No menu items!
11.1 C
Munich
Wednesday, April 29, 2026

ಸಂಜನಾ ಬಂದ್ರು, ಬೂಮ್ರಾ ಎಲ್ಲಿ?

Must read

ಭಾರತ ತಂಡದ ಸ್ಟಾರ್‌ ವೇಗದ ಬೌಲರ್‌ ಗೋವಾದಲ್ಲಿ ಮಾರ್ಚ್ 15ರಂದು ನಡೆದ ಖಾಸಗಿ ಸಮಾರಂಭದಲ್ಲಿ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್‌ ಅವರನ್ನು ವಿವಾಹವಾಗಿದ್ದರು. ಇದರಿಂದಲೇ ಭಾರತ ಕ್ರಿಕೆಟ್‌ ತಂಡದ ಸೇವೆಯಿಂದ ದೂರ ಉಳಿದಿದ್ದಾರೆ.

ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಒಳಗೊಂಡಂತೆ ಕೇವಲ 20 ಜನರ ಸಮ್ಮುಖದಲ್ಲಿ ಜಸ್‌ಪ್ರೀತ್‌ ಮತ್ತು ಸಂಜನಾ ಅವರ ವಿವಾಹ ಮಹೋತ್ಸವ ನಡೆದಿತ್ತು.

ಅಂದಹಾಗೆ ವಿವಾಹವಾದ ಎರಡೇ ವಾರದಲ್ಲಿ ಕ್ರೀಡಾ ನಿರೂಪಕಿ ಸಂಜನಾ ಗಣೆಶನ್ ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ. ಶುಕ್ರವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್‌ ನಡುವಣ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ 2ನೇ ಹಣಾಹಣಿಗೆ ಸಂಜನಾ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಗೆ ನಿರೂಪಣೆ ಕೆಲಸ ನಿಭಾಯಿಸಿದ್ದರು.

ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಮಾಜಿ ಕ್ರಿಕೆಟಿಗರಾದ ವಿವಿಎಸ್‌ ಲಕ್ಷ್ಮಣ್ ಮತ್ತು ಇರ್ಫಾನ್ ಪಠಾಣ್‌ ಅವರೊಟ್ಟಿಗೆ ಸಂಜನಾ ಕಾಣಿಸಿಕೊಳ್ಳುತ್ತಿದ್ದಂತೆಯೇ ಚುರುಕಾದ ಅಭಿಮಾನಿಗಳು, ಸೋಷಿಯಲ್‌ ಮೀಡಿಯಾದಲ್ಲಿ ಬುಮ್ರಾ ಎಲ್ಲಿ? ಎಂದು ಪ್ರಶ್ನೆ ಮಾಡಿದ್ದಾರೆ. ಸಂಜನಾ ಕೆಲಸಕ್ಕೆ ಮರಳಿ ಆಗಿದೆ, ಜಸ್‌ಪ್ರೀತ್‌ ಎಲ್ಲಿದ್ದಾರೆ? ಒಬ್ಬರೇ ಹನಿಮೂನ್ ನಾಡಿಕೊಳ್ಳುತ್ತಿದ್ದಾರ ಹೇಗೆ? ಎಂದೆಲ್ಲಾ ಫ್ಯಾನ್ಸ್‌ ಟೀಮ್ ಇಂಡಿಯಾ ವೇಗಿಯ ಕಾಲನ್ನು ಎಳೆದಿದ್ದಾರೆ.

ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯದಿಂದಲೇ ಟೀಮ್ ಇಂಡಿಯಾ ಸೇವೆಯಿಂದ ದೂರ ಉಳಿದ ಬುಮ್ರಾ, ಮುಂಬರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಹಿಂದಿರುಗುವ ಸಾಧ್ಯತೆ ಇದೆ. ಏಪ್ರಿಲ್ 9ರಂದು ನಡೆಯಲಿರುವ ಐಪಿಎಲ್‌ 2021 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರು ಮುಂಬೈ ಇಂಡಿಯನ್ಸ್‌ ಪರ ಬುಮ್ರಾ ಕಣಕ್ಕಿಳಿಯುವ ಸಾಧ್ಯತೆ ಇದೆ.

ಸಂಜನಾ ಗಣೇಶನ್‌, ಇಂಗ್ಲೆಂಡ್‌ ವಿರುದ್ಧದ ಸರಣಿ ನಂತರ ಇಂಡಿಯನ್ ಪ್ರೀಮಿಯರ್‌ ಲೀಗ್‌ಗೆ ಸಜ್ಜಾಗಲಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ನಿರೂಪಕಿಯಾಗಿ ಸಂಜನಾ ಕೆಲಸ ಮಾಡುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article