No menu items!
18.6 C
Munich
Tuesday, April 28, 2026

ಶಾಲೆ ಆರಂಭ; ಭಾನುವಾರವೂ ಇರುತ್ತಾ ಕ್ಲಾಸ್‌ಗಳು?

Must read

ಪಠ್ಯ ಪೂರ್ಣಗೊಳಿಸಲು ಭಾನುವಾರವೂ ಶಾಲೆ ನಡೆಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಪಠ್ಯ ಕಡಿತಗೊಳಿಸುವುದಿಲ್ಲ ಮತ್ತು ಭಾನುವಾರ ಶಾಲೆ ಇರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.

ಪಠ್ಯ ಕಡಿತ ಮಾಡುವುದು ಬೇಡವೆಂದು ಶಿಕ್ಷಕರು ಸಲಹೆ ನೀಡಿದ್ದಾರೆ. ಹೀಗಾಗಿ ಸದ್ಯಕ್ಕೆ ಪಠ್ಯ ಕಡಿತ ಮಾಡದಿರಲು ತೀರ್ಮಾನಿಸಲಾಗಿದೆ. ಪೂರ್ಣ ಪಠ್ಯ ಬೋಧನೆ ಮಾಡಲಾಗುವುದು. ಆದರೆ, ಸಮಯವಿರುವುದರಿಂದ ಪಠ್ಯ ಪೂರ್ಣಗೊಳಿಸಲು ಭಾನುವಾರವೂ ರಜೆ ರದ್ದುಗೊಳಿಸಿ ತರಗತಿ ನಡೆಸುವ ಆಲೋಚನೆ ಇಲ್ಲ. ಶನಿವಾರ ಅರ್ಧದಿನ ಮತ್ತು ಭಾನುವಾರ ಶಾಲೆಗಳಿಗೆ ರಜೆ ಇರುತ್ತದೆ. ಇರುವ ಅವಧಿಯಲ್ಲಿ ಪಠ್ಯ ಪೂರ್ಣಗೊಳಿವುದಾಗಿಶಿಕ್ಷಕರು ಹೇಳಿದ್ದಾರೆ. ಮುಂದಿನ ವರ್ಷಗಳಲ್ಲಿ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಪಠ್ಯ ಕಡಿತಗೊಳಿಸದೇ ಪೂರ್ಣಪಠ್ಯ ಬೋಧನೆ ಮಾಡಲಾಗುವುದು ಎಂದು ಹೇಳಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article