No menu items!
9.3 C
Munich
Wednesday, April 29, 2026

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಇಂದು ನ್ಯಾಯಾಲಕ್ಕೆ ಹಾಜರಾಗಲಿರುವ ದರ್ಶನ್ ಆ್ಯಂಡ್ ಟೀಂ

Must read

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಇಂದು ನ್ಯಾಯಾಲಕ್ಕೆ ಹಾಜರಾಗಲಿರುವ ದರ್ಶನ್ ಆ್ಯಂಡ್ ಟೀಂ

 

ಬೆಂಗಳೂರು: ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳು ಇಂದು ಬೆಂಗಳೂರು ನಗರ 57ನೇ ಸಿಸಿಹೆಚ್ (CCH) ಕೋರ್ಟ್ಗೆ ಹಾಜರಾಗಲಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ,

ಆರೋಪಿಗಳು ಪ್ರತೀ ತಿಂಗಳು ಕೋರ್ಟ್ಗೆ ಹಾಜರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ನಂತರ ದರ್ಶನ್ ಹಾಗೂ ಅವರ ತಂಡ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಗೌಡ ಮತ್ತು ಇತರ ಆರೋಪಿಗಳ ವಿರುದ್ಧ ಗಂಭೀರ ಆರೋಪಗಳಿದ್ದು, ಈ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ. ಹತ್ಯೆ ಆರೋಪ ಪ್ರಕರಣದಲ್ಲಿ ತನಿಖೆ ಮುಂದುವರಿದಿರುವಾಗ, ನ್ಯಾಯಾಲಯದ ಹಾಜರಾತಿ ಪ್ರಕ್ರಿಯೆ ಪ್ರಸ್ತುತ ಸಿಕ್ಕಿರುವ ಪ್ರಮುಖ ಹಂತವಾಗಿದೆ.

- Advertisement -spot_img

More articles

- Advertisement -spot_img

Latest article