No menu items!
28.1 C
Munich
Thursday, June 18, 2026

ರಾಮಲಲ್ಲಾ ಬಗ್ಗೆ ತಮ್ಮ ಸಂತಸ ಹಂಚಿಕೊಂಡ ನವರಸ ನಾಯಕ !

Must read

ಶ್ರೀ ರಾಮ ಪ್ರಾಣ ಪ್ರತಿಷ್ಟಾಪನೆ ಆಗುತ್ತಿರುವ ಹಿನ್ನಲೆ ಎಲ್ಲೆಡೆ ರಾಮ‌ಲಲ್ಲಾನ ವಿಗ್ರಹ ಫೋಟೊ ಸಖತ್ ವೈರಲ್ ಆಗಿದೆ. ಈ ಬಗ್ಗೆ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನ ಹಂಚಿಕೊಂಡಿದ್ದಾರೆ.

“ದಶಾವತಾರ, ಸ್ವಸ್ಥಿಕ್, ಓಂ,ಗಧ,ಸೂರ್ಯ
ಶೋಭಿತ ರಾಮ ನಮ್ಮ ಕರುನಾಡ ಶಿಲ್ಪಿ ಕನ್ನಡನಾಡಿನ ಕೃಷ್ಣ ಶಿಲೆ ಇದಕ್ಕಿಂತ ಯೋಗ ಬೇಕ. 560 ವರ್ಷದ ಹಿಂದೆ ಆಕ್ರಮಣಕಾರರ ಕ್ರೋಧಕ್ಕೆ ರಾಮ ನಿರ್ನಾಮವಾಗಿದ್ದ!!
ಸ್ವತಂತ್ರ ಬಂದಾಗ ಮತ್ತೆ ಸ್ಥಾಪನೆ ಆಗುವ ಎಂಬ ಕನಸು ಕನಸಾಗೆ ಉಳಿಯಿತು..ಅನ್ಯರ ಓಲೈಕೆ ಬಯಕೆಗಾಗಿ ನಮ್ಮ ಶ್ರೀರಾಮನ ಸ್ಥಾಪನೆ ಬಯಕೆಯಾಗಿ ಉಳಿಯಿತು!


1990ರಲ್ಲಿ ರಾಮನ ಪುನರಾಗಮನದ ಕನಸು ಚಿಗುರಿತು 2024ಕ್ಕೆ ರಾಮನ ಸ್ಥಾಪನೆಯ ದಿನ ಬಂದೆ ಬಿಟ್ಟಿತು..
ಯಾರು ಇಂಥ ಕಾರ್ಯ ಮಾಡಿದರು ಅವರನ್ನ ರಾಮನೆ ಆಯ್ಕೆಮಾಡಿಕೊಂಡ
ಅವರೆ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ (narendramodi)
ಮಾನ್ಯರೆ ಇಂಥ ಸಮಯದಲ್ಲಿ ನಾವು ಭಾರತೀಯರು ಹೆಮ್ಮೆಪಡಬೇಕು ಒಮ್ಮತವಾಗಿ ಒಪ್ಪ ಬೇಕು. ಇತಿಹಾಸ ಮೆಲುಕುಹಾಕಿ ನೋಡಿ ನಮ್ಮ ನಿಮ್ಮ ಪೂರ್ವಜರು ರಾಮನ ಸ್ಥಾನ ಪಲ್ಲಟಮಾಡಿದಾಗ ಎಷ್ಟು ನೊಂದಿದ್ದಾರೆ ಎಷ್ಟು ನಿಸ್ಸಹಾಯಕರಾಗಿ ಅತ್ತಿದ್ದಾರೆ ಎಷ್ಟು ಜನ ಪ್ರಾಣ ಬಿಟ್ಟಿದ್ದಾರೆ!!
ಇಂದು ನಮ್ಮಗಳಿಗೆ ಮಾತ್ರವಲ್ಲಾ ನಮ್ಮ ಪೂರ್ವಜರ ಆತ್ಮಕ್ಕು ಆನಂದವಾಗುತ್ತದೆ..
ಮಾನ್ಯರೆ ನಮ್ಮ ಮತ್ತು ನಮ್ಮ ಪೂರ್ವಜರ ಸಂತೋಷಕ್ಕಾಗಿ ಧರ್ಮಕ್ಕಾಗಿ ಆತ್ಮಸಂತೋಷಕ್ಕಾಗಿ ನಮ್ಮ ತನಕ್ಕಾಗಿ
ಜನವರಿ 22ಕ್ಕೆ ಶ್ರೀರಾಮನ ಪಟ್ಟಾಭಿಷೇಕ ಭಕ್ತಿಯಿಂದ ಭಜಿಸುತ್ತಾ ಬರಮಾಡಿಕೊಳ್ಳುವ ” ಎಂದು ಬರೆದುಕೊಂಡಿದ್ದಾರೆ.

- Advertisement -spot_img

More articles

- Advertisement -spot_img

Latest article