಿತ್ರತಂಡ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

 

 

ದರ್ಶನ್ ಅವರಿಗೆ ಅಪಾರವಾದ ಅಭಿಮಾನಿ ಬಳಗವಿದೆ ಎಂಬ ಮಾತನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ ಹೀಗಿದ್ದ ಮೇಲೆ ಅವರ ಚಿತ್ರಕ್ಕೆ ಇಷ್ಟು ದೊಡ್ಡ ಮಟ್ಟದಲ್ಲಿ ಟಿಕೆಟ್ ರೇಟ್ ಹೆಚ್ಚಿಸುವ ಅಗತ್ಯವಿದೆಯೇ? ಕನ್ನಡ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಕ್ಕೆ ಬರಲ್ಲ ಎಂದು ಗೋಳಾಡುವ ಮುನ್ನ ಈ ರೀತಿ ಟಿಕೆಟ್ ರೇಟ್ ಹೆಚ್ಚಿಸುವ ಕುತಂತ್ರವನ್ನು ತಗ್ಗಿಸಿ ತಿಂದರೆ ಒಳ್ಳೆಯದು ಎಂಬುದು ನೆಟ್ಟಿಗರ ಮಾತುಗಳು..

 

LEAVE A REPLY

Please enter your comment!
Please enter your name here