No menu items!
13.9 C
Munich
Wednesday, April 29, 2026

ಯುವ ನಿರ್ದೇಶಕರಿಗೆ ಚಾನ್ಸ್ ಕೊಡಲ್ವ ದರ್ಶನ್?

Must read

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಟ ದರ್ಶನ್ ಅವರು ಯುವ ನಿರ್ದೇಶಕನೊಬ್ಬ ತಮಗೆ ಸಿನಿಮಾ ಮಾಡಲು ಕಥೆ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡು ಬಂದಿದ್ದ ವಿಚಾರವನ್ನ ಹಂಚಿಕೊಂಡಿದ್ದರು. ಹೀಗೆ ದರ್ಶನ್ ಅವರಿಗೆ ಸಿನಿಮಾ ಮಾಡಬೇಕೆಂದು ಆಸೆ ಇಟ್ಟುಕೊಂಡು ಬಂದಿದ್ದ ಆ ಯುವ ನಿರ್ದೇಶಕ ನಾನು ರಾಜಮೌಳಿ ಅವರ ಬಳಿ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದ.

 

 

ಇದಕ್ಕೆ ಉತ್ತರಿಸಿದ ದರ್ಶನ್ ಅವರು ನೀನು ನಿಜವಾಗಲೂ ರಾಜಮೌಳಿ ಅವರ ಜೊತೆ ಕೆಲಸ ಮಾಡಿದ್ದರೆ ಅವರ ಬಳಿ ನನಗೊಂದು ಕಾಲ್ ಮಾಡಿ ತದನಂತರ ನಾನು ನಿನ್ನ ನಿರ್ದೇಶನದಲ್ಲಿ ಅಭಿನಯಿಸುತ್ತೇನೆ ಎಂದು ಹೇಳಿದ್ದರು. ಹೀಗೆ ಕಥೆ ಹೇಳಲು ಬಂದ ಆ ಯುವ ನಿರ್ದೇಶಕನ ಕಥೆಯನ್ನು ಸಂಪೂರ್ಣ ಕೇಳದೆ ದರ್ಶನ್ ಅವರು ಕಳುಹಿಸಿದ್ದರಂತೆ. ಈ ವಿಷಯವನ್ನ ಸ್ವತಃ ದರ್ಶನ್ ಅವರು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

 

 

ಇದೀಗ ಈ ವಿಷಯ ಬಹಳ ಚರ್ಚೆಗೆ ಗ್ರಾಸವಾಗಿದ್ದು ಸಿನಿಮಾ ಮಾಡುವ ಕನಸನ್ನು ಇಟ್ಟುಕೊಂಡು ಬಂದಿದ್ದ ಯುವ ನಿರ್ದೇಶಕನ ಕನಸಿಗೆ ತಣ್ಣೀರು ಎರಚಿತ್ತು ಎಷ್ಟು ಸರಿ ಎಂದು ದರ್ಶನ್ ಅವರ ವಿರುದ್ಧ ಮಾತನಾಡುತ್ತಿದ್ದಾರೆ ನೆಟ್ಟಿಗರು. ಸಿನಿಮಾ ಮಾಡಬೇಕು ಎಂದು ಕನಸು ಕಾಣುವ ಯುವ ನಿರ್ದೇಶಕರಿಗೆ ಬೆಂಬಲ ನೀಡದ ದರ್ಶನ್ ಅವರ ನಡೆ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article