ಇಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವೂ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. 2 ವಿಕೆಟ್ ನಷ್ಟಕ್ಕೆ ಕೇವಲ 6.3 ಓವರ್ನಲ್ಲಿ ಸ್ಕಾಟ್ಲೆಂಡ್ ನೀಡಿದ ಟಾರ್ಗೆಟ್ 89 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಈ ಮೂಲಕ ತನ್ನ ಸೆಮಿ ಫೈನಲ್ ಆಸೆ ಜೀವಂತವಾಗಿರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ 17.4 ಓವರ್ನಲ್ಲಿ 85 ರನ್ಗೆ ಆಲೌಟ್ ಆಗಿತ್ತು. ಸ್ಕಾಟ್ಲೆಂಡ್ ಪರ ಜಾರ್ಜ್ ಮಾಂಜಿ 24, ಕ್ಯಾಲಮ್ ಮೆಕ್ಲಿಯೋಡ್ 16, ಮೈಕೆಲ್ ಲೀಸ್ಕ್ 21 ರನ್ ಗಳಿಸಿದ್ದಾರೆ. ಇವರ ನೆರವಿನಿಂದ ಸ್ಕಾಟ್ಲೆಂಡ್ ಕೇವಲ 85 ರನ್ ಗಳಿಸಿದೆ. ಈ ಮೂಲಕ ಭಾರತಕ್ಕೆ ಸ್ಕಾಟ್ಲೆಂಡ್ 86 ರನ್ ಟಾರ್ಗೆಟ್ ನೀಡಿತ್ತು. ಈಗ ಭಾರತ ಕೇವಲ 7 ಓವರ್ನಲ್ಲಿ ಮ್ಯಾಚ್ ಮುಗಿಸಿದೆ.
ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 30, ಕೆ.ಎಲ್ ರಾಹುಲ್ 50 ರನ್ ಗಳಿಸಿದರು.
buy lipitor 10mg pills atorvastatin 20mg canada order lipitor 10mg generic