No menu items!
14.6 C
Munich
Tuesday, May 5, 2026

ವಿಜಯಪುರ ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ

Must read

ವಿಜಯಪುರ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಕಳೆದ ಆಗಸ್ಟ್ನಲ್ಲೇ ಮಹಾನಗರ ಪಾಲಿಕೆ ಹಾಗೂ ಪುರಾತತ್ವ ಇಲಾಖೆ ಆಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ ಕ್ರಮ ತೆಗೆದುಕೊಳ್ಳದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ವರು ಪುಟ್ಟ ಮಕ್ಕಳಳನ್ನು ಕಚ್ಚಿದ್ದ ಬೀದಿ ಬದಿಯ ನಾಯಿಗಳು ಮಂಗಳವಾರ ಸಹ ತಮ್ಮ ಅಟ್ಟಹಾಸವನ್ನು ಮುಂದುವರೆಸಿವೆ. ಮಂಗಳವಾರ ಮೂವರು ಮಕ್ಕಳನ್ನು ಕಚ್ಚಿದ್ದು ಜನರು ಭಯಗೊಳ್ಳುವಂತಾಗಿದೆ.
ನಗರದ ಬಡೀ ಕಮಾನ್, ಬಾಗಾಯತ್ ಗಲ್ಲಿ, ಬಾಂಗೀ ಆಸ್ಪತ್ರೆ ಬಳಿ, ದೌಲತ್ ಕೋಟೆ, ಹಕೀಂ ಚೌಕ್ ನ ಸುತ್ತಮುತ್ತ ಬೀದಿಬದಿಯ ನಾಯಿಗಳ ಕಾಟ ಜೋರಾಗಿದೆ. ಶಾಲೆಗೆ ಹೋಗುವ 8 ವರ್ಷದೊಳಗಿನ ಮಕ್ಕಳನ್ನೇ ಗುರಿಯಾಗಿಸೋ ಬೀದಿ ನಾಯಿಗಳು ಮಕ್ಕಳನ್ನು ಮನಬಂದಂತೆ ಕಚ್ಚಿ ಗಾಯಗೊಳಿಸಿವೆ. ಮನೆಯಾಚೆ ಅಂಗಡಿಗೆ ಹೋಗುವಾಗಲೂ ನಾಯಿಗಳು ಅಟ್ಯಾಕ್ ಮಾಡಿವೆ. ನಿನ್ನೆ ನಾಲ್ಕು ಪುಠಾಣಿಗಳ ಮೇಲೆ ಕ್ರೌರ್ಯ ಮಾಡಿದ್ದ ಬೀದಿನಾಯಿಗಳು ಇಂದು ಮತ್ತೇ ಮೂವರು ಮಕ್ಕಳನ್ನು ಕಚ್ಚಿವೆ. ಬೀದಿನಾಯಿಗಳ ದಾಳಿಗೆ ಈ ಭಾಗದ ಮಕ್ಕಳು ಶಾಲೆಗೆ ಹೋಗಲು ಸಹ ಭಯಪಡುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article